ಹೈ.ಕ ವ್ಯಾಪ್ತಿಯ ಅತಿಥಿ ಉಪನ್ಯಾಸಕರ ಬೇಡಿಕೆಗೆ ಆಗ್ರಹ

ಕೊಪ್ಪಳ: ಈಗಾಗಲೇ ಕೇಂದ್ರದಲ್ಲಿನ ಕಾಂಗೈ ನೇತೃತ್ವದ ಸರ್ಕಾರ ಹಾಗು ರಾಜ್ಯ ಕಾಂಗೈ ಸರ್ಕಾರವು ಸೇರಿಕೊಂಡು ಹೈ.ಕ.ಭಾಗದ ಬಹು ದಿವಸಗಳ ಬೇಡಿಕೆಯಾಗಿದ್ದ ಕಲಂ ೩೭೧ ರ ತಿದ್ದುಪಡೆ ಮಾಡಿದ್ದೂ ಸ್ವಾಗತಾರ್ಹ. ಇದುವರೆಗೂ ಯಾವ ಸರ್ಕಾರವು ಈ ಭಾಗದ ಮಹತ್ವದ ಕಲಂ ೩೭೧ ರ ತಿದ್ದುಪಡೆ ತಂದು ಈ ಭಾಗವನ್ನು  ಅಭಿವೃದ್ಧಿ ಮಾಡುವ ಪ್ರಾಮಾಣಿಕ ಪ್ರಯತ್ನಕ್ಕೆ ಸ್ಪಂದಿಸಿದ್ದಿಲ್ಲ. ಇತ್ತೀಚಿಗೆ ರಾಷ್ಟ್ರಪತಿಗಳು ಕಲಂ ೩೭೧ ರ ತಿದ್ದುಪಡೆಯ ಕರಡುಗಳಿಗೆ ಸಹಿ ಹಾಕುವ ಮೂಲಕ ಅನುಮೋದಿಸಿದ್ದಾರೆ. ಅಂತಿಮವಾಗಿ ಈಗ ನೇಮಕಾತಿ ಪ್ರಾಧಿಕಾರಗಳನ್ನು  ಮಾತ್ರ ಮಾಡುವ ಬಾಕಿ ಇದೆ. ಇನ್ನದರೂ ಈ ಭಾಗದ ಹೈ.ಕ ಭಾಗದ ಎಲ್ಲ ಅತಿಥಿ ಉಪನ್ಯಾಸಕರಿಗೆ  ನ್ಯಾಯಯುತ ಬೇಡಿಕೆಗಳು ಈಡೇರಬೇಕಾಗಿದೆ. ಕನಿಷ್ಟ ೧೦-೧೨ ವರ್ಷಗಳಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಖಾಯಾಂತಿ ಮಾಡಬೇಕು. ಇಲ್ಲವೇ ಯು.ಜಿ.ಸಿ ನಿಯಮಾವಳಿಯಂತೆ ಕನಿಷ್ಟ ೨೫೦೦೦ ಪ್ರತಿ ತಿಂಗಳ ಸಂಭಾವನೆ ಸಿಗುವಂತಾಗಬೇಕು. ವಯೋಮಿತಿ ಮೀರುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ನೇಮಕಾತಿಯಲ್ಲಿ  ಕೃಪಾಂಕಗಳನ್ನು ಕೊಟ್ಟು ಪರಿಗಣಿಸಬೇಕು. ಪ್ರಸಕ್ಕ ಸಾಲಿನ ಅತಿಥಿ ಉಪನ್ಯಾಸಕರ ವೇತನ ಇದುವರೆಗೂ ಬಂದಿರುವದಿಲ್ಲ.  ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ.  ರಾಜ್ಯಾದಾದ್ಯಾಂತ ಇದುವರೆಗು ಮಾಡಿದ ಎಲ್ಲ ಹೋರಾಟಗಳಿಗೆ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿರುವದಿಲ್ಲ.  ಇನ್ನಾದರೂ ನಮ್ಮನ್ನಾಳುವ ಸರ್ಕಾರ ಎಲ್ಲ ಅತಿಥಿ ಉಪನ್ಯಾಸಕರ ನ್ಯಾಯಯುತವಾದ ಬೇಡಿಕೆಗಳು ಈಡೇರಿಸಿ ಅತಿಥಿ ಉಪನ್ಯಾಸಕರ ನೋವಿಗೆ ದ್ವನಿ ಗೂಡಿಸಬೇಕೆಂದು ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕುಟದ ಸಂಚಾಲಕ ಹಾಗು ಕೊಪ್ಪಳ  ಜಿಲ್ಲಾ ಅತಿಥಿ ಉಪನ್ಯಾಸಕ ಸಂಘದ (ರಿ) ಜಿಲ್ಲಾಧ್ಯಕ್ಷರಾದ ವೀರಣ್ಣ ಸಜ್ನನ ಪದಾಧಿಕಾರಿಗಳಾದ ರವಿ ಹಿರೇಮಠ, ಕಲ್ಲೇಶ ಅಬ್ಬಿಗೇರಿ,  ಮಂಜುನಾಥ ಹೊಸುರು. ಕೆಂಚಪ್ಪ, ಶಿವಮೂತಿ, ಡಾ ಪ್ರಕಾಶಬಳ್ಳಾರಿ, ಡಾ.ಯುಕಾರಾಂ ನಾಯಕ, ಸಂತೋಷಿ ಬೆಲ್ಲದ, ಡಾಗಿರಿಜಾ ತುರಮುರಿ, ಡಾ ಮಾರ್ಕಂಡೇಶ,  ಡಾ ಗವಿಹಂದ್ರಾಳ, ವಿಜಯಕುಮಾರ ಗಂಗಾವತಿ, ಶಿವಕುಮಾರ ಗಂಗಾವತಿ, ಚಂದ್ರು ಯಲಬುರ್ಗ, ಶಂಕರ ಕರಪಡಿ ಮೊದಲಾದವರು ಸರ್ಕಾರಕ್ಕೆ   ವಿನಂತಿಸಿದ್ದಾರೆ.
Please follow and like us:
error