ಕೊಳಗೇರಿಯಲ್ಲಿ ಚಿಣ್ಣರಮೇಳ ಪ್ರಶಂಸೆಗೆ ಪಾತ್ರ- ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್

ಹೊಸಪೇಟೆ: ಕೊಳಗೇರಿಯಲ್ಲಿ ಚಿಣ್ಣರಮೇಳ ನಡೆಸುತ್ತಿರುವುದು ಭಾವೈಕ್ಯತಾ ವೇದಿಕೆಯ ದೊಡ್ಡತನವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್ ಹೇಳಿದರು.
ನಗರದ ಸಿದ್ಧಲಿಂಗಪ್ಪ ಚೌಕಿಯಲ್ಲಿ ಶುಕ್ರವಾರ ಸಂಜೆ ಭಾವೈಕ್ಯತಾ ವೇದಿಕೆಯ ೨೫ನೇವರ್ಷದ ಬೆಳ್ಳಿಹಬ್ಬದ ಸವಿ ನೆನಪಿನ ಚಿಣ್ಣರ ಲೋಕ-ಬಣ್ಣದ ಲೋಕ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಂತ ಶಿಶುನಾಳ ಷರೀಪ್ ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಂಗಮಂದಿರಕ್ಕೆ ಸಂತ ಶಿಶುನಾಳ ಷರೀಫ್ ಹೆಸರಿಟ್ಟಿರುವುದು ಸಂತಸದ ವಿಷಯ. ಕೊಳಗೇರಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಬೆಳಕಿಗೆ ತರುವ ಕೆಲಸವನ್ನು ಭಾವೈಕ್ಯತಾ ವೇದಿಕೆ ನಡೆಸುತ್ತಿದೆ. ಅಕಾಡೆಮಿ ಇಂತಹ ಕೆಲಸ ಮಾಡಬೇಕಿತ್ತು ಎಂದರು. ಭಾವೈಕ್ಯತಾ ವೇದಿಕೆಯ ರಂಗ ಚಟುವಟಿಕೆಗೆ ನಿರಂತರ ಬೆಂಬಲ ನೀಡುವುದಾಗಿ ಘೋಷಿಸಿದ ಅವರು, ಆಕಾಡೆಮಿ ಇವರ ಕೆಲಸಕ್ಕೆ ಸಾಥ್ ನೀಡುವುದು ಎಂದರು. 
ಕರ್ನಾಟಕ ಆಕಾಡೆಮಿ ಸದಸ್ಯ ಗುಡಿಹಳ್ಳಿ ನಾಗರಾಜ್ ರಂಗಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಅಕಾಡೆಮಿಯು ಅನೇಕ ಯೋಜನೆಗಳನ್ನು ಶೇಖ್ ಮಾಸ್ತರ್ ಕೈಗೊಂಡಿದ್ದಾರೆ. ಭಾವೈಕ್ಯತಾ ವೇದಿಕೆಯು ಇಂತಹ ಮಕ್ಕಳ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು. ಮುನೀರ್ ಮೋಟಾರ‍್ಸ್ ವ್ಯವಸ್ಥಾಪಕ ನಾಜೀಮುದ್ದೀನ್ ಮಾತನಾಡಿ, ಕೊಳಗೇರಿಯಲ್ಲಿ ರಂಗ ಚಟುವಟಿಕೆಗೆ ನಾವು ಬೆಂಬಲಿಸಬೇಕು. ಮುಖ್ಯ ವಾಹಿನಿಗೆ ಬೀದಿ ಮಕ್ಕಳನ್ನು ತರಲು ಇಂತಹ ಶಿಬಿರ ಸಹಾಯಕರವಾಗಿರುತ್ತವೆ ಎಂದರು. ಸಮಾರಂಭದಲ್ಲಿ ಮುನೀರ್ ಮೋಟಾರ‍್ಸ್ ವ್ಯವಸ್ಥಾಪಕ ನಾಜೀಮುದ್ದೀನ್ ಇವರನ್ನು ಹಾಗೂ ಪತ್ರಕರ್ತ ಶಿವಶಂಕರ್ ಬಣಗಾರ್ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಯು.ರಾಘವೇಂದ್ರ ರಾವ್ ಹಾಜರಿದ್ದರು. ಭಾವೈಕ್ಯತಾ ವೇದಿಕೆಯ ಸಂಚಾಲಕ ಪಿ. ಅಬ್ದುಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಡಿ ಪದವಿಧರೆ ಪಿ.ಸಹನಾ ನಿರೂಪಿಸಿದರು.

Leave a Reply