ಜನಪದ ಕಲೆಗಳು ಹಳ್ಳಿಗರಲ್ಲಿ ಐಕ್ಯವನ್ನು ಸಾಧಿಸುತ್ತವೆ- ಹನುಮಂತಪ್ಪ ಅಂಡಗಿ

ಕೊಪ್ಪಳ : ಜನಪದ ಕಲೆಗಳು ಹಳ್ಳಿಗರಲ್ಲಿ ಐಕ್ಯವನ್ನು ಸಾಧಿಸುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಈಗಲೂ ಯಾವುದೇ ಮನೆಯಲ್ಲಿ ಮದುವೆಯ, ಋತುಮತಿಯಾದಾಗ ಮುಂತಾದ ಸಂದರ್ಭಗಳಲ್ಲಿ ಜನಪದ ಗೀತೆಗಳನ್ನು ಹಾಡುವ ಮೂಲಕ ಅವರ ಸುಖ-ದುಃಖಗಳಲ್ಲಿ ಭಾಗವಹಿಸುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಐಕ್ಯತಾ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳು ಕೂಡ ಜನಪದ ಸಾಹಿತ್ಯದ ಕಡೆಗೆ ಒಲವು ಬೆಳಸಿಕೊಳ್ಳಬೇಕು. ಅಂದಾಗಮಾತ್ರ ವಿದ್ಯಾರ್ಥಿಗಳು ಮೂಲ ಜಾನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು. 
ಅವರು ಕೊಪ್ಪಳ ತಾಲೂಕಿನ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ೮ ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
ಹುಲಿಗಿ ಅಂಚೆ ಇಲಾಖೆಯ ಅಂಚೆ ಪಾಲಕರಾದ ಜಿ. ಎನ್. ಹಳ್ಳಿಯವರು  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪರಿಸರ ನಮ್ಮ ಉಸಿರಾಗಿದೆ. ಪರಿಸರವನ್ನು ಉಳಿಸಿ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. 
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶಂಕ್ರಪ್ಪ ಹುಡೇದ ಅಧ್ಯಕ್ಷತೆವಹಿಸಿದ್ದರು. ಮಾಜಿ ಅಧ್ಯಕ್ಷರಾದ ಉಮೇಶಗೌಡ ಮಾಲಿಪಾಟೀಲ, ಉಪಾಧ್ಯಕ್ಷ ಮಲ್ಲವ್ವ ದೊಡ್ಡಮನಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಹೇಮವ್ವ ದೊಡ್ಡಮನಿ, ಮಾಜಿ ಅಧ್ಯಕ್ಷರಾದ ಲಿಂಗನಗೌಡ ಹಳ್ಳಿ, ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಬೆಲ್ಲದ, ಹಿರಿಯರಾದ ಸೋಮಶೇಖರ ಹುಚ್ಚಪ್ಪನವರ, ಭರಮಪ್ಪ ಗೂಳಪ್ಪನವರ, ಮೈಲಾರಪ್ಪ ಗೊಂದಿಹೊಸಳ್ಳಿ, ನಿಂಗಜ್ಜ ಹಳ್ಳಿ, ಶಿಕ್ಷಕರಾದ ಸುರೇಶ ಅಂಗಡಿ, ವಿರೂಪಾಕ್ಷಪ್ಪ ಹೊಸಳ್ಳಿ, ಶ್ರೀನಾಥ ವಂಕಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. 
ಶಿಕ್ಷಕ ನಾಗರಾಜ ಮಾದಿನೂರ ನಿರೂಪಿಸಿದರು. ಮಂಜುನಾಥ ಸವಡಿ ಸ್ವಾಗತಿಸಿದರು. ಸುರೇಶ ಬಲಕುಂದಿ ವಂದಿಸಿದರು. 

Related posts

Leave a Comment