ಮಕ್ಕಳ ರಕ್ಷಣೆಗೆ ಸುರಕ್ಷತಾ ನೀತಿ ಜಾರಿ ಅಗತ್ಯ- ಕೃಷ್ಣ ಉದಪುಡಿ.

ಕೊಪ್ಪಳ, ಡಿ. ೦೧ (ಕ ವಾ)  ಮಕ್ಕಳು ಎಲ್ಲ ಬಗೆಯ ದೌರ್ಜನ್ಯದಿಂದ ಮುಕ್ತವಾಗಿರಬೇಕು ಹಾಗೂ ಅವರ ಹಕ್ಕುಗಳ ರಕ್ಷಣೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತಾ ನೀತಿ ಜಾರಿಗೆ ಬರುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಭಿಪ್ರಾಯಪಟ್ಟರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ‘ರಾಜ್ಯ ಮಕ್ಕಳ ಸುರಕ್ಷತಾ ನೀತಿ-೨೦೧೫’ ರಚನೆ ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಣ ಸಂಸ್ಥೆಗಳು ಕಾಳಜಿ ವಹಿಸಬೇಕು.  ಸದ್ಯ ಇರುವ ಸುರಕ್ಷತಾ ಕ್ರಮಗಳಿಂದ ನಿರೀಕ್ಷಿತ ಸುಧಾರಣೆ ಕಂಡುಬರುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಮಕ್ಕಳ ಉತ್ತಮ ಸುರಕ್ಷತಾ ನೀತಿ ರಚನೆಯಾಗಬೇಕಿರುವುದು ಅತಿ ಅಗತ್ಯವಾಗಿದೆ.  ಮಕ್ಕಳು, ದೇಶದ ಭವಿಷ್ಯವಾಗಿದ್ದು, ಮಕ್ಕಳ ಸಮರ್ಪಕ ರಕ್ಷಣೆಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ.  ರಾಜ್ಯದಲ್ಲಿ ಮಕ್ಕಳ ರಕ್ಷಣೆಯ ಕುರಿತು ಜಾರಿಯಾಗುವ ಸುರಕ್ಷತಾ ನೀತಿ, ಇಡೀ ದೇಶಕ್ಕೆ ಮಾದರಿಯಾಗಬಹುದಾಗಿದೆ.  ಮಕ್ಕಳ ಸುರಕ್ಷತೆಯಲ್ಲಿ ಅವರ ತಂದೆ, ತಾಯಿಯ ಜವಾಬ್ದಾರಿಯೂ ಇದೆ.  ಮಕ್ಕಳ ಏಳಿಗೆಗೆ ವಿವಿಧ ಇಲಾಖೆಗಳು ಹತ್ತು ಹಲವು ಕಾರ್ಯಕ್ರಮ ರೂಪಿಸುತ್ತಿವೆ.  ಈಗಿನದು ಬುದ್ದಿವಂತ ಸಮಾಜವಾಗಿದ್ದರೂ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.  ಮಕ್ಕಳ ರಕ್ಷಣೆ ದೇಶದ ಭವಿಷ್ಯವನ್ನು ರಕ್ಷಿಸಿದಂತೆ.  ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರ ಸುರಕ್ಷತೆಯ ಕುರಿತು ಸಮಗ್ರ ಹಿತಾಸಕ್ತಿಯುಳ್ಳ ಸಮರ್ಪಕ ನೀತಿ ಶೀಘ್ರ ರಚನೆಯಾಗಲಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಆಶಯ ವ್ಯಕ್ತಪಡಿಸಿದರು.
     ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎನ್.ಆರ್. ವಿಜಯಕುಮಾರ್ ಅವರು ಮಾತನಾಡಿ, ಮಕ್ಕಳ ಸುರಕ್ಷತಾ ನೀತಿ, ಇಡೀ ರಾಜ್ಯಾದ್ಯಂತ ಒಂದೇ ತೆರನಾಗಿರಬೇಕು.  ಮಕ್ಕಳ ಸುರಕ್ಷತೆಯ ಕುರಿತು ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಬಗ್ಗೆ ಚಿಂತನೆ ನಡೆದು, ಕಾರ್ಯಗತಗೊಳಿಸಲು ಯೋಜಿಸಲಾಗಿದೆ.  ಈಗಾಗಲೆ ಮಕ್ಕಳ ಸುರಕ್ಷತಾ ನೀತಿ-೨೦೧೫ ರ ಕರಡು ಪ್ರತಿ ಸಿದ್ಧವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಮಾಲೋಚಿಸಿ, ಸುರಕ್ಷತಾ ನೀತಿಯ ರೂಪರೇಷೆ, ಸಾಧಕ ಬಾಧಕ ಹಾಗೂ ಮಾದರಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು, ಅಭಿಪ್ರಾಯ ಸಂಗ್ರಹಿಸಿ, ಮಕ್ಕಳ ಸುವ್ಯವಸ್ಥಿತ ಸುರಕ್ಷತಾ ನೀತಿ ಜಾರಿಗೊಳ್ಳಲಿದೆ.  ೧೯೮೯ ರಲ್ಲಿ ವಿಶ್ವಸಂಸ್ಥೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಒಡಂಬಡಿಕೆಗೆ ಸಹಿ ಮಾಡಿರುವ ದೇಶಗಳಲ್ಲಿ ಭಾರತವೂ ಒಂದು.  ಸದ್ಯ ಸಿದ್ಧವಾಗಿರುವ ಕರಡು ನೀತಿಯಲ್ಲಿ ಯಾವುದೇ ಬದಲಾವಣೆಗಳು ಅಗತ್ಯವಿದ್ದಲ್ಲಿ, ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಅಥವಾ ಬುದ್ದಿಜೀವಿಗಳು ತಮ್ಮ ಸಲಹೆ, ಸೂಚನೆಗಳನ್ನು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಮೂಲಕ ಸಲ್ಲಿಸಬಹುದಾಗಿದೆ.  ಮಕ್ಕಳ ಸುರಕ್ಷತಾ ನೀತಿಯ ಕುರಿತು ಎಲ್ಲಾ ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.  ಸಮಗ್ರ ಚಿಂತನೆ ಹಾಗೂ ಸಮಾಲೋಚನೆಯ ನಂತರ ಮಕ್ಕಳ ಸುರಕ್ಷತಾ ನೀತಿ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದರು.
     ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶೇಖರಗೌಡ ಅವ
     ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಸುರಕ್ಷತಾ ನೀತಿ ವಿಷಯ ಕುರಿತಂತೆ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ಟ ಅವರು ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಶಿಕ್ಷಣ ಇಲಾಖೆಯ ಆರ್.ಎಸ್. ಪತ್ತಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಲೋಕೇಶ್, ಯುನಿಸೆಫ್‌ನ ಹರೀಶ್ ಜೋಗಿ ಉಪಸ್ಥಿತರಿದ್ದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವಂದಿಸಿದರು.  ರವಿ ಪವಾರ್ ಕಾರ್ಯಕ್ರಮ ನಿರೂಪಿಸಿದರು.

ರು ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಸಮಗ್ರ ಚಿಂತನೆ, ಕಾರ್ಯಕ್ರಮಗಳು ನಡೆಯುತ್ತಿದ್ದರೂ, ವಾಸ್ತವದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲಾಗುತ್ತಿಲ್ಲ.  ಮಕ್ಕಳಿಗಾಗಿ ಇರುವ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದೆ.  ಶಾಲೆಗಳಿಗೆ ಶೌಚಾಲಯ, ಕಂಪೌಂಡ್, ಶಿಕ್ಷಕರ ಕೊರತೆಗಳ ಪರಿಹಾರಕ್ಕೆ ಚಿಂತನೆ ನಡೆಸುವ ರೀತಿಯಲ್ಲಿ, ಮಕ್ಕಳ ರಕ್ಷಣೆ, ಸುರಕ್ಷತೆ ಹಾಗೂ ಹಕ್ಕುಗಳನ್ನು ದೊರಕಿಸಲೂ ಸಹ ಚಿಂತನೆಗಳು ನಡೆಯಬೇಕು ಎಂದರು.

Related posts

Leave a Comment