fbpx

ವೈನ್ ಶಾಪ್ ಪರವಾನಿಗೆ ಅರ್ಜಿ ವಜಾ ಮಾಡಲು ಮನವಿ.

ಕೊಪ್ಪಳ- ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಈಗಾಗಲೇ ಇಲ್ಲಿ ೨ ವೈನ್ ಶಾಫ್‌ಗಳಿದ್ದು ಮತ್ತು ಒಂದು ಸಿ.ಎಲ್-೭ ರೆಸ್ಟೂರೆಂಟ್ ಸನ್ನದುದಾರಿಕೆಗೆ ಪರವಾನಿಗೆಯನ್ನು ನೀಡಲಾಗಿದ್ದು, ಪುನಃ ಅದೇ ಏರಿಯಾದಲ್ಲಿ ಮತ್ತೊಂದು ವೈನ್ ಶಾಪ್ ಪರವಾನಿಗೆ ಅರ್ಜಿಯನ್ನು ಸಲ್ಲಿಸಿದ್ದು ಸದರಿ ಅರ್ಜಿಯನ್ನು ವಜಾ ಮಾಡುವ ಕುರಿತು ಕೊಪ್ಪಳ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಒಂದೇ ಗ್ರಾಮದಲ್ಲಿ ೪ ರಿಂದ ೫ ಮದ್ಯದ ಮಾರಾಟ ಮಳಿಗೆ ಪ್ರಾರಂಭಿಸಿದರೆ ಕುಡಿಯದೇ ಸಮಾಜದ ಶಾಂತಿ ಹಾಳುಮಾಡಿದಂತೆಯೇ,  ಗಾಂದೀಜಿ ಕನಸು ನನಸು ಮಾಡಲು ಕೇಂದ್ರ ಸರಕಾರ ಹಲವಾರೂ ಯೋಜೆಗಳನ್ನು ಜಾರಿ ಮಾಡುತ್ತಿದೆ. ಇತ್ತ ರಾಜ್ಯ ಸರಕಾರ ಪರವಾನಿಗೆಯನ್ನು ನೀಡಿ ತನ್ನ ಹುಚ್ಚಾಟವನ್ನು ಮೆರೆದು ಸಾವ್ಜನಿಕರ ಆಕ್ರೋಶಕ್ಕೆ ಒಳಗಾಗಿದೆ. ಕಾರಣ ಇಲ್ಲಿರುವ ವೈನ್ ಶಾಪ್ ಗಳಲ್ಲಿಯೂ ಸಹ ಸರಕಾರವು ನಿಗಧಿಪಡಿಸಿದ ಬೆಲೆಗಿಂತಲೂ ಹೆಚ್ಚಿನ ರೀತಿಯಲ್ಲಿ ಮಾರಾಟ ಮಾಡಲು ಪರೋಕ್ಷವಾಗಿ ಸಹಕರಿಸಿ ಅವರನ್ನು ಇಂತಹ ಪರಿಸ್ಥಿತಿಯಲ್ಲಿ

ಜನಸಾಮಾನ್ಯರಿಗೆ ಹೆಚ್ಚಿನ ಬೆಲೆಯನ್ನು ಕೊಟ್ಟು ಮದ್ಯವನ್ನು ಖರೀದಿಸಿ ಅದರ ಅನುಭವ ಪಡೆಯುತ್ತಿರುವರು. ಇದೆಲ್ಲಾ ನೋಡಿಯು ಸಹ ಅಬಕಾರಿ ಇಳಖೆಯ ಅಧಿಖಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವರು.  ಶ್ರೀರಾಮ ನಗರದ ಜನಸಮಖ್ಯೆ ಸುಮಾರು ೧೩,೦೦೦ ಇದ್ದು ಈಗಾಗಲೇ ೩ ಸನ್ನದುದಾರರರು ಪರವಾನಿಗೆ ಪಡೆದು ವ್ಯವಹಾರ ನಡೆಸಿದ್ದಾರೆ. ಮತ್ತೊಂದು ವೈನ್ ಶಾಪ್ ಗೆ ಅರ್ಜಿ ಸಲ್ಲಿಸಿರುವುದು ತಿಳಿಸು ಬಂದಿರುತ್ತದೆ. ಇದರಿಂದ ಸಮಾಜದ ಸ್ವಾಸ್ಥ್ಯ, ಸಂಸ್ಕಾರ ಹಾಳುಮಾಡಿದಂತಾಗುತ್ತದೆ. ಹಿಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಅನೇಕ ಕನೂನು ತೊಡಕುಗಳು ಉಂಟಾಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿ ಕೂಡಲೇ ಈ ಕುರಿತು ಕ್ರಮವನ್ನು ಕೈಗೊಳ್ಳಬೇಕು. ಇವೆಲ್ಲವುಗಳನ್ನು ಪರಿಗಣಿಸಿ ಯಾವುದೇ ಒತ್ತಡಕ್ಕೆ ಒಳಗಾಗದೇ ಪರವಾನಿಗೇ ನೀಡಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ಯುವ ವೇದಿಕೆ ಮನವಿ ಸಲ್ಲಿದೆ. ಈ ಸಂದರ್ಭದಲ್ಲಿ ಉತ್ತರ ಕನಾಟಕ ಕಾರ್ಯಾಧ್ಯಕ್ಷ ಕೆ. ಚಂದ್ರಶೇಖರ ಶೆಟ್ಟಿ, ತಾಲೂಕಾ ಅಧ್ಯಕ್ಷ ಆಚಿಜನೇಯ ಭೋವಿ, ಜಿಲ್ಲಾಧ್ಯಕ್ಷ ಶರಣಯ್ಯ ವಿ. ಬಂಡಿಮಠ, ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಹೆಚ್. ನಾಯಕ, ಕೊಪ್ಪಳ ತಾಲುಕ ಅಧ್ಯಕ್ಷ ಬ್ರಹ್ಮಾನಂದ ಬಡಿಗೇರ, ತಾ. ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಟೀಲ, ಖಾಸಿಂ ಮುದೇನೂರು, ಮಹಮ್ಮದ ರಫಿ ಮುಂತಾದವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!