You are here
Home > Koppal News > ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿ ವಿರುದ್ದ ಪತ್ರ ಚಳುವಳಿ

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿ ವಿರುದ್ದ ಪತ್ರ ಚಳುವಳಿ

ಕೊಪ್ಪ ಳ: ದಿನಾಂಕ : ೦೬-೦೪-೨೦೧೦ ರ ಬೆಳಿಗ್ಗೆ ೧೧-೦೦ ಗಂಟೆಗೆ ಎಂ.ಹೆಚ್..ಪಿ.ಎಸ್. ಶಾಲಾ ಆವರಣದಲ್ಲಿ ಸಭೆ ಸೇರಿದ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರ ಜಾರಿ ಮಾಡಲು ಮುಂದಾಗಿರುವ ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣ ಕಾಯ್ದೆ – ೨೦೧೦ ರ ವಿರುದ್ದ ಹೋರಾಟ ನಡೆಸಲು ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ, ಕೊಪ್ಪಳ ಜಿಲ್ಲಾ ಘಟಕ ರಚಿಸಿಕೊಂಡು, ಮೊದಲ ಹಂತವಾಗಿ ದಿನಾಂಕ : ೦೬-೦೪-೨೦೧೦ ರಂದು ಪತ್ರ ಚಳುವಳಿ ಆರಂಭಿಸಲು ನಿರ್ಧರಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸರಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ನೆಪದಲ್ಲಿ ಮುಸ್ಲಿಂ, ಹಿಂದುಳಿದ ವರ್ಗ, ದಲಿತರ ಆಹಾರ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಒಂದು ಸಮುದಾಯದ ಆಹಾರ ಹಕ್ಕಿನ ಮೇಲೆ ದಬ್ಬಾಳಿಕೆ ಮಾಡುವ ಸರ್ಕಾರ, ಕಾನೂನು ಜಾರಿ ಮಾಡುವ ಮೂಲಕ ರಾಜ್ಯದಲ್ಲಿನ ಸೌಹಾರ್ಧತೆಗೆ ಧಕ್ಕೆ ತರಲು ಯತ್ನಿಸುತ್ತಿದೆ. ಆಹಾರ ಸೇವನೆ ಅವರವರ ಇಚ್ಛೆಗೆ ಸಂಬಂಧಪಟ್ಟ ವಿಚಾರ, ಯಾರೂ ಒತ್ತಾಯಪೂರ್ವಕ, ನಿರ್ಭಂದಿಸುವ ಮೂಲಕ ಕಾನೂನು ಜಾರಿ ಮಾಡುವ ಮೂಲಕ ಆಹಾರ ಹಕ್ಕನ್ನು ಮೊಟಕು ಗೊಳಿಸುವುದು ಜನವಿರೋಧಿಯಾದದ್ದಾಗಿದೆ. ಕೋಮುವಾದಿ ಸರಕಾರದ ಸರ್ವಾಧಿಕಾರಿ ಧೋರಣೆ ಪ್ರತಿಭಟಿಸಿ, ಆಹಾರದ ಹಕ್ಕಿನ ರಕ್ಷಣೆಗಾಗಿ ದಿನಾಂಕ : ೬-೪-೨೦೧೦ ರ ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ನಗರದ ಹೂವಿನಾಳ ರಸ್ತೆಯ ಆಶ್ರಯ ಕಾಲೋನಿಯಲ್ಲಿ ಪತ್ರ ಚಳುವಳಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕಾರಣ ಪ್ರಗತಿಪರ ಸಂಘಟನೆಯ ಮುಖಂಡರೂ, ಚಿಂತಕರೂ, ಬರಹಗಾರರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಿಸಬೇಕೆಂದು, ಆಹಾರ ಹಕ್ಕು ರಕ್ಷಣೆ ಹೋರಾಟ ವೇದಿಕೆ ಪರವಾಗಿ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಮೈಲಪ್ಪ ಬಿಸರಳ್ಳಿ, ಹನುಮಂಪ್ಪ ಮ್ಯಾಗಳಮನಿ, ಭರದ್ವಾಜ, ರಾಜಾಬಕ್ಷಿ, , ಶಿವಾನಂದ ಹೊದ್ಲೂರ, ಸೈಯ್ಯದ್ ಗೌಸ್ ಪಾಷಾ , ಶರಣಪ್ಪ ಕೊತಬಾಳ ಇವರುಗಳು ವೇದಿಕೆಯ ಪರವಾಗಿ ವಿನಂತಿಸಿದ್ದಾರೆ.

Leave a Reply

Top