ನಿರ್ಲಜ್ಜ ಸಚಿವರ ರಾಜೀನಾಮೆ

ಸದನದಲ್ಲಿ ಬ್ಲೂಫಿಲಂ ವೀಕ್ಷಣೆ: ಮೂವರು ಸಚಿವರ ರಾಜೀನಾಮೆ
ಬೆಂಗಳೂರು, ಫೆ.8: ವಿಧಾನ ಸಭೆಯಲ್ಲಿ ಗಂಭೀರ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್‌ನಲ್ಲಿ ‘ಬ್ಲೂಫಿಲಂ’ ನೋಡುತ್ತಿದ್ದ ಸಚಿವರಾದ ಲಕ್ಷಣ ಸವದಿ ಹಾಗೂ ಸಿ.ಸಿ. ಪಾಟೀಲ್ ಹಾಗೂ ಅವರ ಮೊಬೈಲ್‌ಗೆ ‘ಬ್ಲೂಫಿಲಂ’ ರವಾನಿಸಿದ್ದಾರೆನ್ನಲಾದ ಜೆ.ಕೃಷ್ಣ ಪಾಲೆಮಾರ್ ಇಂದು ಬೆಳಗ್ಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ಸ್ಪೀಕರ್ ಕೆ.ಜಿ.ಬೋಪಯ್ಯರಿಗೆ ರಾಜೀನಾಮೆ ಪತ್ರವನ್ನು ಈ ಸಚಿವರು ರವಾನಿಸಿದ್ದರು. ಶೀಘ್ರವೇ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು.
Please follow and like us:
error