ಚುನಾವಣೆ : ಅಬಕಾರಿ ನಿಯಂತ್ರಣಕ್ಕೆ ವ್ಯಾಪಕ ಕ್ರಮ

 ಲೋಕಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ಸಾಗಾಣಿಕೆ ತಡೆಗಟ್ಟಲು ಅಬಕಾರಿ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. 
  ಅಬಕಾರಿಗೆ ಸಂಬಂಧಪಟ್ಟ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್‌ರೂಮ್) ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ ೦೮೫೩೯- ೨೨೨೦೦೨ ಮತ್ತು ೨೨೨೦೦೧ (ಫ್ಯಾಕ್ಸ್)), ಇ-ಮೇಲ್ ವಿಳಾಸ-ಜಛಿಞಠಿಟ-ex-ಞಚಿ@ಟಿiಛಿ.iಟಿ ಆಗಿರುತ್ತದೆ. ಸಾರ್ವಜನಿಕರು ನಿಯಂತ್ರಣ ಕೊಠಡಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಈ ನಿಯಂತ್ರಣ ಕೊಠಡಿಯಲ್ಲಿ ದಾಖಲಾಗುವ ದೂರುಗಳ ಬಗ್ಗೆ ತಕ್ಷಣ ಸ್ಪಂದಿಸಲು ಹಾಗೂ ಕ್ರಮ ಕೈಗೊಳ್ಳಲು ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕ ಮಂಜುನಾಥ್ ಮಾಲಿಪಾಟೀಲ್-೯೪೪೯೫೯೭೧೭೬ ಅವರನ್ನು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರವಾರು ಪ್ರಹಾರ ದಳಗಳನ್ನು ರಚಿಸಲಾಗಿದ್ದು, ಆಯಾ ಕ್ಷೇತ್ರಗಳಲ್ಲಿ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಇತ್ಯಾದಿಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸಲು ಪ್ರಹಾರ ದಳವನ್ನು ಸಹ ರಚಿಸಲಾಗಿದೆ.    ಕೊಪ್ಪಳ ಕ್ಷೇತ್ರಕ್ಕೆ ಕೊಪ್ಪಳ ಅಬಕಾರಿ ನಿರೀಕ್ಷಕ ಯಮನೂರುಸಾಬ್ ಹೊಸಮನಿ ಮೊ.೯೪೪೮೭೫೭೯೨೩, ಕುಷ್ಟಗಿ ಕ್ಷೇತ್ರಕ್ಕೆ ಕುಷ್ಟಗಿ ಅಬಕಾರಿ ನಿರೀಕ್ಷಕ ಚಾಂದಪಾಶಾ- ೯೮೪೫೯೪೭೮೨೮, ಗಂಗಾವತಿ ಕ್ಷೇತ್ರಕ್ಕೆ ಗಂಗಾವತಿ ಅಬಕಾರಿ ನಿರೀಕ್ಷಕ ನರಸಿಂಹಾಚಾರ್ಯ-೯೪೪೮೩೫೦೫೫೫, ಕನಕಗಿರಿ ಕ್ಷೇತ್ರಕ್ಕೆ ಗಂಗಾವತಿ ಅಬಕಾರಿ ಉಪ ನಿರೀಕ್ಷಕ ಚಿನ್ನಪ್ಪ-೯೮೮೦೮೭೮೯೨೧ ಯಲಬುರ್ಗಾ ಕ್ಷೇತ್ರಕ್ಕೆ ಸಂಗಮೇಶ ಮುರನಾಳ- ೯೪೪೯೫೯೭೧೭೫ ಇವರನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ಮತ್ತು ಅತಿ-ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಲು ವಲಯವಾರು ರಚಿಸಲಾಗಿರುವ ನೋಡೆಲ್ ಅಧಿಕಾರಿಗಳು ಹಾಗೂ ಪ್ರಹಾರ ದಳದ ಅಧಿಕಾರಿಗಳು ದಿನದ ೨೪ ಗಂಟೆಗಳ ಕಾಲ ಕಾರ್ಯಪ್ರವೃತ್ತರಾಗಲು ಆದೇಶಿಸಲಾಗಿದೆ ಎಂದು ಅಬಕಾರಿ ಇಲಾಖೆಯ  ಅಬಕಾರಿ ಉಪ ಆಯುಕ್ತರು  ತಿಳಿಸಿದ್ದಾರೆ. 

Related posts

Leave a Comment