You are here
Home > Koppal News > ಗವಿಮಠ ಜಾತ್ರೆಗೆ ದವಸ ಧಾನ್ಯ ಸಮರ್ಪಣೆ

ಗವಿಮಠ ಜಾತ್ರೆಗೆ ದವಸ ಧಾನ್ಯ ಸಮರ್ಪಣೆ

 ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಜಾತ್ರಾ ವೈಶಿಷ್ಟ್ಯತೆಗಳಲ್ಲಿ ಅನ್ನದಾಸೋಹವು ಒಂದಾಗಿದೆ. ಜನವರಿ ೦೭ ರಿಂದ ಪ್ರಾರಂಭಗೊಂಡು ಅಮವಾಸ್ಯೆಯವರೆಗೂ ನಿರಂತರವಾಗಿ ನಿತ್ಯ ಮುಂಜಾನೆ ಹಾಗೂ ಸಾಯಂಕಾಲದವರೆಗೂ ಅನ್ನ ದಾಸೋಹವು ಪವಾಡ ಸಾದೃಶ್ಯವಾಗಿ ನಡೆಯುತ್ತಲಿದೆ.  ಈ ಅನ್ನ ದಾಸೋಹದಲ್ಲಿ ಕೊಪ್ಪಳ ನಗರ ಹಾಗೂ ಸುತ್ತಲಿನ ಹಳ್ಳಿಗಳ ಜನರು ಈ ದಾಸೋಹಕ್ಕೆ  ತಾವು ಬೆಳೆದ ದವಸಧಾನ್ಯಗಳನ್ನು – ತರಕಾರಿಗಳನ್ನು ಭಕ್ತಿಯಿಂದ ಸಮರ್ಪಿಸುತ್ತಿದ್ದಾರೆ.  ಇಂದು ಕುಟುಗನಹಳ್ಳಿ ಭಕ್ತರಿಂದ ೩೦೦೦ ರೊಟ್ಟಿ, ದವಸಧಾನ್ಯ, ಕಾಸನಕಂಡಿ ಭಕ್ತರಿಂದ ೬೦ ಪಾಕೇಟ್ ಭತ್ತ, ೧೫ ಪಾಕೇಟ್ ಮೆಕ್ಕೆಜೋಳ ಹಾಗೂ ದವಸಧಾನ್ಯ, ನವಲಹಳ್ಳಿ ಭಕ್ತರಿಂದ ೮೦೦೦ ರೊಟ್ಟಿ ಹಾಗೂ ತರಕಾರಿ ಇವೆಲ್ಲವು ಶ್ರೀಗವಿಮಠದ ಮಹಾದಾಸೋಹಕ್ಕೆ ಅರ್ಪಿತವಾದವು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ವಾಮೀಜಿಗಳು ಆಶಿರ್ವದಿಸಿದ್ದಾರೆ.

Leave a Reply

Top