ಶ್ರೀ ಚಿದಂಬರೇಶ್ವರ ಕಲಿಯುಗದ ಕಲ್ಪತರು – ಶ್ರೀಗಳು.

ಕೊಪ್ಪಳ, ೨೮- ಕಲಿಯುಗದ ನಾನಾ ಕಷ್ಟಗಳಿಗೆ ಶ್ರೀಶಿವ ಚಿದಂಬರೇಶನಿಂದ ಮುಕ್ತಿ ದೊರೆಯಲಿದೆ. ಶಿವಚಿದಂಬರ ಕಲಿಯುಗದ ಕಲ್ಪತರು ಎಂದು ಕಣ್ವಮಠದ ಶ್ರೀ ವಿಧ್ಯಾವಾರಿಧಿ ಶ್ರೀಪಾದಂಗಳು ಹೇಳಿದರು. ಅವರು ನಗರದ ಶ್ರೀವಿಠಲ ಕೃಷ್ಣದೇವಸ್ಥಾನದಲ್ಲಿ ಶ್ರೀಶಿವ ಚಿದಂಬರ ಭಕ್ತ ಮಂಡಳಿಯಿಂದ ಕರ್ಕಿಹಳ್ಳಿ ಸಂತ ಶ್ರೇಷ್ಠ ಸುರೇಶ್

ಪಾಟೀಲ್ ಗುರುಮಹಾರಾಜರ ನೇತೃತ್ವದಲ್ಲಿ ಜರುಗುತ್ತಿರುವ ೫೬ನೇ ಶ್ರೀಶವಚಿದಂಬರ ನಾಮ ಅಖಂಡ ವೀಣಾ ಜಪ ಸಪ್ತಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಪರಮೇಶ್ವರ ಭಕ್ತನನ್ನು ಬೆಡಿದ್ದನ್ನು ಕೊಡುವ ಕರುಣಾಮಹಿ ಚಿದಂಬರ ರೂಪಲಿ ಶ್ರೀಹರಿ ದರೆಗಿಳಿದಿದ್ದು ಬೇಡಿದ್ದನ್ನು ಕೊಡುವ ಕಷ್ಟ ಎಂದು ಭಕ್ತರ ಇಷ್ಟಾರ್ಥ ಇಡೆರಿದುವ ದಯಾಮಹಿ ಚಿದಂಬರು ಎಂದು ಹೇಳಿದರು.
ಕರ್ಕಿಹಳ್ಳಿಯಲ್ಲಿ ಶ್ರೀ ಮೃತ್ಯುಂಜೇಶ್ವರ ವಿಶೇಷ ಆಶಿರ್ವಾದ ಪಡೆದಿರುವ ಸಂತ ಸುರೇಶ ಅಖಂಡ ವೀಣಾ ಜಪ ಸಪ್ತಾಹ ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದು ಅವರ ಸಮಾಜಿಕ ಹಾಗೂ ಧಾರ್ಮಿಕ ಸೇವೆ ಶ್ಲಾಘನೀಯವಾದದು ಎಂದರು.
ಶ್ರೀಯಾಜ್ಞವಲ್ಕ್ಯರು ಸೂರ್ಯನಾರಾಯಣ ಅಪಾರಾ ವತಾರ ಸೂರ್ಯನಾರಾಯಣನೆ ಯಾಜ್ಞವಲ್ಕ್ಯರು ವಿಶ್ವದ ಮೊದಲ ಶ್ರೇಷ್ಟಯತಿ ಯಾಜ್ಞವಲ್ಕ್ಯರು ಅವರ ಪರಂಪರೆಯ ನಾವು ನೀವುಗಳೆಲ್ಲಾ ಧನ್ಯರು ಶ್ರೀಕೃಷ್ಣ -ಶಿವಚಿಂದಬರ ಇಬ್ಬರು ಒಂದೇ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಶಿವಚಿದಂಬರ ನಾಮ ಅಖಂಡ ವೀಣಾ ಜಪ ಸಪ್ತಾಹ ಹಗಲಿರುಳು ನಿರಂತರವಾಗಿ ಜರುಗುತ್ತಿದ್ದು ಭಕ್ತರು ಭಗವಂತನ ನಾಮಸ್ಮರಣೆ ಮಾಡಿ ಪುನಿತರಾಗುವಂತೆ ಸಂಘಟಿಕರು ಕೋರಿದ್ದರೆ.

Leave a Reply