ಕೆಸರಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ಅಟ್ಟಹಾಸ

ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ಅಟ್ಟಹಾಸ ಮೆರೆದಿದೆ.ಗ್ರಾಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಹುಚ್ಚುನಾಯಿ ಕಡಿದಿದೆ.ಒರ್ವ  ನಾಲ್ಕು ವರ್ಷದ ಪುಟ್ಟ ಬಾಲಕಿ ಅಮೂಲ್ಯ ಗಂಭೀರ ಗಾಯಗೊಂಡಿದ್ದು ಬಾಲಕಿಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಿದ್ದಾರೆ.ಅಲ್ದೆ ಗ್ರಾಮದ ಹತ್ತಕ್ಕೂ ಹೆಚ್ಚು ಜಾನುವಾರು ಹುಚ್ಚುನಾಯಿ ಕಡಿತಕ್ಕೆ ಒಳಗಾಗಿವೆ.ಕೆಸರಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಹುಚ್ಚು ನಾಯಿ ದಾಳಿ ಮಾಡಿದ್ದು ಸಿಕ್ಕ ಸಿಕ್ಕ ಜನರಿಗೆ ಕಡಿದಿದೆ. ನಾಯಿ ಹಿಡಿಯಲು ಬಂದಂತಹ ಜನರಿಗೆ ಸಿಕ್ಕಸಿಕ್ಕ ಕಡೆ ಮೂಖಾ ಮೂತಿ ನೋಡದೆ ಹುಚ್ಚುನಾಯಿ ಕಡಿದಿದೆ.ಗಾಯಗೊಂಡ ಜನರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇಷ್ಟೆಲ್ಲಾ ಹುಚ್ಚುನಾಯಿ ಅವಾಂತರ ಸೃಷ್ಟಿ ಮಾಡಿದ್ರೂ ಯಾವೊಬ್ಬ ಅಧಿಕಾರಿಯೂ ಇತ್ತ ಕಡೆ ತಿರುಗಿ ನೋಡಿಲ್ಲ.ಇನ್ನು ನಾಯಿ ಹಿಡಿಯಲು ಗ್ರಾಮಸ್ಥರು ಬೆಳಿಗ್ಗೆಯಿಂದ ಹರಸಾಹಸ ಪಡುತಿದ್ದಾರೆ.ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ನಾಯಿ ಹಿಡಿಯಲು ಏನಾದ್ರೂ ವ್ಯವಸ್ಥೆ ಮಾಡಬೇಕು ಅನ್ನುವದು ಗ್ರಾಮಸ್ಥರ ಅಳಲು
Please follow and like us:
error