ಕಡಲೆ ಬೆಳೆಯಲ್ಲಿ ಹಸಿರು ಕೀಡೆಬಾಧೆ ಹತೋಟಿಗೆ ಸಲಹೆಗಳು.

ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕಡಲೆ ಮತ್ತು ಇತರೆ ಹಿಂಗಾರು ಬೆಳೆಗಳಿಗೆ ಹಾಗೂ ಮೊದಲು ಬಿತ್ತನೆ ಮಾಡಿದ ತೊಗರಿ ಬೆಳೆಯಲ್ಲಿ ಬಾಧಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಕೊಪ್ಪಳದ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ಕೀಟ ಬಾಧೆ ಹತೋಟಿಗೆ ರೈತರಿಗೆ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ಹೇಳಿದ್ದಾರೆ.
    ಇದಕ್ಕಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ, ಕುಷ್ಟಗಿ, ಕೊಪ್ಪಳ ಮತ್ತು ಯಲಬುರ್ಗಾ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳ ತಂಡವನ್ನು ರಚಿಸಿದ್ದು, ಜಂಟಿ ಸಮೀಕ್ಷೆಗೆ ಜಿಲ್ಲಾ ಜಂಟಿ ನಿರ್ದೇಶಕ ಡಾ. ಎ.ರಾಮದಾಸ್ ರವರು ಗುರುವಾರದಂದು ಚಾಲನೆ ನೀಡಿದರು.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ, ಕನಕಗಿರಿ, ಹುಲಿಹೈದರ್, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಹನುಮನಾಳ, ದೋಟಿಹಾಳ, ಮುದೆನೂರು, ತಾವರಗೇರಾ, ಯಲಬುರ್ಗಾ ತಾಲ್ಲೂಕಿನ ಮಂಗಳೂರು, ಯಲಬುರ್ಗಾ, ಕುಕನೂರು, ತಳಕಲ್ ಹಾಗೂ ಕೊಪ್ಪಳ ತಾಲ್ಲೂಕಿನ ಅಳವಂಡಿ, ಕವಲೂರು ಭಾಗಗಳಲ್ಲಿ ಕಡಲೆ ಬಿತ್ತನೆಯಾಗಿದ್ದು ಕಡಲೆ ಬೆಳೆಯು ಸುಮಾರು ಹತ್ತು ದಿನಗಳಿಂದ ಒಂದು ತಿಂಗಳ ಬೆಳೆ ಇದ್ದು ಈ ಬೆಳೆಗೆ ಎಲೆ ತಿನ್ನುವ ಹಸಿರು ಕೀಡೆಗಳ ಬಾಧೆ ಆರ್ಥಿಕ ನಷ್ಟವನ್ನುಂಟುಮಾಡುವ ಹಂತವನ್ನು ದಾಟಿರುವುದು ಕಂಡುಬಂದಿದೆ ಹಾಗೂ ಈ ಕೀಡೆ ಮೊದಲನೇ ಹಂತದಲ್ಲಿದ್ದು ಈ ಕೂಡಲೇ ರೈತರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿರುತ್ತದೆ.  ಇಲ್ಲದಿದ್ದ ಪಕ್ಷದಲ್ಲಿ ಸಾಕಷ್ಟು ಬೆಳೆ ನಷ್ಟವಾಗುವ ಸಂಭವವಿರುತ್ತದೆ.
    ಈಗಾಗಲೇ ತೊಗರಿ ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದ್ದು, ಹಸಿರು ಕಾಯಿ ಕೊರಕದ ಬಾಧೆ ಇಲ್ಲಿಯೂ ಕಂಡುಬಂದಿದೆ.  ರೈತರು ಶೀಘ್ರ ಹತೋಟಿಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಹಸಿರು ಕೀಡೆಯ ನಿರ್ವಹಣಾ ಕ್ರಮಗಳು : ಹಕ್ಕಿಗಳು ಕೀಡೆಗಳನ್ನು ತಿನ್ನಲು ಆಶ್ರಯಕ್ಕೆ ಎತ್ತರವಿರುವ ಮರದ ಟೊಂಗೆಗಳನ್ನು ಅಲ್ಲಲ್ಲಿ ನೆಡಬೇಕು.  ಮೊದಲನೆಯ ಸಿಂಪರಣೆಯಾಗಿ ತತ್ತಿ ಹಾಗೂ ಮೊದಲ ಹಂತದ ಕೀಡೆಗಳನ್ನು ನಾಶಪಡಿಸಲು ೦.೬ ಗ್ರಾಂ ಮಿಥೋಮಿಲ್ ೪೦ ಎಸ್.ಪಿ ಅಥವಾ ೦.೬ ಗ್ರಾಂ ಥೈಯೋಡಿಕಾರ್ಬ್ ೭೫ ಡಬ್ಲ್ಯೂ ಪಿ ಅಥವಾ ೨ ಮಿ.ಲೀ ಪ್ರೋಫೆನೋಫಾಸ್ ೫೦ ಇ.ಸಿ ಪ್ರತೀ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕೀಡೆಗಳು ಕಂಡು ಬಂದ ಬೆಳೆಗೆ  ಪ್ಲೂಬೆಂಡಿಯೊಮೈಡ್ ೪೮೦ ಎಸ್.ಸಿ ೦.೦೭೫ ಮಿ.ಲೀ, ರೈನಾಕ್ಷಿಪೈರ್ ೦.೧೫ ಮಿ.ಲೀ, ೦.೩ ಮಿ.ಲೀ ಇಂಡಾಕ್ಸಕಾರ್ಬ್ ೧೫ ಎಸ್.ಸಿ ಅಥವಾ ೦.೧ ಮಿ.ಲೀ ಸ್ಪೈನೋಸ್ಯಾದ್, ೨.೫ ಮಿ.ಲೀ ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೨ ಮಿ.ಲೀ ಕ್ವಿನಾಲ್‌ಫಾಸ್ ೨೫ ಇ.ಸಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ೧ ಕೆ.ಜಿ ಬೆಳ್ಳುಳ್ಳಿಯನ್ನು ೧೦೦ ಮಿ.ಲೀ ಸೀಮೆ ಎಣ್ಣೆಯಲ್ಲಿ ನೆನೆಸಿ ಮಿಕ್ಸಿಯಲ್ಲಿ ರುಬ್ಬಿ ಮೂರು ಲೀಟರ್ ದ್ರಾವಣ ತಯಾರಿಸಿ ಎರಡು ದ್ರಾವಣಗಳನ್ನು ನಾಲ್ಕು ನೂರು ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಸಿಂಪರಣೆಗೆ ಉಪಯೋಗಿಸಿ. ಶೇ.೫ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸ
    ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಗ್ರಾಮಗಳಲ್ಲಿ ರೈತ ಸಂಪರ್ಕಕೇಂದ್ರದ ಮೂಲಕ ಕೀಡೆ ನಿರ್ವಹಣೆ ಎಚ್ಚರಿಕೆ ಅಭಿಯಾನವನ್ನು ಪ್ರಾರಂಭಿಸಿದ್ದು ಹಾಗೂ ಈ ಕೀಡೆಯ ಹತೋಟಿಗೆ ಬೇಕಾದಂತಹ ಕೀಟನಾಶಕಗಳನ್ನು ರೈತ ಸಂಪರ್ಕಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರಿಯಾಯತಿ ದರದಲ್ಲಿ ಲಭ್ಯವಿರುತ್ತದೆ. ರೈತರು ಇದರ ಉಪಯೋಗ ಪಡೆಯಲು ಮನವಿ ಮಾಡಿಕೊಳ್ಳಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಎಲ್ಲಾ ರೈತ ಸಂಪರ್ಕಕೇಂದ್ರಗಳು, ಸಹಾಯಕ ಕೃಷಿ ನಿರ್ದೇಶಕರವರ ಕಛೇರಿ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಜ್ಞರನ್ನು ಸಂಪರ್ಕಿಸಬಹುದು ಎಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಹಾಗೂ ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ತಿಳಿಸಿದ್ದಾರೆ.

ಬೇಕು. ಈ ದ್ರಾವಣದ ಜೊತೆಗೆ ೧೦೦ ಗ್ರಾಂ ಸಾಬೂನಿನ ಪುಡಿಯನ್ನು ೩೦೦ ರಿಂದ ೪೦೦ ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕಾಳು ಕಟ್ಟುವ ಹಂತದಲ್ಲಿ ಪ್ರತೀ ಎಕರೆಗೆ ೧೦ ಸೇರು ಚುರುಮುರಿ (ಮಂಡಕ್ಕಿ/ಮಂಡಾಳು) ಹೊಲದ ತುಂಬೆಲ್ಲ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆ ತಿನ್ನಲು ಪ್ರೋತ್ಸಾಹಿಸಿದಂತಾಗುತ್ತದೆ.  ಸಿಡಿ / ನೆಟೆ ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶಪಡಿಸಬೇಕು.

Please follow and like us:
error