ಹೊಸಳ್ಳಿ ಬಂಧುಗಳಿಂದ ಉಚಿತ ಖತ್ನಾ ಶಿಬಿರ ಯಶಸ್ವಿ

ಕೊಪ್ಪಳ,ಏ,೦೬: ಇಲ್ಲಿನ ಹಿರಿಯ ನ್ಯಾಯವಾದಿ ಪೀರಾ ಹುಸೇನ್ ಹೊಸಳ್ಳಿ ಮತ್ತು ಅವರ ಸಹೋದರ ಡಾ.ಹಸನ್ ಅಲಿ ಆರ್. ನಿಂಗಾಪೂರ ರವರ ತಂದೆಯವರ ಸ್ಮರಣಾರ್ಥವಾಗಿ ಇತ್ತಿಚಿಗೆ ಫಿರ‍್ದೋಸ್ ನಗರ ಓಣಿಯಲ್ಲಿ ಸಾಮೂಹಿಕ ಉಚಿತ ಖತ್ನಾ ಶಿಬಿರ ಏರ್ಪಡಿಸಲಾಗಿತ್ತು.
   ನಗರದ ಯೂಸುಫಿಯಾ ಮಸೀದಿ ಪೇಶ್ ಇಮಾಮ್ ಮುಫ್ತಿ ಮೊಹಮ್ಮದ್ ನಜೀರ್ ಅಹಮ್ಮದ್ ಖಾದ್ರಿ-ವ-ತಸ್ಕೀನಿ ರವರು ಚಾಲನೆ ನೀಡಿ ಮಾತನಾಡಿ ಇದರ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಹಾಗೂ ವಿಶೇಷ ಪ್ರಾರ್ಥನೆ ನಡೆಸಿ ಶುಭ ಕೋರಿದ ಅವರು ಹೊಸಳ್ಳಿ ಬಂಧುಗಳು ಪ್ರತಿವರ್ಷ ತಮ್ಮ ತಂದೆಯ ಸ್ಮರಣಾರ್ಥವಾಗಿ ಈ ರೀತಿ ಉಚಿತ ಸಾಮೂಹಿಕ ಖತ್ನಾ ಕಾರ್ಯಕ್ರಮ ಮತ್ತು ಅವರಿಗೆ ಉಚಿತವಾಗಿ ಔಷಧಿ ಉಪಚಾರ ಬಟ್ಟೆಗಳನ್ನು ವಿತರಣೆ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ನುಡಿದರು. 
   ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಮಾತನಾಡಿ ಖತ್ನಾ ಧಾರ್ಮಿಕ ಅಷ್ಟೆಅಲ್ಲ ವೈಜ್ಞಾನಿಕ ಮಹತ್ವ ಪಡೆದಿದೆ ಇದರಿಂದ ಮಾರಕ ರೋಗಗಳ ಹರಡುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿ ಹೊಸಳ್ಳಿ ಬಂಧುಗಳ ಈ ಸಮಾಜ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
 ಇನ್ನೂರ್ವ ಮುಖ್ಯ ಅತಿಥಿ ಬಿಜೆಪಿಯ ಮುಖಂಡ ಸಂಗಪ್ಪ ಒಕ್ಕಳದ ಕೂಡಾ ಮಾತನಾಡಿದರು. ವೇದಿಕೆ ಮೇಲೆ ಅನೇಕ ಜನ ಮುಖಂಡರು, ಪದಾಧಿಕಾರಿಗಳು, ಪಂಚ ಕಮೀಟಿಯವರು ಮತ್ತಿತರರು ಪಾಲ್ಗೊಂಡಿದ್ದು ಯುವ ನಾಯಕ ಮುನೀರ್ ಸಿದ್ದಿಕಿ ಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Leave a Reply