ಡಾ.ಮಹಾಂತೇಶ ಮಲ್ಲನಗೌಡರ ಅಭಿನಂದನಾ ಗ್ರಂಥಕ್ಕೆ ಲೇಖನ, ಕವನ ಆಹ್ವಾನ

 ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಅಖಂಡ ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರು, ಹಿರಿಯ ಸಾಹಿತಿಗಳು, ಚಲನಚಿತ್ರ ಸಾಹಿತಿಗಳು  ಹಾಗೂ  ನಿವೃತ್ತ ಪ್ರಾಚಾರ್ಯರಾಗಿರುವ  ಡಾ.ಮಹಾಂತೇಶ ಮಲ್ಲನಗೌಡರ ಅವರನ್ನು ಕುರಿತು ಅಭಿನಂದನಾ ಗ್ರಂಥವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ  ಚಿಲವಾಡಗಿ ತಿಳಿಸಿದ್ದಾರೆ. 
ಡಾ.ಮಹಾಂತೇಶ ಮಲ್ಲನಗೌಡರ  ರವರು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಹನುಮಸಾಗರದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೊಪ್ಪಳ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕರೂ  ಆಗಿದ್ದರು. 
ಕೊಪ್ಪಳ ಜಿಲ್ಲೆಯ   ಸಾಹಿತಿಗಳು , ಡಾ.ಮಹಾಂತೇಶ ಮಲ್ಲನಗೌಡರ ರವರ ಶಿಷ್ಯರು ಡಾ.ಮಹಾಂತೇಶ ಮಲ್ಲನಗೌಡರ ರವರನ್ನು ಕುರಿತು  ಲೇಖನ, ಕವನ ಹಾಗೂ ಅವರ ಅಪರೂಪದ ಭಾವಚಿತ್ರಗಳನ್ನು ಜುಲೈ ೧೦ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. 
ವಿಳಾಸ  : ಹನುಮಂತಪ್ಪ ಅಂಡಗಿ  ಚಿಲವಾಡಗಿ ಅಧ್ಯಕ್ಷರು,  ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ  ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ  – ೩೦ ಕೊಪ್ಪಳ ೫೮೩೨೩೧ ನಡೆನುಡಿ : ೯೦೦೮೭೬೦೪೦೧, ೯೦೦೮೯೪೪೨೯೦  
Please follow and like us:

Leave a Reply