ಕಾಂಗ್ರೆಸ್ಸಿನಿಂದ ಜೆಡಿಎಸ್ ಸೇರ್ಪಡೆ

 ಇಲ್ಲಿನ ೧೨ಮತ್ತು ೧೩ ನೇ ವಾರ್ಡಿನಲ್ಲಿ ಶುಕ್ರವಾರದಂದು ನಡೆದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಕಾರ್ಯದರ್ಶಿ ಹನುಮಂತಪ್ಪ ಮ್ಯಾಗಳಮನಿ, ಹಾಗೂ ಮುಸ್ಲೀಂ ಸಮಾಜದ ಹಿರಿಯ ಮುಖಂಡ ಡಾ.ಮಾಜೀದ್ ಖಾನ್ ಸೇರಿದಂತೆ ಅನೇಕರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ: ಗೆಜ್ಜಿ ಭರವಸೆ
ಕೊಪ್ಪಳ, ಮೇ.೦೩: ಕ್ಷೇತ್ರದಲ್ಲಿ ತಾವೇಲ್ಲಾ ಆಶೀರ್ವದಿಸಿ ಜೆಡಿಎಸ್ ಪಕವನ್ನು ಅಧಿಕಾರಕ್ಕೆ ತಂದಲ್ಲಿ ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ ಕಲ್ಪಿಸಿಕೋಡಲಾಗುವುದು ಎಂದು ಜೆಡಿಎಸ್ ಪಕ್ಷದ ಮುಖಂಡ ಶಂಕರ ಗೆಜ್ಜಿ ಭರವಸೆ ನೀಡಿದರು.
ಅವರು ಶುಕ್ರವಾರ ಇಲ್ಲಿನ ಕೋರವರ ಓಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಸಮಾಜದ ಜನತೆ ಈಗ ಸ್ವಾವಲಂಬನೆಯ ಬದುಕು ಸಾಗಿಸುತ್ತಿದ್ದು ಉತ್ತಮ ಸ್ಥಿತಿಯಲ್ಲಿದೆ.  ಆದರೆ ಸರಕಾರ ಯಾವುದೇ ಸೌಲಭ್ಯ ದೊರೆಯದಾಗಿದ್ದು ಮುಂದೆ ಎಲ್ಲಾ ಸೌಲಭ್ಯ ಸೇರಿದಂತೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ತಾಲೂಕಾಧ್ಯಕ್ಷ ಮಹಿಮೂದ್ ಹುಸೇನಿ, ಪಕ್ಷದ ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಶಂಕರ ಗೆಜ್ಜಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 

Leave a Reply