ಚುನಾವಣಾ ಪ್ರಚಾರಕ್ಕೆ ರಾಜುಗೌಡ

 ಭಾರತೀಯ ಜನತಾ ಪಾರ್ಟೀಯ ಅಭ್ಯರ್ಥಿ ಕರಡಿ ಸಂಗಣ್ಣನವರ ಪರವಾಗಿ ದಿ   ೧೧-೦೪-೨೦೧೪ ರಂದು ಪ್ರಚಾರಕೈಗೊಳ್ಳಲು ಮಾಜಿ ಸಚಿವ ಹಾಗೂ ವಾಲ್ಮೀಕಿ ಸಮಾಜದ ಪ್ರಭಾವಿ ಮುಖಂಡರಾದ ರಾಜುಗೌಡ (ನರಸಿಂಹನಾಯಕ) ಕುಷ್ಟಗಿ ತಾಲೂಕಿನಲ್ಲಿ ಪ್ರಚಾರ ಕೈಗೊಳ್ಳುವರು. ಬೆಳಿಗ್ಗೆ ೧೦ ಗಂಟೆಗೆ ಹಿರೆಮನ್ನಾಪೂರ, ಮಧ್ಯಾಹ್ನ ೧ ಗಂಟೆಗೆ ಚಳಿಗೇರಿ, ಮಧ್ಯಾಹ್ನ ೩ಕ್ಕೆ ಹೂಲಗೇರಿ ಹಾಗೂ ಸಂಜೆ ೫ ಗಂಟೆಗೆ ಕುಷ್ಟಗಿ ನಗರದ ರಂಭಾಪುರಿ ಜಗದ್ಗುರು ಕಲ್ಯಾಣ ಮಂಟಪದಿಂದ ರೋಡ ಷೋ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ.
ಈ ಕಾರ್ಯಕ್ರಮಗಳಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಜಿ.ಪಂ.ಉಪಾಧ್ಯಕ್ಷರಾದ ಅನ್ನಪೂರ್ಣಮ್ಮ ಕಂದಕೂರಪ್ಪ ವಾಲ್ಮೀಕಿ, ಬಿ.ಜೆ.ಪಿ ತಾಲೂಕ ಅಧ್ಯಕ್ಷರಾದ ಶಶಿಧರ ಕವಲಿ, ಜಿ.ಪಂ ಸದಸ್ಯರರು, ತಾ.ಪಂ. ಸದಸ್ಯರರು ಮತ್ತು ಪುರಸಭೆ ಸದಸ್ಯರರು ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುತ್ತಾರೆಂದು ಬಿ.ಜೆ.ಪಿ ಲೋಕಸಭಾ ಮಾಧ್ಯಮ ಪ್ರಮುಖರಾದ ಹಾಲೇಶ ಕಂದಾರಿ  ತಿಳಿಸಿದ್ದಾರೆ.
Please follow and like us:
error

Related posts

Leave a Comment