ಬೂದಗುಂಪಾದಲ್ಲಿ ಜನಸಂಪರ್ಕ ಸಂವಾದ ಸಭೆ.

 ಕೊಪ್ಪಳ ಸೆ. ೧೪ (ಕ ವಾ) ಜಿಲ್ಲಾಡಳಿತ,  ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮ ಕೊಪ್ಪಳ ತಾಲೂಕಿನ ಬುದಗುಂಪಾ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ  ಜರುಗಿತು.
        ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯಕ್ಕೆ  ಸಂಬಂಧಿಸಿದಂತೆ ಸಭೆಯಲ್ಲಿ  ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆ-೨೦೧೨ನ್ನು ಸರ್ಕಾರವು ಜಾರಿಗೆಗೊಳಿಸಿದ್ದು, ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಮೇಲೆನ ದೌರ್ಜನ್ಯವನ್ನು ತಡೆಗಟ್ಟುವುದಾಗಿದೆ. ಈ ಕಾಯ್ದೆಯಡಿಯಲ್ಲಿ ೧೮ ವರ್ಷದೂಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಸಂಜ್ಞೆ, ಶಾಬ್ದಿಕವಾಗಿ ಕಿರುಕುಳನ್ನು ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದಲ್ಲಿ ಅದು ವಿಚಾರಣಾ ಅರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ೧೮ ವರ್ಷದೂಳಗಿನ ಬಾಲಕಿಯು ತಾನೇ ಸ್ವತಃ ಇಚ್ಛೆಪಟ್ಟು ಯುವಕನೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಿದ್ದರೂ ಸಹ ಅದರಿ ಕಾಯ್ದೆಯಡಿ ಆ ಯುವಕನದೇ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ೭ರಿಂದ ಜೀವಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ ಯುವಕ/ಯುವತಿಯರು ಪ್ರೀತಿ ಪ್ರೇಮ ಎಂದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳದೇ ವಿದ್ಯಾಭ್ಯಾಸದ ಕಡೇ ಗಮನವನ್ನು ಹರಿಸಿ  ಹಾಗೂ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಿ ಎಂದು ಮನವಿ ಮಾಡಿದರು.
ಮಕ್ಕಳ ಸಹಾಯವಾಣಿ ಯೋಜನೆಯ ಶರಣಪ್ಪ ಹಿರೇತೆಮ್ಮಿನಾಳ ಅವರು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಭಿಸಲಾಗಿದೆ.  ಸಮುದಾಯದಲ್ಲಿ ಸಂಕಷ್ಠಕೊಳಗಾದ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣೆಯನ್ನು ಆರಂಭಿಸಲಾಗಿದೆ.  ೧೦೯೮ ದೂರವಾಣಿಗೆ ಕರೆ ಮಾ
         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುದಗುಂಪಾ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಎ.ಜಿ. ಸುಜಾತ ಅವರು ವಹಿಸಿದ್ದರು. ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಮೆಹಬೂಬು, ಅಂಗನವಾಡಿ ಮೇಲ್ವಿಚಾರಕಿಯರಾದ ಎಚ್.ಎಚ್. ಚಿಕ್ಕವಡ್ಡಟ್ಟಿ ಮತ್ತು ಲಕ್ಷ್ಮೀ ಬಾಗೇವಾಡಿರವರು ಭಾಗವಹಿಸಿದ್ದರು.  ರವಿಕುಮಾರ ಪವಾರ್ ಪ್ರಾಸ್ತಾವಿಕ ಮಾತನಾಡಿದರು. ಯಮುನಮ್ಮ ನಿರೂಪಿಸಿ ವಂದಿಸಿದರು.

ಡಿ, ಸಂಕಷ್ಠಕೊಳಗಾದ ಮಕ್ಕಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬಹುದಾಗಿದೆ. ಮಾಹಿತಿಯನ್ನು ನೀಡಿದ ೬೦ ನಿಮಿಷದೂಳಗೆ ಸದರಿ ಮಕ್ಕಳನ್ನು ರಕ್ಷಿಸಿ ಅಗತ್ಯ ಪುನರವಸತಿ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

Please follow and like us:
error