ಕ್ರೀಡಾ ದಿನೋತ್ಸವ ಕಾರ್ಯಕ್ರಮ.

ಕೊಪ್ಪಳ-02- ತಾಲೂಕಿನ ಬೂದಗುಂಪಾ ಗ್ರಾಮದ ಕುವೆಂಪು ಹಿರಿಯ ಹಾಗೂ ಪ್ರೌಢ ಶಾಲೆಯ ವಾರ್ಷಿಕೊತ್ಸವದ ಅಂಗವಾಗಿ ಶಾಲೆಯ ಪಾಲಕರಿಗಾಗಿ ಕ್ರೀಡಾ ದಿನೋತ್ಸವ ಕಾಂiಕ್ರಮವನ್ನು ಪೆ.೦೩.ರಂದು ಬೆಳಗ್ಗೆ.೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕ್ರೀಡಾ ಧ್ವಜಾರೋಹಣವನ್ನು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ನೇರೆವೇರಿಸುವರು.ಕ್ರೀಡಾ ಜ್ಯೋತಿಯನ್ನು ಗ್ರಾಮೀಣ ಪೊಲೀಸ್ ಠಾಣೆಯ ವೃತ್ತ ನಿರಿಕ್ಷಕರಾದ ಮೋಹನ ಪ್ರಸಾದ ಬೆಳಗಿಸುವರು.ಅಧ್ಯಕ್ಷತೆಯನ್ನು ಮುನಿರಾಬಾದ ವಲಯ ಶಿಕ್ಷಣ ಸಂಯೋಜಕರಾದ ಮೈಲಾರಪ್ಪ ಕುರಿ ವಹಿಸುವರು.ಮುಖ್ಯ ಅತಿಥಿಗಳಾಗಿ ವಿಜಯವಾಣಿ ಜಿಲ್ಲಾ ವರದಿಗಾರರಾದ ದೇವು ನಾಗನೂರು,ನಿವೃತ್ತ ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ನಾಯಕ,ಸಿ.ಆರ್.ಪಿ.ವಿಷ್ಣುತಿರ್ಥಿ,ವೈ.ಎಫ್.ಕುರಿ,ಕುಬೇರ ಮಜ್ಜಗಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪೋಲಿಸ್‌ಪಾಟೀಲ್ ತಿಳಿಸಿದ್ದಾರೆ.

Leave a Reply