ನಿವೃತ್ತ ಪೋಲಿಸ್ ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷ ಆಯ್ಕೆ.

ಕೊಪ್ಪಳ-09- ನಗರದ ಪೋಲಿಸ್ ಕಲ್ಯಾಣ ಮಂಟಪದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿಗಳ/ಸಿಬ್ಬಂದಿಯವರ ಸಭೆಯು ೧೧ ಗಂಟೆಗೆ ಪ್ರಾರಂಭವಾಗಿದ್ದು ಶ್ರೀ ತಿರುಮಲರಾವ್ ನಿವೃತ್ತ ಪಿ.ಎಸ್.ಐ ಸಂಘದ ಕಾರ್ಯದರ್ಶಿ ರವರ ನೇತೃತ್ವದಲ್ಲಿ ಇತ್ತಿಚಿಗೆ ನಿಧನರಾದ ಸಂಘದ ಅಧ್ಯಕ್ಷರಾಗಿದ್ದ ದಿ|| ದುರಗಪ್ಪ ನಿವೃತ್ತ ಪಿ.ಎಸ್.ಐ ರವರ ಆತ್ಮಕ್ಕೆ ಶಾಂತಿಕೋರಿ ೨ನಿಮಿಷ ಮೌನ ಆಚರಿಸಲಾಯಿತು.
    ನಂತರ ಸಂಘದ ಚೆಟುವಟಿಕೆ ಮತ್ತು ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ‘ಆರೋಗ್ಯ ಭಾಗ್ಯ’ ಮತ್ತು ‘ಪೋಲಿಸ್ ಕ್ಯಾಂಟಿನ’ ದಲ್ಲಿ ದಿನಸಿಗಳ ಖರೀದಿ ಬಗ್ಗೆ ಹಾಜರಿದ್ದ ಸುಮಾರು ನೂರಕ್ಕೂ ಹೆಚ್ಚು ನಿವೃತ್ತ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಸಮಗ್ರವಾಗಿ ಚೆರ್ಚಿಸಿ ಕೇಂದ್ರಿಯ ಸಂಘದ ನಿಯಮ
    ತದನಂತರ ಇತ್ತೀಚಿಗೆ ಹೃದಯಘಾತದಿಂದ ನಿಧನರಾದ ದಿ|| ದುರಗಪ್ಪ ನಿವೃತ್ತ ಪಿ.ಎಸ್.ಐ ರವರ ತೇರವಾದ ಅಧ್ಯಕ್ಷ ಸ್ಥಾನಕ್ಕೆ ಜಿ.ಆರ್.ಲಕ್ಷ್ಮಣ್ಣ ಮತ್ತು ವಿಠಲ ಸೋನಾರ ಇವರ ಸೂಚಿಸಿದ ಮೇರೆಗೆ ಶ್ರೀ ಬಸಪ್ಪ  ಅಲಿಯಾಸ್ ಬಸವರಾಜ ಗುಮಗೇರಿ ನಿವೃತ್ತ ಪಿ.ಎಸ್.ಐ ರವರನ್ನು ಸರ್ವಾನುಮತದಿಂದ ಅವಿರೋಧವಾಗಿ ನಿವೃತ್ತ ಪೋಲಿಸ್ ಅಧಿಕಾರಿಗಳ/ಸಿಬ್ಬಂದಿಯವರ ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಆಯ್ಕೆಯಾದ ನೂತನ ಅಧ್ಯಕ್ಷರಾದ ಶ್ರೀ ಬಸಪ್ಪ ಗುಮಗೇರಿಯವರು ತಮ್ಮನ್ನು ಅವಿರೋಧವಾಗಿ ಆಯ್ಕೆಮಾಡಿದಕ್ಕೆ ಅಭಿನಂಧನೆಗಳನ್ನು ಸಲ್ಲಿಸುತ್ತಾ ಪ್ರತಿ ತಿಂಗಳದ ೧೦ನೇ ತಾರಿಕಿಗೆ ತಪ್ಪದೆ ಜಿಲ್ಲೆಯ ಎಲ್ಲಾ ನಿವೃತ್ತ ಪೋಲಿಸ್ ಅಧಿಕಾರಿ/ಸಿಬ್ಬಂದಿಯವರು ಪೋಲಿಸ್ ಕಲ್ಯಾಣ ಮಂಟಪದಲ್ಲಿ ಜರುಗುವ ಮಾಸಿಕ ಸಭೆಗೆ ಕುಂದು ಕೊರತೆಗಳ ಬಗ್ಗೆ ಚೆರ್ಚಿಸಲು ಹಾಜರಿರುವಂತೆ ವಿನಂತಿಸಿಕೊಂಡಿದ್ದಾರೆ.

ಗಳ ಅನುಸಾರ ಕಾರ್ಯನಿರ್ವಹಿಸಲು ಚೆರ್ಚಿಸಲಾಯಿತು.

Leave a Reply