ಬೊರ್‌ವೆಲ್ ಯಶಸ್ವಿ, ಕುವೆಂಪು ನಗರದ ನಾಗರಿಕರಲ್ಲಿ ಹರ್ಷ

ಕೊಪ್ಪಳ. ಇಲ್ಲಿನ ಕುವೆಂಪು ನಗರದ ಸಮರ್ಪಕ ಕುಡಿವ ನೀರು

ಯೋಜನೆ ಪೂರೈಕೆಗೆ ನಗರಸಭೆ ಕೊರೆಸಿದ ಸೋಮವಾರ ಬೊರ್‌ವೆಲ್ ಕೊರೆಸಿದ ಕಾಮಗಾರಿ ಯಶಸ್ವಿಯಾಗಿದ್ದು, ಇದರಿಂದ ಬಡಾವಣೆಯ ನಾಗರಿಕರ ಕುಡಿವ ನೀರಿನ ಸಮಸ್ಯೆ ಬಗೆಹರಿದಂತಾಗಿದೆ.

ಇಂದು ನಗರಸಭೆವತಿಯಿಂದ ಕೊರೆಸಲಾದ ಬೊರ್‌ವೆಲ್‌ನಿಂದ ೪ಇಂಚು ನೀರು ಬಂದಿದ್ದರಿಂದ ಸಹಜವಾಗಿಯೇ ಬಡಾವಣೆಯ ನಾಗರಿಕರಲ್ಲಿ ಹರ್ಷ ಮೂಡಿಸಿತು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಬಡಾವಣೆಯ ಪ್ರಮುಖರಾದ ವೀರಣ್ಣ ಸೊಂಡೂರ, ಶಿವಮೂರ್ತೆಪ್ಪ ಗುತ್ತಿ, ಮಲ್ಲೇಶ ಪೂಜಾರ, ತಿಪ್ಪೆಸ್ವಾಮಿ ಸೇರಿದಂತೆ ಬಡಾವಣೆಯ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಮ್ಮ ಬಡಾವಣೆಯ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿ, ಸಮಸ್ಯೆ  ಬಗೆಹರಿಸಿದ ಕೊಪ್ಪಳ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರನ್ನು ಹಾಗೂ ವಾರ್ಡನ ಸದಸ್ಯರನ್ನು ಕುವೆಂಪು ಬಡಾವಣೆಯ ನಾಗರಿಕರು ಮುಕ್ತವಾಗಿ ಅಭಿನಂಧಿಸಿದರು.

Leave a Reply