You are here
Home > Koppal News > ಅನಿಷ್ಟ ದೇವದಾಸಿ ಪದ್ಧತಿಯಿಂದ ಹೊರಬರಲು ಕರೆ ಬಿ. ದಶರಥ.

ಅನಿಷ್ಟ ದೇವದಾಸಿ ಪದ್ಧತಿಯಿಂದ ಹೊರಬರಲು ಕರೆ ಬಿ. ದಶರಥ.

ಕೊಪ್ಪಳ, ಸೆ.೧೧ (ಕ ವಾ) ಸಮಾಜದಲ್ಲಿ ಇತರರಿಗೆ ನೀಡಿರುವಂತೆ ದೇವದಾಸಿ ಮಹಿಳೆಯರಿಗೂ ಕೂಡಾ ಸಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ದೇವದಾಸಿ ಮಹಿಳೆಯರು ಈ ಅನಿಷ್ಟ ಪದ್ಧತಿಯಿಂದ ಹೊರಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದಶರಥ ಅವರು ಕರೆ ನೀಡಿದರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಿಳಾ ಅಭಿವೃದ್ದಿ ನಿಗಮ, ಇವರುಗಳ ಸಂಯುಕ್ತಾಶ್ರಯದಲ್ಲಿ   ದೇವದಾಸಿ ಮಹಿಳೆಯರಿಗಾಗಿ ತಾಲೂಕಿನ ಹಿರೇಬಗನಾಳ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
     ದೇವದಾಸಿ ಮಹಿಳೆಯರಿಗಾಗಿ ಸರಕಾರದಲ್ಲಿ ಹಲವಾರು ಸೌಲಭ್ಯಗಳಿವೆ. ದೇವದಾಸಿ ಮಹಿಳೆಯರು ಇಂತಹ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು, ಅನಿಷ್ಟ ಪದ್ದತಿಯಿಂದ ಹೊರಬೇಕಾಗಿದೆ. ದೇವದಾಸಿ ಮಹಿಳೆಯರಿಗೂ ಕೂಡಾ ಎಲ್ಲಾ ರೀತಿಯ ಕಾನೂನಿನ ಪ್ರಕಾರ ಹಕ್ಕುಗಳಿವೆ ಎಂದು ಅವರು ತಿಳಿಸಿದರು.
     ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ವಂಸತ ಪ್ರೇಮಾ ಮಾತನಾಡಿ, ದೇವದಾಸಿ ಪದ್ಧತಿ ಸಮಾಜದಲ್ಲಿ ಅದರಲ್ಲಿಯೂ ಮಹಿಳೆಯರಿಗೆ ಕಳಂಕ ತರುವ ಕೆಟ್ಟ ಸಂಪ್ರದಾಯವಾಗಿದ್ದು, ಪ್ರಸ್ತುತ ದಿನಮಾನಗಳಲ್ಲಿ ಈ ಪದ್ಧತಿಯಿಂದ ಹೋರ ಬರುವುದು ಅವಶ್ಯವಾಗಿದೆ. ಎಲ್ಲಾ ದೇವದಾಸಿ ಮಹಿಳೆಯರು ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಅಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ದೇವದಾಸಿಯರು ಅಕ್ಷರ ಕಲಿತು ಸಾಕ್ಷರರಾಗಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. 
     ದೇವದಾಸಿ ಪುನರ್ವಸತಿ ಯೋಜನೆಯ ಅಭಿವೃದ್ದಿ ನಿರೀಕ್ಷಕಿ ಸುಧಾ ಎಂ, ಚಿದ್ರಿ  ದೇವದಾಸಿ ಪುನರ್ವಸತಿ ಯೋಜನೆಯಡಿ ದೇವದಾಸಿ ಮಹಿಳೆಯರಿಗಾಗಿ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು. ವಕೀಲ ಹನುಮಂತರಾವ್, ಮಹಿಳಾ ಕಾನೂನು ಹಾಗೂ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಕುರಿತು ಹಾಗೂ ಯೋಜನಾ ಅನುಷ್ಟಾನಾಧಿಕಾರಿ ದಾದೇಸಾಬ ಹಿರೇಮನಿ, ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು.
     ಗ್ರಾಮ ಪಂಚಾಯತಿ ಅಧ್ಯಕ್ಷ ಹೇಮಣ್ಣ ದೇವರಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕ ಪಂಚಾಯತಿ ಸದಸ್ಯೆ ಲಕ್ಷ್ಮವ್ವ ಮೇಟಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಮಲವ್ವ, ಮಹಿಳಾ ಅಭಿವೃದ್ದಿ ನಿಗಮದ ಸ್ವ ಉದ್ಯೋಗ ಮಾರ್ಗದರ್ಶಕಿ ಕುಮಾರಿ ಗೀತಾ ಹಿರೇಮನಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಉಪಸ್ಧಿತರಿದ್ದರು.  ಕವಿತಾ ಓಲಿ ನಿರೂಪಿಸಿದರು.

Leave a Reply

Top