ಹೊಸಪೇಟೆ-ನಗರದಲ್ಲಿ ಪ್ರತಿಭಾ ಪ್ರದರ್ಶನ.

ಹೊಸಪೇಟೆ-20- ನಾಲ್ಕು ದಿನಗಳ ಕಾಲ ನಡೆಯುತ್ತಿರವ ಬಿ.ಎಂ.ಎಂ. ಇಸ್ಪಾತ್ ರೋಟರಿ ಟ್ಯಾಲೆಂಟ್ ಶೋನ ಎರಡನೇ ದಿನದಂದು ೧೨ ವರ್ಷದಿಂದ ೨೫ವರ್ಷದೊಳಗಿನವರು ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು.
    ಡಣಾಪುರದ ಬಿ.ಎಂ.ಎಂ. ಇಸ್ಪಾತ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿ.ವಿ.ವಿ.ರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಇನ್ನರ್‌ವೀಲ್‌ನ ಮಾಜಿ ಗರ್ವನರ್ ಶೋಭಾ ಸಿಂಧೆ, ರೋಟರಿ ಅಧ್ಯಕ್ಷ ಕೆ.ಸೈಯದ್ ಮಹ್ಮದ್, ಕಾರ್ಯದರ್ಶಿ ಡಾ|| ಮುನಿವಾಸುದೇವ ರೆಡ್ಡಿ,  ಪ್ರಯೋಜಕ ಸಮಿತಿಯ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ಕಾರ್ಯದರ್ಶಿ ರಾಜೇಶ್, ಇನ್ನರ್ ವೀಲ್‌ನ ಅಧ್ಯಕ್ಷೆ ನಂದಿನಿ ಚಿಕ್ಕಮಠ್ ಹಾಗೂ ಕಾರ್ಯದರ್ಶಿ ರೇಖಾ ಪ್ರಕಾಶ್ ಉಪಸ್ಥಿತರಿದ್ದರು.
    ಎರಡನೇ ದಿನದ ಪ್ರದರ್ಶನದಲ್ಲಿ ಏಕಪಾತ್ರಾಭಿನಯ, ಕೋಲಾಟ, ದೇಶಭಕ್ತಿ, ಜಾನಪದ, ಭಾವಗೀತೆ, ಶಾಸ್ತ್ರೀಯ ಗೀತೆಗಳನ್ನು ಮೇಳೈಸಿದವು, ಕನ್ನಡ, ಹಿಂದಿ ಮತ್ತು ತೆಲುಗು ಹಾಡುಗಳಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿದರು. ಯುವಕರಿಗಿಂತ ನಾವೇನು ಕಮ್ಮಿಯಿಲ್ಲ ಎಂದು ಯುವತಿಯು ಹೆಜ್ಜೆ ಹಾಕಿ ಪ್ರಬಲ ಸ್ಪರ್ಧೆಯನ್ನು ಒಡ್ಡಿದರು.  ಕಮಲಾಪುರದ ಕಸ್ತೂರಿ ಬಾ ಗಾಂಧಿ ಶಾಲೆಯ ಬಾಲಕಿಯರ ಡೊಳ್ಳು  ಸರಕಾರಿ ಬಾಲಕಿಯರ ಶಾಲೆಯ ಮಕ್ಕಳ ಲಂಬಾಣಿ ನೃತ್ಯ  ಪ್ರೇಕ್ಷಕರಿಗೆ ಉತ್ತಮ ಮನೋರಂಜನೆ ನೀಡಿತು, ಪಿ.ವಿ.ಎ.ಸ್.ಬಿ. ಶಾಲೆಯ ಚಪ್ಪಾಳೆ..ಚಪ್ಪಾಳೆ ಎನ್ನುವ ಪರಿಕಲ್ಪನೆಯ ಸೈನಿಕ, ರೈತ ವೈದ್ಯರಿಗೆ ಧನ್ಯವಾದನ್ನು ತಿಳಿಸುವ  ಗೀತೆ ಹಾಗೂ ಮಹಿಳೆಯರಿಗೂ ಸಮಾನ ಅವಕಾಶವನ್ನು ನೀಡಿ ಎನ್ನುವ ಉತ್ತಮ ಸಂದೇಶ ಸಾರಿದ ನಾಟಕ, ಕೇವಲ ಒಂದು ನಿಮಿಷ ಐವತ್ತು ಸೆಕೆಂಡಿನಲ್ಲಿ ಕ್ಯಾಬ್ ಜೋಡಿಸಿದ ದಿವಾಕರ ರೆಡ್ಡಿಗೆ ಹಾಗೂ ಮಂಡ್ಯ-ಹಾಸನ ಕನ್ನಡ ಭಾಷೆಯಲ್ಲಿ ಮಿಮಿಕ್ರಿ  ಮಾಡಿದ ಆದರ್ಶ ಶಾಲೆಯ ವಿನಯ ಕುಮಾರ್ ಪ್ರೇಕ್ಷಕರನ್ನು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಸರಕಾರಿ ಬಾಲಕಿಯರ ಶಾಲೆ, ಆದರ್ಶ, ಶ್ರೀ ಸಾಯಿ, ಸಾಯಿನಿಕೇತನ,ರೋಸ್ ಬಡ್, ಡಿಎವಿ, ಮುನ್ಸಿಪಲ್, ಸರ್ದಾರ್ ಪಟೇಲ್ ಶಾಲೆ, ಥಿಯೋಸಾಫಿಕಲ್, ಶ್ರೀಕರಿ, ಪಿ.ಡಿ.ಐ.ಟಿ ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳು ಸೇರಿದಂತೆ ನಗರದ ವಿವಿಧ ಕಲಾ ತಂಡಗಳ ಸುಮಾರು ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಕಲಾ ಪ್ರದರ್ಶನ ನೀಡಿದರು..
    ತೀರ್ಪುಗಾರರಾಗಿ ಭಾಗವಹಿಸಿದ್ದ ರಾಘವೇಂದ್ರ, ರೈನಾ , ಸುದಾ ರೆಡ್ಡಿ, ಶುಭಾಂಗಿನಿ ಗೊಗ್ಗ, ಸುನಿಲ್ ಮೂರಾರ್ಕ ಮತ್ತು ಶಾಂತ ಕುಮಾರ್.ಕೆ. ತೀರ್ಪು ನೀಡಿದರು.

Please follow and like us:
error