ರಂಜಾನ್ ಈದುಲ್ ಫಿತರ್ ಪ್ರಯುಕ್ತ ಈದ್ಗಾದಲ್ಲಿ ಸ್ವಚ್ಛತಾ ಕಾರ್ಯಾರಂಭ.

ಕೊಪ್ಪಳ – ಮುಸ್ಲಿಂ ಸಮುದಾಯದ ಪವಿತ್ರ ಈ
    ಈದುಲ್ ಫಿತರ್ ರಂಜಾನ್ ಹಬ್ಬವನ್ನು ಜು.೧೮ ರ ಶನಿವಾರದಂದು ಜರುಗುವ ಸಂಪೂರ್ಣ ಸಾಧ್ಯತೆಗಳಿದ್ದು, ಶುಕ್ರವಾರದಂದು ಚಂದ್ರ ಕಂಡ ಮರು ದಿನ ಹಬ್ಬವನ್ನು ಆಚರಣೆ ಮಾಡುವ ಸಂಪ್ರದಾಯದಂತೆ ಈ ಹಬ್ಬದ ಪ್ರಯುಕ್ತ ಈದ್ಗಾ ಮೈದಾನಕ್ಕೆ ಬರುವ ಸಹಸ್ರಾರು ಸಂಖ್ಯೆಯ ಮುಸ್ಲಿಂ ಬಾಂಧವರಿಗೆ ಅನುಕೂಲವಾಗಲು ಈದ್ಗಾ ಮೈದಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
    ಈ ಸಂದರ್ಭದಲ್ಲಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಸೇರಿದಂತೆ ನಗರಸಭೆ ಸದಸ್ಯರಾದ ಸಲೀಂಸಾಬ, ಮೌಲಾಸಾಬ ಜಮೇದಾರ, ಖಾಜಾವಲಿ ಬನ್ನಿಕೊಪ್ಪ ಅಲ್ಲದೇ ಅಜ್‌ಗರಲಿ ನವಾಬ್, ರಫೀಕ್ ಧಾರವಾಡ, ಮಹೆಬೂಬ ಮಚ್ಚಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ದುಲ್ ಫಿತರ್ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗಾಗಿ ನಗರದ ಹೊರ ವಲಯ ಹುಲಿಕೆರೆ ಬಳಿ ಇರುವ ಈದ್ಗಾ ಮೈದಾನದಲ್ಲಿಂದು ಸ್ವಚ್ಛತಾ ಕಾರ್ಯಾರಂಭಗೊಂಡಿದ್ದು, ಈ ಸ್ವಚ್ಛತಾ ಕಾರ್ಯದಲ್ಲಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಸೇರಿದಂತೆ ನಗರಸಭೆಯ ಸದಸ್ಯರು ಭಾಗವಹಿಸಿದ್ದರು.

Leave a Reply