ಶ್ರೀರಾಮ್ ಸೇನೆಯ ಸಂಘಟನೆಯನ್ನು ಕೂಡಲೇ ನಿಷೇಧಿಸಲು ಆಗ್ರಹ

ಶ್ರೀರಾಮ ಸೇನೆಯ ಕಾಯ೯ಕತ೯ರನ್ನು ಕೂಡಲೇ ಗಡಿಪಾರು ಮಾಡಬೇಕು
ಬಿಜಾಪೂರ ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ ಕಛೇರಿ ಅವರಣದಲ್ಲಿನ ಧ್ವಜ ಸ್ಥಂಭಕ್ಕೆ ಪಾಕ್ ಧ್ವಜಾರೋಹನ ಮಾಡಿದ ಶ್ರೀರಾಮ ಸೇನೆಯ ಕಾಯ೯ಕತ೯ರನ್ನು ಕೂಡಲೇ ಗಡಿಪಾರು ಮಾಡಬೇಕು. ಈ ಘಟನೆಯು ಭಾರತ ದೇಶ ತಲೆ ತಗ್ಗಿಸುವಂತದ್ದು ಇಂತಹ ಕೋಮುವಾದಿ ಗಲಭೆಗೆ ಪ್ರಚೋದನೆ ನೀಡಿ ಹಿಂದೂ ಮತ್ತು ಮುಸ್ಲಿಂ ಜನರ ನಡುವೆ ಅಶಾಂತಿಯನ್ನು ತಂದೊಡ್ಡಿ ಜನರಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತಿರುವ ಶ್ರೀರಾಮ್ ಸೇನೆಯ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು. ಧ್ವಜಾರೋಹಣ ಮಾಡಿರುವ ಸಂಘಟನೆಯ ಕಾಯ೯ಕತ೯ರನ್ನು ಕೂಡಲೇ ಈ ದೇಶದಿಂದ ಗಡಿಪಾರು ಮಾಡಬೇಕು. ಮತ್ತು ಈಗಿರುವ ಬಿಜೆಪಿ ಸರಕಾರ ಇಂತಹ ಕೋಮುವಾದಿ ಮತ್ತು ದೇಶ ವಿರೋಧಿ ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದು, ಕಾರಣ ಬಿಜೆಪಿ ಸಕಾ೯ರದ  ಮುಖ್ಯಮಂತ್ರಿಯಾದ ಶ್ರೀಯುತ ಸದಾನಂದಗೌಡ್ರು ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಬಿಜಾಪೂರ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀಯುತ ಮುರಗೇಶ ನಿರಾಣಿ ಮತ್ತು ಸಿಂಧಗಿ ಪಟ್ಟಣದ ಬಿಜೆಪಿ ಶಾಸಕನಾದ ಶ್ರೀಯುತ ರಮೇಶ ಬೂಸುನೂರು. ಇವರು ಸಂಪೂಣ೯ ಈ ದೇಶ ದ್ರೋಹಿ ಘಟನೆಯ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆಯನ್ನು ನೀಡಬೇಕೆಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕರಾದ  ಹನುಮಂತಪ್ಪ ಕೆ.ಮ್ಯಾಗಳಮನಿ ಜಿಲ್ಲಾ ಸಂಘಟನೆಯ ಸಂಚಾಲಕರಾದ  ಮೈಲಪ್ಪ ಎಮ್.ಬಿಸರಳ್ಳಿ ತಾಲ್ಲೂಕು ಸಂಚಾಲಕರಾದ  ಮಲ್ಲಿಕಾಜು೯ನ.ಬಿ.ಪೂಜಾರ. ತಾಲ್ಲೂಕ ಸಂಘಟನೆಯ ಸಂಚಾಲಕರಾದ  ಹೇಮರಾಜ. ವೀರಾಪೂರರವರು ಆಗ್ರಹಿಸಿದ್ದಾರೆ.
Please follow and like us:
error