ಸ್ವಚ್ಛ ಭಾರತ ಮಿಷನ್ : ಸಾಕಾರಗೊಳಿಸಲು ಕೊಪ್ಪಳ ನಗರಸಭೆ ಮನವಿ

 ಭಾರತ ಸರಕಾರ ಮತ್ತು ರಾಜ್ಯ ಸರಕಾರ  ಅ. ೩೧ ರವರೆಗೆ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ್ದು, ಇದಕ್ಕಾಗಿ ಎಲ್ಲಾ ಸಮುದಾಯ, ವಿವಿಧ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರೆ ಭಾಗಿದಾರರು, ಸ್ವಚ್ಛ ಭಾರತ್ ಮಿಷನ್‌ನ ಉದ್ದೇಶ ಮತ್ತು ಇದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಸ್ವ- ಇಚ್ಛೆಯಿಂದ ಭಾಗವಹಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಸಾಕಾರಗೊಳಿಸಲು ಎಲ್ಲರ ಸಹಕಾರ ಅವಶ್ಯಕವಾಗಿದ್ದು, ಈ ಯೋಜನೆಯನ್ನು ಸಾಕಾರಗೊಳಿಸಲು ಕೊಪ್ಪಳ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ. 
ಈಗಾಗಲೇ ಆಚರಣೆ ಸಂಬಂಧವಾಗಿ ವಿಷಯಾಧಾರಿತ ನೈರ್ಮಲ್ಯ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ತಮ್ಮ ಮನೆಗಳ ಮತ್ತು ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಬೇಕು, ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಬಂಧಿತ ಸಮುದಾಯ ಪಾತ್ರ ಸಹ ಬಹುಮುಖ್ಯವಾಗಿದ್ದು, ಈ ಕಾರ್ಯಕ್ರಮ ಅಭಿಯಾನದಲ್ಲಿ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲು ತಿಳಿಸಿದೆ, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗೆ ಸಹಕರಿಸಬೇಕು, ಬಸ್ ನಿಲ್ದಾಣ/ರಸ್ತೆ/ಬೀದಿ/ಮಾರುಕಟ್ಟೆ/ಸಾರ್ವಜನಿಕ ಸ್ಥಳಗಳು/ಪಾದಚಾರಿ ರಸ್ತೆ/ ರೈಲು ನಿಲ್ದಾಣದ ಸುತ್ತ ಮುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು, ಸರ್ಕಾರಿ ಕಛೇರಿ/ಆಸ್ಪತ್ರೆ/ಶಾಲೆ/ಕಾಲೇಜುಗಳಲ್ಲಿಯ ಶೌಚಾಲಯಗಳ ಸ್ವಚ್ಛತೆಗೆ ಸಂಬಂಧಪಟ್ಟ ಇಲಾಖೆಯವರು ಮುತವರ್ಜಿವಹಿಸಿ ನಿರ್ವಹಣೆ ಕ್ರಮಕೈಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಉಗುಳುವುದು ಸರಿಯಾದ ಕ್ರಮವಲ್ಲ ಸ್ವಚ್ಛ ಭಾರತ ಮಿಷನ್ ಸಕಾರಗೊಳಿಸಲು ಸಹಕರಿಸಬೇಕೆಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
Please follow and like us:
error