ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ೧೦೫ ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ನಗರದ ಎಪಿಎಂಸಿ ಟೆಂಡರ್ ಹಾಲ್ ನಲ್ಲಿ ನಡೆಸಲಾಯಿತು. ಕಾರ್ಪೋರೇಟ್ ಬಂಡವಾಳದ ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಸರಕಾಗಿಸಿ, ತನ್ನ ಲಾಭಕ್ಕಾಗಿ ಜಾಹಿರಾತುಗಳಿಗೆ ಬಳಸುವದು ಖಂಡನಾರ್ಹ, ಪ್ರತಿಯೊಂದು ಮಾರುಕಟ್ಟೆ ಸರಕು ಹೆಣ್ಣಿನ ಸೌಂದರ್ಯದೊಂದಿಗೆ ಆಕರ್ಷಿಸುತ್ತಾ ಆರೆ ಭತ್ತಲುಗೊ

ಳಿಸಿ ಆಶ್ಲೀಲ ಮನಸ್ಸುಗಳಿಗೆ ಪುಷ್ಟಿ ನೀಡಲಾಗುತ್ತಿದೆ. ಅಂತರ್ಜಾಲದಲ್ಲಿ ಲೈಂಗಿಕ ದೃಶಗಳನ್ನು ಭಿತ್ತರಿಸುತ್ತಿದ್ಧು, ಮಹಿಳೆ ಮತ್ತು ಮಕ್ಕಳನ್ನು ಘಾಸಿಗೋಳಿಸಲಾಗುತ್ತದೆ. ಯಾವುದೊಂದು ಮಗು ಇವತ್ತು ಅಂತರಜಾಲದ ದುರಾಕ್ರಮಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

    ಸಾಮ್ರಾಜ್ಯಶಾಹಿ ತನ್ನ ಹಿಡಿತ ಗಟ್ಟಿಗೊಳಿಸಲು ಅಂತರಜಾಲ, ಮೂಡನಂಬಿಕೆ, ಊಳಿಗಮಾನ್ಯಶಾಹಿ ಮೌಲ್ಯಗಳ ರಕ್ಷಣೆ ಮಾಡುವ ಅಸ್ರ್ತಗಳ ಮೂಲಕ ಶೋಷಣೆಗೊಳಗಾದ ದೊಡ್ಡ ಭಾಗವಾದ ಮಹಿಳೆಯರು ಐಕ್ಯತೆಗೊಳ್ಳದಂತೆ ಮಾಡಲಾಗಿದೆ. ಮೌಲ್ಯಯುತ ಮತ್ತು ಸಂಸ್ಕಾರಯುತ ಜೀವನ ನಡೆಸಿದರೆ, ಮಾರುಕಟ್ಟೆ ಲಾಭಗಳಿಕೆ ಪೆಟ್ಟು ಬಿದ್ಧು, ಬಂಡವಾಳಶಾಹಿ ವವ್ಯಸ್ಥೆ ಅಸ್ತಿತ್ವ ಕದಲುವ ಆತಂಹಕದಿಂದ ಮೀಸಲಾತಿ ಮುಂತಾದ ಮೂಲ ಸೌಕರ್ಯ ಮಾಡಲಾಗುತ್ತದೆ. ವವ್ಯಸ್ತೆಯಲ್ಲಿ ಕೆಲವರನ್ನಷ್ಟೆ ಮುಂದಿಟ್ಟು ಮಾದರಿ ವವ್ಯಸ್ಥೆ ನಿರ್ಮಾಣವಾಗಿದೆ ಎಂದು ಬಿಂಬಿಸಿ ರಾಜಕೀಯ ನಾಯಕ ಮಣಿಗಳನ್ನು ತೋರಿಸಿ ಭ್ರಮೆ ಹರಡಲಾಗುತ್ತಿದೆ. ಎಂದು ಮುಖ್ಯ ಅಥಿತಿಗಳಾಗಿ  ಏಖS  ರಾಜ್ಯಾಧ್ಯಕ್ಷರಾದ ಡಿ ಎಚ್ ಪೂಜಾರ ಮಾತನಾಡಿದರು.
       ಉತ್ಪಾದನ ಕ್ಷೇತ್ರ ಮತ್ತು ಸಂತಾನದ ಪಾಲನೆ ಶೋಷಣೆಯಲ್ಲಿ ಮುಂಚೂಣಿಯಲ್ಲಿರುವ ಮಹಿಳೆ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಮುಂತಾದ ಸಾರ್ವತ್ರಿಕ ಕ್ಷೇತ್ರಗಳಲ್ಲಿ ಹಿನ್ನಲೆಗೆ ತಳ್ಳಲಾಗಿದೆ. ಅಷ್ಟಿಷ್ಟು ಹಕ್ಕಗಳು ದಕ್ಕುತ್ತವೆಯಾದರು ಸುಧೀರ್ಘ ಕಾಲದಿಂದ ಮಹಿಳೆಯರು ಹೋರಾಡುತ್ತಾ ಬರುತ್ತಿದಕ್ಕಾಗಿ ವಿಮೋಚನೆ ಚಳುವಳಿ  ತೀವ್ರಗೊಳಿಸಬೇಕಾಗಿದೆ ಎಂದು ಸಿಪಿಐ(ಎಂಎಲ್) ನ ಜಿಲ್ಲಾ ಕಾರ್ಯದರ್ಶಿ ಕೆ ಬಿ ಗೋನಾಳ ಮಾತಾಡಿದರು.
AIRWO ಜಿಲ್ಲಾಧ್ಯಕ್ಷರಾದ ವಿದ್ಯಾ ನಾಲವಾಡ್, ರವರು ಅಧ್ಯಕ್ಷತೆವಹಿಸಿದ್ದರು, ದಿನಾಚರಣೆಯಲ್ಲಿ ರಾಜ್ಯ ಉಪಅಧ್ಯಕ್ಷರಾದ ಮಲ್ಲಿಕಾ ಪೂಜಾರ ದೇಶದಲ್ಲಿ ನಿರಂತರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಚಾರದ ವಿರುದ್ದ ಮತ್ತು ಪುರುಷ – ಮಹಿಳೆಯರ ಮದ್ಯೆ  ಅಂತರ ಹಚ್ಚಾಗುವಂತೆ ಪುರುಷ ವಿರೋಧಿಯಂತೆ ಚಿತ್ರಿಸಲಾಗುತ್ತಿದೆ. ಎಂದು ಮಾತಾನಾಡಿದರು. ಜಿಲ್ಲಾ ಸಮಿತಿ ಸದ್ಯಸರಾದ ಶಂಶುನ್ನಿಸ ಬೆಗಂ ಕಲೆಗಾರ, ದ್ಯಾಮಮ್ಮ ತಾವರಗೇರ, ಮಾತಾನಾಡಿದರು, ರೇಣುಕಮ್ಮ ಚವ್ಹಾಣ, ವಿದ್ಯಾರ್ಥಿನಿ ಮಹಾದೇವಿ  ಕಾರ್ಯಕ್ರಮ ನಿರೂಪಿಸಿದರು. ಕ್ರಾಂತಿಗೀತೆಗಳನ್ನು ಹಾಡಲಾಯಿತು. ದುಡಿಯುವ ವರ್ಗದ ತಾಂಡಾದ ಮಹಿಳೆಯರು, ಮಹಿಳಾ ಬೆಂಬಲಿಗಾರಾದ ರೇವಣಸಿದ್ದಪ್ಪ ಶಿವಪುರ, ಪಾಂಡಪ್ಪ ಆಚಾಲಪುರ, ಟಿಯುಸಿಐನ ಬಸವರಾಜ ನರೇಗಲ್, AIRSO ಜಿಲ್ಲಾದ್ಯಕ್ಷರಾದ ಹನುಮೇಶ ಪೂಜಾರ ಭಾಗವಹಿಸಿ ಮಾತಾನಾಡಿದರು.
Please follow and like us:

Leave a Reply