ಸ್ವದೇಶಿ ಆಂದೋಲನ ದಿನಾಚರಣೆ ನಿಮಿತ್ಯ ಜಾಥಾ

ಕೊಪ್ಪಳ. ಅ. ೦೨. ಕೊಪ್ಪಳ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ವರೆಗೆ ಇಂದು ಗಾಂಧಿ ಜಯಂತಿ ಅಂಗವಾಗಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ಆಶ್ರಯದಲ್ಲಿ ಸ್ವದೇಶಿ ಆಂದೋಲನ ದಿನಾಚರಣೆ ನಿಮಿತ್ಯ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾದಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೆಇಬಿ, ಮಂಜುನಾಥ ಸಜ್ಜನ, ಭೀಮಸೇನ ಮೇಘರಾಜ, ಮಲ್ಲಪ್ಪ ಬೇಲೂರ, ಅಶೋಕಸ್ವಾಮಿ ಹಿರೇಮಠ, ದಿಲೀಪ ಮೇಘರಾಜ, ಬಸವರಾಜ ಅಂಗಡಿ, ದೇವೇಂದ್ರಸಾ, ರಾಘವೇಂದ್ರ ಕುಲಕರ್ಣಿ, ರಾಮು ಪೂಜಾರ ಅನೇಕರು ಇದ್ದರು. ದೇಶದ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡುವದು, ವಿದೇಶಿ ವಸ್ತುಗಳನ್ನು ವಿರೋಧಿಸಿ, ಎಫ್ ಡಿ ಐ ನ ಕುತಂತ್ರಕ್ಕೆ ಬಲಿಯಾಗದಿರಲು ದೇಶದ ಜನರಿಗೆ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಗೊಂಡಬಾಳ ಕೇಂದ್ರ ಸರಕಾರ ಎಫ್ ಡಿ ಐ ತರುವ ಮೂಲಕ ಸಾಮಾನ್ಯ ಜನರ ಜೀವನವನ್ನು ದುಸ್ಥರ ಮಾಡಲು ಹೊರಟಿದ್ದಾರೆ. ಹಣವಂತರು ಮಾತ್ರ ಈ ದೇಶದಲ್ಲಿ ಬದುಕುವದಕ್ಕೆ ಸಾಧ್ಯ ಎನ್ನುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಆನಸಾಮಾನ್ಯ ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಎಫ್ ಡಿ ಐ ಯನ್ನು ವಿರೋಧಿಸಿ, ಅದನ್ನು ದೇಶದಿಂದ ಒದ್ದೋಡಿಸಬೇಕು, ಇಲ್ಲವಾದರೆ ಮತ್ತೊಮ್ಮೆ ಸ್ವಾತಂತ್ರ್ಯಹರಣ ಶತಸಿದ್ಧ ಎಂದು ಆತಂಕ ವ್ಯಕ್ತಪಡಿಸಿದರು.
Please follow and like us:
error