ತಾಲೂಕಿನಲ್ಲಿ ಚೆಪ್ಪೆಬೇನೆಯಿಂದ ಪಶುಗಳ ಮರಣ

ಕೊಪ್ಪಳ: ತಾಲೂಕಿನ  ಕುಕನಪಳ್ಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತಿಚೆಗೆ ರೈತರು ಕಂಗಾಲಾಗಿದ್ದಾರೆ ಕಾರಣ ಇತ್ತೀಚೆಗೆ ರೈತನ ಮಿತ್ರನಾದ ಬಿಡಿದನಗಳು ವಿವಿದ ಬೇನೆಗಳಿಂದ ಸಾವನ್ನಪ್ಪುತ್ತಿದ್ದು ಸಂಬಂದಪಟ್ಟ ಇಲಾಖೆಯವರಿಗೆ ಈ ಕುರಿತು ಮಾಹಿತಿ ನೀಡಿ ಸಹಾಯಬೇಡಿದೆವು ಆದರೆ ಕಾಟಾಚಾರಕ್ಕೆ ವೈದ್ಯರು ಬಂದು ಹೋಗಿದ್ದಾರೆ. ಆದರೆ ಸರಕಾರ ಇದರ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 
ಇಲ್ಲಿಯವರೆಗೂ ಸತ್ತಿರುವ ದನಕರುಗಳಿಗೆ ಯಾವುದೇ ಪರಿಹಾರ ನೀಡಿದ ಸರಕಾರ ಬಡವರ ಮತ್ತು ರ‍್ಯತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ವಿದಾನಸೌದದಲ್ಲಿ ಬೊಬ್ಬೆ ಹೊಡಿಯುತ್ತಾರೆ. ಇಲ್ಲಿ ರೈತ ಜೋವನೋಪಾಯಕ್ಕೆಂದು ಕಟ್ಟಿ ಬೆಳೆಸಿದ ನೂರಾರು ದನಕರುಗಳು ಬೆಳಗರಿಯುವ ಮುಂಚೆ ಮರಣ ಹೊಂದುತ್ತಿವೆ. ಈ ಕುರಿತು ಪಶು ಇಲಾಖೆಯಲ್ಲಿ ವಿಚಾರಿಸಿದರೆ. ಇಲ್ಲಿ ಯಾವುದೇ ದನ ಕರು ಸತ್ತರೆ ನಾವು ಪರಿಹಾರ ನೀಡುವುದಿಲ್ಲವೆಂದು. ಕಾರವಾಗಿ ಹೇಳುತ್ತಿದ್ದಾರೆ. 
ವಿನಾಕಾರಣ ರೋಗಕ್ಕೆ ತುತ್ತಾಗಿ ದನಕರುಗಳ ಸಾಯುತ್ತಿದ್ದರು ಇದರ ನಿಯಂತ್ರಣಕ್ಕೆಂದು ಯಾವುದೆ ಓಷದಿಗಳು ಇಲ್ಲಿ ದೊರೆಯುತ್ತಿಲ್ಲ. ಕೇಳಿದರೆ ನಮಗೆ ಗೊತ್ತಿಲ್ಲ ಸರಕಾರ ವನ್ನೆಕೇಳಿ ಎಂದು ವೈದ್ಯರು ಹೆಳುತ್ತಿದ್ದಾರೆ. ಬಾಯಿ ಇಲ್ಲದ ಈ ಪಡಪಾಯಿದನ ಕರುಗಳು ತಮ್ಮನೋವನ್ನು ಯಾರಿಗೆ ಹೇಳುತ್ತವೇ. ಅವುಗಳ ನೋವುಗಳಿಗೆ ಸ್ಪಂದಿಸುವ ವ್ಯವದಾನ ಇಲಾಖೆಯವರಿಗಿಲ್ಲವಾಗಿದೆ. 
ಇತ್ತಿಚೆಗೆ ಕುಕನಪಳ್ಳಿ ಗ್ರಾಮದ ಸಣ್ಣ ಹನಮಪ್ಪ ತಂ ಸಕ್ರಪ್ಪ ಎಲಮಗೇರಿ ಇವರ ೯ ಬಿಡಿದನಗಳು ಹಸುನೀಗಿವೆ. ಇವರ ನಷ್ಟ ತುಂಬಿಕೊಡುವವರು ಯಾರು? ಇಲಾಖೆಯೋ? ಜನಪ್ರತಿನಿಧಿಗಳೋ? ಸರಕಾರವೋ? ಕೂಡಲೇ ಸಂಬಂದ ಪಟ್ಟವರು ಇತ್ತಕಡೆ ಗಮನ ಹರಿಸಬೇಕೆಂದು  ಕುರಿ ಮತ್ತು ದನಗಳ ಸಾಕಣಿಕೆ ಸಂಘ ಜಿಲ್ಲಾ ಘಟಕ ಕೊಪ್ಪಳ ದ ಜಿಲ್ಲಾ ಅಧ್ಯಕ್ಷ ಹನಮೇಶಪ್ಪ ಕಾಮನೂರ, ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಹರಸಿನಕೇರಿ, ತಾಲೂಕ ಅಧ್ಯಕ್ಷರು ಹನಂತಪ್ಪ ಚಿಂಚಲಿ ಬಿಳೆಬಾವಿ,  ಮನವಿ ಮಾಡಿಕೊಂಡಿದ್ದಾರೆ. 
Please follow and like us:
error