ಕಿನ್ನಾಳ ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಕೊಪ್ಪಳ :- ಗ್ರಾ.ಪಂ ಕಿನ್ನಾಳ ಹಾಗೂ ಯುನಿಸೇಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ಲಾಪುರ ರಸ್ತೆ ಶಾಲಾ ಆವರಣದಲ್ಲಿ  ಮಕ್ಕಳ ಹಕ್ಕುಗಳ ಗ್ರಾಮ ಸಭೆ ಜರುಗಿತು
    ಪಂಚಾಯತಿಯ ಅಧ್ಯಕ್ಷರಾದ ವೀರಬದ್ರಪ್ಪ ಗಂಜಿ ಜ್ಯೋತಿ ಬೆಳಗಿಸಿದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಂಚಾಯತಿ ಅಭಿವೃದಿ ಅಧೀಕಾರಿಗಳಾದ ಶರಣಯ್ಯ ಸಸಿ ಮಠ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಪಂಚಾಯತಿ ಬದ್ದವಾಗಿದ್ದು ಕಳೆದ ವರ್ಷದ ಮಕ್ಕಳ ಬೇಡಿಕೆಗಳನ್ನು ಕ್ರೀಯಾ ಯೋಜನೆಯಲ್ಲಿ ಅಳವಡಿಸಿ ಕಾರ್ಯಗತ ಗೊಳಿಸಿದ್ದು. ಪಾಕಿಸ್ತಾನದಲ್ಲಿಯ ಮಲಾಲ ವಿದ್ಯಾರ್ಥಿನಿಯ ಹೋರಾಟ ಹಾಗೂ ಸಂಘಟನೆ ಮತ್ತು ಗುಲಾಬಿ ಹೆಣ್ಣುಮಕ್ಕಳ ಸಂಘಟನೆಯ ಉದಾಹರಣೆಯೊಂದಿಗೆ ಮಕ್ಕಳಲ್ಲಿ ಪ್ರೇರೇಪಣೆ ತುಂಬಿದರು. ಸಮುದಾಯ ಸಂಘಟಕರಾದ ಶ್ರೀ ಆನಂದ ಹಳ್ಳಿಗುಡಿ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆ ಬೇಡಿಕೆಗಳನ್ನು ಪ್ರಸ್ತಾವನೆಯನ್ನು ಪ್ರಸ್ತಾಪಿಸಲು. ಇರುವ ವೇಧಿಕೆ ಅವರ ಹಕ್ಕುಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳುವುದು. ಸ್ಥಳಿಯ ಸರಕಾರದ ಜವಬ್ಧಾರಿ ಮತ್ತು ಕಾರ್ಯ ಎಂದರು. ಬಾಲ್ಯ ವಿವಾಹ ತಡೆ ಕಾಯ್ಧೆ, ಬಾಲ ಕಾರ್ಮಿಕತೆ ಹಾಗೂ ಮಕ್ಕಳ ಹಕ್ಕುಗಳ ಸವಿಸ್ತಾರ ವಿವರಣೆ ನೀಡಿ, ಬಾಲಿಕಾ ಸಂಘಗಳ ರಚನೆ, ಕಾರ್ಯ, ಉದ್ದೇಶದ ಬಗ್ಗೆ ತಿಳಿಸಿ ರಜಿಸ್ಟರಗಳನ್ನು ವಿತರಿಸಲಾಯಿತು. ಕಿನ್ನಾಳ ಗ್ರಾಮದಲ್ಲಿ ತಡೆಹಿಡಿದ ಬಾಲ್ಯ ವಿವಾಹ ಪ್ರಕರಣ ಹಾಗೂ ಪ್ರೌಢ ಶಾಲೆಗಳಲ್ಲಿ ಬಾಲ್ಯ ವಿವಾಹಕ್ಕೆ ಒಳಗಾಗಿ ಶಾಲೆ ಮುಂದುವರೆಸುತ್ತಿರುವ ವಿದ್ಯಾರ್ಥಿನಿಯರ ಮನೋಭಲವನ್ನು ವಿವರಿಸಿದರು. 
ಮಕ್ಕಳ ಸಹಾಯವಾನಿ ೧೦೯೮, ಮಕ್ಕಳಿಗಾಗಿ ಇರುವ ಇಲಾಖೆಗಳು ತೆರೆದ ಮನೆ ಕಾರ್ಯಕ್ರಮ ಮಕ್ಕಳ ಹಕ್ಕುಗಳ ಕ್ಲಬ್ ಮೀನಾ ತಂಡದ ಕಾರ್ಯದ ಬಗ್ಗೆ ತಿಳಿಸಿ ಕ್ರೀಯಾಶೀಲವಾಗಿ ಸಾಂಘಿಕವಾಗಿ ಕಾರ್ಯನಿರ್ವಹಿಸಿ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುದ್ಲಾಪುರ ಶಾಲಾ ಮಕ್ಕಳು ಶಾಲೆಗೆ ಗೇಟ ವ್ಯವಸ್ಥೆ, ನೀರಿನ ಪೈಪಲೈನ ವ್ಯವಸ್ಥೆ, ಪೂರೈಸಲು ಬೇಡಿಕೆ ಇಟ್ಟರು. ಪಂ. ಅಧ್ಯಕ್ಷರು ೧೫ ದಿನಗಳ ಒಳಗಾಗಿ ಬೇಡಿಕೆ ಪೋರೈಸುವುದಾಗಿ ವಿವರಿಸಿದರು. 
ಕುವೆಂಪು ಶಾಲೆ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಾಲೆಯ ಸುತ್ತಮುತ್ತಲ ಇರುವ ತಿಪ್ಪೆಗುಂಡಿಗಳನ್ನು ಹಾಗೂ ಮರಳು ಸಾಗಿಸುವ ಲಾರಿ ಟ್ರ್ಯಾಕ್ಟರ ನಿಷೇದಿಸುವಂತೆ ಕೇಳಿದಾಗ ಪಂಚಾಯತಿಯವರು ಸಂಬಂದಿಸಿದವರಿಗೆ ಜಾರಿ ಮಾಡಿದ ಸೋಕಾಸ್ ನೋಟಿಸ್ ಪ್ರತಿಯೊಂದಿಗೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. 
ಪ್ರೌಢಶಾಲಾ ವಿದ್ಯಾರ್ಥಿನಿಯರು ಶಾಲಾ ಅವದಿಗಳಲ್ಲಿ ಪುಂಡಾಟಿಕೆಯಿಂದ ಅನುಭವಿಸುತ್ತಿರುವ ಕಿರುಕುಳವನ್ನು ವ್ಯಕ್ತಪಡಿಸಿದರ ಬಗ್ಗೆ ಸಮುದಾಯ ಸಂಘಟಕರು ಕುಡಲೇ ಲಿಖಿತ ದೂರನ್ನು ಮಕ್ಕಳ ರಕ್ಷಣಾ ವಿಶೇಷ ಪೋಲಿಸ ಘಟಕಕ್ಕೆ ಸಲ್ಲಿಸುವಂತೆ ತಿಳಿಸಿದರು.   
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು ಕುವೆಂಪು ಶಾಲೆಯ ಎಸ್.ಡಿಎಂ.ಸಿ ಸದಸ್ಯರು, ಕಾರ್ಯದರ್ಶಿಗಳಾದ ಬೈರೇಶ ಎನ್. ಸಿಆರ್ ಪಿ. ದ್ಯಾಮಣ್ಣ ಅಬ್ಬಿಗೇರಿ ಅಂಗನವಾಡಿ ಮೇಲ್ವಿಚಾರಕಿ ಮಲ್ಲಮ್ಮ, ಕಿನ್ನಾಳ ಗ್ರಾ.ಪಂ. ವ್ಯಾಪ್ತಿ ಶಾಲೆಯ ಮುಖ್ಯೋಪಾದ್ಯಾಯರು, ಸಿಬ್ಬಂದಿವರ್ಗದವರು, ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು. 
ಕಾರ್ಯಕ್ರಮದ ನಿರೂಪಣೆ ಸುಬಾಶ ರಡ್ಡಿ, ಮತ್ತು ಸ್ವಾಗತವನ್ನು ರವಿಂದ್ರ ಬಳಿಗೇರ,  ವಂದನಾರ್ಪಣೆಯನ್ನು ಗ್ರಾ.ಪಂ. ಕಾರ್ಯದರ್ಶಿ ಬೈರೇಸ  ನೆರವೆರಿಸಿದರು. 
Please follow and like us:
error