ಅಪಘಾತ ರಹಿತ ಸೇವೆ ಸಲ್ಲಿಸಿದ ೧೫ ಚಾಲಕರಿಗೆ ಬೆಳ್ಳಿ ಪದಕ ವಿತರಣೆ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ರಹಿತ

ಸೇವೆ ಸಲ್ಲಿಸಿದ ಕೊಪ್ಪಳ ಮತ್ತು ಹೊಸಪೇಟೆ ವಿಭಾಗದ ೧೫ ಚಾಲಕರಿಗೆ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಿದರು.

  ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ ಆವರಣದಲ್ಲಿ ಏರ್ಪಡಿಸಲಾಗಿದ್ದ ’ಕಿಷ್ಕಿಂದ’ ನಗರ ಸಾರಿಗೆ ಬಸ್‌ಗಳ ಉದ್ಘಾಟನೆ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ, ಚಾಲಕರಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
  ಅಪಘಾತ ರಹಿತ ಸೇವೆಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪಡೆದ ಚಾಲಕರ ವಿವರ ಇಂತಿದೆ.  ಕೊಪ್ಪಳ ವಿಭಾಗದ ಹೆಚ್. ಎಂ. ಸಂಕನೂರ, ಹೊಸಪೇಟೆ ವಿಭಾಗದ ಜೆ. ಶ್ರೀನಿವಾಸ, ರವೀಂದ್ರ, ಬಸವರಾಜ್, ಟಿ. ಯಮುನಪ್ಪ, ಬಸವರಾಜ್.  ಕುಷ್ಟಗಿ ವಿಭಾಗದ ಉಮೇಶ್.  ಕೂಡ್ಲಿಗಿ ವಿಭಾಗದ ಬಿ. ಮಂಜಪ್ಪ, ಎಸ್. ಬಾಷಾ, ಕೆ. ಸುರೇಶ್.  ಹಡಗಲಿ ವಿಭಾಗದ ಪರಮೇಶ್ವರ ನಾಯಕ್, ಎನ್.ಕೆ. ರಮೇಶ್, ಕೆ. ಚಂದ್ರ, ಎ.ಕೆ. ಮಹಾಂತೇಶ್.  ಸಂಡೂರು ವಿಭಾಗದ ಸುರೇಶ್.  
  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಸಂಸದ ಶಿವರಾಮಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ,    ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error