ಚಂಪಾಲಾಲ್‌ಜಿ ಮೆಹತಾ ನಿಧನ : ರವಿವಾರ ಅಂತ್ಯಕ್ರಿಯೆ

ಕೊಪ್ಪಳ, ೨೧ : ನಗರದ ಗಣ್ಯ ವರ್ತಕರಾಗಿದ್ದ ಮೆಹತಾ ಮೆಡಿಕಲ್ಸ್‌ನ ಸ್ಥಾಪಕರು, ಮಾಜಿ ಜಿಲ್ಲಾ ಲಯನ್ಸ್ ಕ್ಲಬ್ ಗವರ್ನರ್, ಪ್ರಖರ ವಾಗ್ಮಿಗಳೂ ಆಗಿದ್ದ ಚಂಪಾಲಾಲ್‌ಜಿ ಮೆಹತಾ (೭೪) ದಿ. ೨೧-೦೨-೨೦೧೫ ರಂದು ಮಧ್ಯಾಹ್ನ ೩.೦೦ ಗಂಟೆಗೆ ನಿಧನರಾದರು.
        ಮೃತರಿಗೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆಯನ್ನು ದಿ. ೨೨-೦೨-೨೦೧೫, ರವಿವಾರ ಬೆಳಿಗ್ಗೆ ೯.೩೦ ಕ್ಕೆ ಕೊಪ್ಪಳದಲ್ಲಿ ನೆರವೇರಿಸಲಾಗುವುದು ಎಂದು ಅವರ ಹಿರಿಯ ಪುತ್ರ ಗುಲಾಬ್ ಚಂದ್ ಮೆಹತಾ ತಿಳಿಸಿದ್ದಾರೆ.
ಚಂಪಾಲಾಲ್‌ಜಿ ಮೆಹತಾ ನಿಧನ : ಸಂತಾಪ
ಕೊಪ್ಪಳ, ೨೧ : ಮಾಜಿ ಜಿಲ್ಲಾ ಲಯನ್ಸ್ ಕ್ಲಬ್ ಗವರ್ನರ್ ಚಂಪಾಲಾಲ್‌ಜಿ ಮೆಹತಾ (೭೪) ದಿ. ೨೧-೦೨-೨೦೧೫ ರಂದು ಮಧ್ಯಾಹ್ನ ೩.೦೦ ಗಂಟೆಗೆ ನಿಧನರಾಗಿದ್ದು, ಇವರ ನಿಧನ ಲಯನ್ಸ್ ಕ್ಲಬ್ ಮತ್ತು ಸ್ವಾಮಿ ವಿವೇಕಾನಂದ ಶಾಲೆಯು ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಇವರ ನಿಧನ ಭರಿಸಲಾರದ ನಷ್ಟ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಲಯನ್ಸ್ ಕ್ಲಬ್ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಂಪಾಲಾಲ್‌ಜಿ ಮೆಹತಾ ನಿಧನ : ಸಂತಾಪ
ಕೊಪ್ಪಳ, ೨೧ : ನಗರದ ಗಣ್ಯ ವರ್ತಕರಾಗಿದ್ದ ಮೆಹತಾ ಮೆಡಿಕಲ್ಸ್‌ನ ಸ್ಥಾಪಕರು, ಮಾಜಿ ಜಿಲ್ಲಾ ಲಯನ್ಸ್ ಕ್ಲಬ್ ಗವರ್ನರ್, ಪ್ರಖರ ವಾಗ್ಮಿಗಳೂ ಆಗಿದ್ದ ಚಂಪಾಲಾಲ್‌ಜಿ ಮೆಹತಾ (೭೪) ದಿ. ೨೧-೦೨-೨೦೧೫ ರಂದು ಮಧ್ಯಾಹ್ನ ೩.೦೦ ಗಂಟೆಗೆ ನಿಧನರಾಗಿದ್ದು, ಇವರ ನಿಧನದಿಂದ ನಾಡಿನ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಿಗೆ ಬಹುದೊಡ್ಡ ನಷ್ಟವಾಗಿದೆ. ಲಯನ್ಸ್ ಕ್ಲಬ್ ಧುರೀಣರಾಗಿದ್ದ ಇವರ ನಿಧನಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ, ಹಿರಿಶಾಂತವೀರ ಮಹಾಸ್ವಾಮಿಗಳು ಹಡಗಲಿ, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಕಾಡಾ ಅಧ್ಯಕ್ಷ ಅಂದಾನಪ್ಪ ಅಗಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಲಯನ್ಸ್ ಸದಸ್ಯರು ಹಾಗೂ ವಾಣಿಜ್ಯೋದ್ಯಮಿಗಳಾದ ಬಸವರಾಜ ಬಳ್ಳೊಳ್ಳಿ, ಲಯನ್ ಚಂದ್ರಕಾಂತ್ರ ತಾಲೆಡಾ, ಹನುಮಂತಪ್ಪ ಅಂಗಡಿ, ಎಸ್.ಕೆ. ಪಾಟೀಲ, ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ, ಗವಿಸಿದ್ಧಪ್ಪ ಕೊಪ್ಪಳ, ಲಯನ್ ಶಾಂತಣ್ಣ ಮುದಗಲ್, ಶಂಕ್ರಪ್ಪ ಬೋರಟ್ಟಿ, ಅಭಯಕುಮಾರ ಮೆಹತಾ, ಜವಾಹರಲಾಲ್ ಜೈನ್, ಪ್ರಕಾಶ ಬಳ್ಳಾರಿ, ಮಂಜುನಾಥ ಆನಿಪಲ್ಲೇದ್, ವಿವೇಕಾನಂದ ಶಾಲೆಯ ಪ್ರಾಚಾರ್ಯ ಎ. ಧನಂಜಯನ್, ಅಬ್ದುಲ್ ರವೂಫ್ ಕಿಲ್ಲೇದಾರ ಮತ್ತಿತರ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.
Please follow and like us:
error