You are here
Home > Koppal News > ಜಿ.ಟಿ. ಪಂಪಾಪತಿಯವರಿಂದ ನೋಟಬುಕ್ ವಿತರಣೆ

ಜಿ.ಟಿ. ಪಂಪಾಪತಿಯವರಿಂದ ನೋಟಬುಕ್ ವಿತರಣೆ

ಯಲಬುರ್ಗಾ ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿ. ಟಿ. ಪಂಪಾಪತಿಯವರು ಮಕ್ಕಳಿಗೆ ನೋಟಬುಕ್ಕಗಳನ್ನು ಉಡುಗೊರೆಯಾಗಿ ನೀಡಿದರು. ಗ್ರಾಮೀಣ ಮಟ್ಟದಲ್ಲಿ ಓದುತ್ತಿರುವ ವಿದ್ಯಾಥಿಗಳಿಗೆ ಸರಕಾರದಿಂದ ಅನೇಕ ಸೌಲಭ್ಯಗಳು ಇದ್ದರೂ ಅವು ಯಾವುವು ಸಮರ್ಪಕವಾಗಿ ಮಕ್ಕಳಿಗೆ ಮುಟ್ಟುತ್ತಿಲ್ಲ   ಸಹೃದಯರು ಆದ ಜಿ.ಟಿ. ಪಂಪಾಪತಿಯವರು ತಮ್ಮ ಸಮಾಜ ಸೇವೆಯಲ್ಲಿ ನಮ್ಮ ಊರಿನ ಮಕ್ಕಳಿಗೆ ಓದಿಬರೆಯಲು ಅನುಕೂಲವಾಗುವದಕ್ಕೆ ನೋಟಬುಕ್ಕಗಳನ್ನ ವಿತರಿಸಿದ್ದಾರೆ. ಇದೊಂದು ಅಪೂರೂಪದ ಕೆಲಸವಾಗಿದ್ದು ಸಮಾಜ ಸುದಾರಣೆಗೆ ಬಹು ಅನೂಕೂಲವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟರು ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಹ ಶಿಕ್ಷಕರು ಹಾಗೂ ಗ್ರಾಮದ ಪ್ರಜ್ಞಾವಂತ ಪ್ರಜೆಗಳು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು, ವೀರಯ್ಯ ಹಿರೇಮಠ, ಮರಿಯಪ್ಪ ಅಳವಂಡಿ, ರಾಮನ್ಣ ಕಾಯಣ್ಣ್ಣವರ (ಎಂ.ಹೆಚ್.ಪಿ.ಎಸ್) ಹೆಚ್. ಎಂ, ಶಾಂತಾ ಮಿಸಿ, ಪ್ರೌಢ ಶಾಲಾ ಹೆಚ್. ಎಂ, ಪ್ರಕಾಶ ಗೌಡ ಎಸ್.ಹೆಚ್. ವೀರಣ್ಣ ಎಫ್. ಉಪ್ಪಾರ, ವೀರನಗೌಡ ತೋಟಗಂಟಿ, ವೀರಣ್ಣ ವಿ. ಚಕ್ರಸಾಲಿ, ಹಾಗೂ ಶಾಲಾ ಅಭಿವೃದ್ದಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರುಗಳು ಉಪಸ್ಥಿತರಿದ್ದರು. 

Leave a Reply

Top