ಕೊಪ್ಪಳಕ್ಕೆ ಅಲ್ಪಸಂಖ್ಯಾತರ ಪದವಿ-ಪೂರ್ವ ವಸತಿ ಕಾಲೇಜು ಮಂಜೂರು

  ಗುರುವಾರ. ಅಲ್ಪಸಂಖ್ಯಾತರ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ವಿಶೇಷ ಮುತುವರ್ಜಿವಹಿಸಿ ಕೊಪ್ಪಳ ಕ್ಷೇತ್ರದ ಸಮರ್ಗ ಅಭಿವೃದ್ದಿಗೆ ಶ್ರಮಿಸುತ್ತಿರುವ ಶಾಸಕರು  ಅಲ್ಪಸಂಖ್ಯಾತರ ಪದವಿ-ಪೂರ್ವ ವಸತಿ ಮಂಜೂರು ಮಾಡಿಸಿದ್ದಾರೆ. ೨೦೧೪-೧೫ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಇಡೀ ರಾಜ್ಯದಲ್ಲೇ ಕೊಪ್ಪಳ ಮತ್ತು ಕಲಬುರ್ಗಿ ಜಿಲ್ಲೆಗೆ ಈ ಕಾಲೇಜುಗಳು ಮಂಜೂರಾಗಿ ಸುಮಾರು ಅಂದಾಜು ವೆಚ್ಚ ರೂ.೬೦೦.೦೦ ಲಕ್ಷಗಳು ೨೦೧೪-೧೫ನೇ ಸಾಲಿಗೆ ಹಂಚಿಕೆ ಮಾಡಲಾಗಿದೆ. 
ಅಲ್ಪಸಂಖ್ಯಾತ ಸಮುದಾಯದ ವಿಧ್ಯಾರ್ಥಿಗಳು ಇದರ ಸದೋಪಯೋಗ ಪಡೆದುಕೊಂಡು ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ಉಜ್ವಲಮಾಡಿಕೊಳ್ಳಬೇಕೆಂದು ಆಶಿಸಿದ್ದಾರೆ.  
        

Related posts

Leave a Comment