ಬಾಬು ಜಗಜೀವನರಾಂ, ಅಂಬೇಡ್ಕರ್ ಪ್ರಶಸ್ತಿ ಅರ್ಜಿ ಸಲ್ಲಿಕೆಗೆ ಮಾ. ೧೦ ಕೊನೆಯ ದಿನ.

ಕೊಪ್ಪಳ
ಮಾ. ೦೪ (ಕ ವಾ) ಪರಿಶಿಷ್ಟರ ಶ್ರೇಯಸ್ಸಿಗಾಗಿ ಶ್ರಮಿಸಿದವರಿಗೆ ನೀಡಲಾಗುವ
ಡಾ. ಬಾಬು ಜಗಜೀವನರಾಂ ಮತ್ತು ಡಾ. ಅಂಬೇಡ್ಕರ್ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಜಿ
ಸಲ್ಲಿಸಲು ಮಾ. ೧೦ ಕೊನೆಯ ದಿನವಾಗಿರುತ್ತದೆ.
      ಏಪ್ರಿಲ್ ೦೫ ರಂದು ಡಾ. ಬಾಬು
ಜಗಜೀವನರಾಂ ರವರ ೧೦೯ ನೇ ಜಯಂತಿ ಹಾಗೂ ಏ. ೧೪ ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫
ನೇ ಜಯಂತಿ ಆಚರಣೆಯ ಸಂದರ್ಭಧಲ್ಲಿ,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ
ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ
ವ್ಯಕ್ತಿಗಳಿಗೆ ನೀಡಲಾಗುವ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್
ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಸಿಸಲು ಸರ್ಕಾರ ಉದ್ದೇಶಿಸಿದೆ. ಕೊಪ್ಪಳ ಜಿಲ್ಲಾ
ವ್ಯಾಪ್ತಿಯಲ್ಲಿ ಅರ್ಹರಿರುವ ಗಣ್ಯ ವ್ಯಕ್ತಿಗಳು, ತಮ್ಮ ಸಾಧನೆ, ಘಟನೆ, ವ್ಯಕ್ತಿ
ವಿಶ್ಲೇಷಣೆ ಇತ್ಯಾದಿ ವಿವರಗಳುಳ್ಳ ದಾಖಲೆ ಸಹಿತದ ವಿವರವನ್ನು ನಿಗದಿತ ನಮೂನೆಯಲ್ಲಿ
ಭರ್ತಿ ಮಾಡಿ, ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಉಪನಿರ್ದೇಶಕರು, ಸಮಾಜ
ಕಲ್ಯಾಣ ಇಲಾಖೆ, ಕೊಪ್ಪಳ ಅವರಿಗೆ ಮಾ. ೧೦ ರ ಒಳಗಾಗಿ ಸಲ್ಲಿಸಬೇಕು.  ನಿಗದಿತ ಅರ್ಜಿ
ನಮೂನೆಯನ್ನು ಕಚೇರಿಯಿಂದ ಉಚಿತವಾಗಿ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆ
ಉಪನಿರ್ದೇಶಕ ಬಿ. ಕಲ್ಲೇಶ್ ಅವರು ತಿಳಿಸಿದ್ದಾರೆ.

Please follow and like us:
error