ಕಿನ್ನಾಳ ಸೇವಾ ವಿದ್ಯಾಲಯದಲ್ಲಿ ವಿಶ್ವವಿದ್ಯಾರ್ಥಿಗಳ ದಿನಾಚರಣೆ

ಕೊಪ್ಪಳ : ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ  ರ ಜನ್ಮದಿನವನ್ನು ವಿಶ್ವ ಸಂಸ್ಥೆಯು ವಿಶ್ವವಿದ್ಯಾರ್ಥಿಗಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದರ ಪ್ರಯುಕ್ತ ಕಿನ್ನಾಳದ ಸೇವಾ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್‍ಯಕ್ರಮವನ್ನು  ಭಗತ್‌ಸಿಂಗ್ ಹಮಾಲರ ಸಂಘದ ಅಧ್ಯಕ್ಷರಾದ ಬಸವರಾಜ ಚಿಲವಾಡಗಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ತಮ್ಮ ಜ್ಞಾನದಿಂದ ಇಡೀ ವಿಶ್ವದ ತುಂಬ ಖ್ಯಾತಿ ಪಡೆದಿದ್ದಾರೆ. ಅವರಿಗೆ ಗೌರವಿಸುವುದಕ್ಕಾಗಿಯೇ ವಿಶ್ವಸಂಸ್ಥೆ ಅವರ ಜನ್ಮದಿನಾಚರಣೆಯನ್ನು ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಅವರು ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದು ಹೇಳಿದರು.  ವಿದ್ಯಾರ್ಥಿಗಳ ಪ್ರತಿನಿಧಿ ಪದ್ಮಶ್ರೀ ಅನಿಸಿಕೆಗಳನ್ನು ಹಂಚಿಕೊಂಡಳು.
ವಿದ್ಯಾರ್ಥಿಗಳಿಗೆ ಅಬ್ದುಲ್ ಕಲಾಂರು ಮಾದರಿಯಾಗಿರುವಂಥವರು. ಸಾಧನೆಗೆ ಮಿತಿ ಇಲ್ಲ ಎಂದು ತೋರಿಸಿದವರು. ಅವರಂತೆಯೇ ವಿದ್ಯಾರ್ಥಿಗಳು ಸಾಧನೆ ತೋರಬೇಕು. ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು. ವಿಶ್ವದೆಲ್ಲೆಡೆ ತಮ್ಮ ಜ್ಞಾನದ ಮೂಲಕ ಗೌರವಯುತ ಸ್ಥಾನ ಪಡೆದಿರುವ ಕಲಾಂರವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸೇವಾ ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಹೇಳಿದರು. 
ವೇದಿಕೆಯ ಮೇಲೆ ಎಸ್ ಡಿ ಎಂಸಿ ಅಧ್ಯಕ್ಷರಾದ ನಿಂಗಪ್ಪ ಹಳೆಪೇಟೆ,ಸಂಗೀತ ಶಿಕ್ಷಕಿ ಬಸಮ್ಮ ಉಜ್ಜಲ, ವಿದ್ಯಾರ್ಥಿನಿ ಪದ್ಮಶ್ರೀ ಉಪಸ್ಥಿತರಿದ್ದರು. ನಿರೂಪಣೆಯನ್ನು ಸುರೇಶ ಅವ್ವಣ್ಣಿ,ಸ್ವಾಗತ ಭಾಷಣವನ್ನು ಬಸವರಾಜ ಯರೇಶಿ ಹಾಗೂ ವಂದನಾರ್ಪಣೆಯನ್ನು ಕು.ಮಂಗಳ ಮಾಡಿದರು. 
Please follow and like us:
error

Related posts

Leave a Comment