ಕೃಷ್ಣೆಯ ಹೆಸರಿನಲ್ಲಿ ಕಾಂಗ್ರೆಸ್ ಗಿಮಿಕ್ – ಹಾಲಪ್ಪ ಆಚಾರ್

ಕಾಂಗ್ರೆಸ್ ಪಕ್ಷ ಚುನಾವಣೆ ಸಮೀಪ ಬರುತ್ತಿರುವುದರಿಂದ ಕೃಷ್ಣೆಯ ಹೆಸರಿನಲ್ಲಿ ಗಿಮಿಕ್ ಮಾಡುತ್ತಿದೆ.    ಈ ಮೊದಲು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್  ಈಗ ಕೃಷ್ಣೆಯ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದೆ  ಎಂದು ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ವ್ಯಂಗ್ಯವಾಡಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 9 ಯೋಜನೆಗಳಲ್ಲಿ 7 ಯೋಜನೆಗಳು ಈಗಾಗಲೇ ಕಾರ್ಯಗತವಾಗಿತದ್ದು. ಉಳಿದ 2 ನೀರಾವರಿ ಯೋಜನೆಗಳು ಶೀಘ್ರದಲ್ಲೇ ಆರಂಭವಾಗಲಿವೆ.  ಇದುವರೆಗೆ ಯೋಜನೆಗಳಿಗೆ ಬಿಡುಗಡೆಯಾಗಿರುವ ಹಣಕಾಸು ಹಾಗೂ ಯೋಜನೆಯ ವಿವರ ನೀಡಿದರು.
            ಶಾಸಕ ಕರಡಿ ಸಂಗಣ್ಣ ಮಾತನಾಡಿ 1994ರಿಂದ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸತತವಾಗಿ  ಕೆಲಸ ಮಾಡುತ್ತಿದ್ದೇನೆ. ಇದರ ಬಗ್ಗೆ ವಿಧಾನಸೌಧದಲ್ಲಿ ಸತತವಾಗಿ ಧ್ವನಿ ಎತ್ತಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಯತ್ನಿಸಿದ್ದೇನೆ. ಸಿಂಗಟಾಲೂರ ಯೋಜನೆ ಹಲವು ದಶಕಗಳ ಕನಸು ನನಸಾಗಿದ್ದು ಬಿಜೆಪಿ ಸರಕಾರದಲ್ಲಿ ಈಗ ಕಾಂಗ್ರೆಸ್ ಪಕ್ಷದವರೂ ವಿನಾಕಾರಣ ಬಿಜೆಪಿ ನೀರಾವರಿಗೆ ಆಧ್ಯತೆ ನೀಡಿಲ್ಲ ಎಂದು ಹೇಳುತ್ತಿದೆ. ಇದರ ಬಗ್ಗೆ ಯಾವುದೇ ರೀತಿಯ ಚರ್ಚೆಗೆ ಸಿದ್ದ ಎಂದರು.
          ಅನ್ಯ ಪಕ್ಷ ಸೇರುವ ಬಗ್ಗೆ   ಕೇಳಿದ ಪ್ರಶ್ನೆಗೆ  ಎಂದಿನಂತೆ ಕಾಲವೇ ಎಲ್ಲವೂ ನಿರ್ಣಯಿಸಲಿದೆ ಎಂದು ಕುತೂಹಲ ಕಾಯ್ದಿಟ್ಟರು. 

Please follow and like us:
error