fbpx

ಟಿ.ಇ.ಟಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ.

ಕೊಪ್ಪಳ-23- ಎರಡು ದಿನಗಳಕಾಲ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿ.ಇ.ಟಿ) ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಇಂದು ಸಂಜೆ ೪.೦೦ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಸಲಾಯಿತು. ಸಮಾರಂಭದ ಮುಖ್ಯ ಅತಿಥಿಸ್ಥಾನವನ್ನು ವಹಿಸಿ ಮಾತಮಾಡಿದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ ಮುಖ್ಯೋಪಾಧ್ಯರಾದ ಶ್ರೀ ಗವಿಸಿದ್ಧಪ್ಪ ಕೊಪ್ಪಳ ಇವರು ಮಾತನಾಡಿ ಈ ತರಬೇತಿ ಕಾರ್ಯಾಗಾರವು ಪರೀಕ್ಷೆಗಳಿಗೆ ಸಿದ್ದತೆಯನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಜೀವಿನಿಯಂತೆ ಸಹಾಯಕಾರಿಯಾಗಿದೆ, ಹಾಗೂ ಈ ಕಾರ್ಯಾಗಾರದ ವಿಷಯದ ಜ್ಞಾನದ ಜೊತೆಗೆ ನಿರಂತರ ಅಧ್ಯಯನ ಮಾಡಿದರೆ ಈ ಕಾರ್ಯಾಗಾರದ ಸಾರ್ಥಕತೆ ಈಡೇರಿದಂತೆ ಆಗುತ್ತದೆ ಎಂದು ಆಶಿಸಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆ ಮುಖ್ಯಗುರುಗಳಾದ ಶ್ರೀ ರುದ್ರಸ್ವಾಮಿ ಜೆ ಮಾತನಾಡಿ ಕಾರ್ಯಗಾರದಲ್ಲಿ ಸಂಪನ್ಮೂಲಗಳಿಂದ ಪಡೆದ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿ ನಿಮ್ಮ ಸಂಸ್ಥೆಗೆ ಕೀರ್ತಿಯನ್ನು ತನ್ನಿರಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯರಾದ ಶ್ರೀ ಪ್ರಕಾಶ.ಕೆ.ಬಡಿಗೇರ ಮಾತನಾಡಿ ಹಾರ್ಡ ವರ್ಕಗಿಂತ ಸ್ಮಾರ್ಟ ವರ್ಕ ಮಾಡಿದರೆ ಅದು ನಿಮ್ಮ ಯಶಸ್ಸಿನ ತಳಹದಿ ಎಂದು ಆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ನಿಮಗೆ ಜಯ ಖಂಡಿತ ಎಂದು ಕರೆ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸ ನೀಡಿದ ಮಹನಿಯರಿಗೆ ಸನ್ಮಾನ ಕಾರ್ಯಕ್ರಮ ಎರ್ಪಡಿಸಲಾಯಿತು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ ಎಚ್. ಸುರೇಶ ಕಲ್ಲಳ್ಳಿ. ರಮೇಶ ಆವಜಿ. ಖಾದರ ಭಾಷಾ ಸೊಂಪೂರ. ಮರೀಶಾಂತ ಶೆಟ್ಟರ. ಡಾ.ಸವಿತಾ. ಮತ್ತು ಉಪನ್ಯಾಸಕರುಗಳಾದ ಜಿ.ಎಸ್.ಸೊಪ್ಪಿಮಠ.ಎಲ್.ಎಸ್.ಹೊಸಮನಿ.ಎಸ್.ಎಸ್.ಅರಳಲೇಮಠ.ಸುಭಾಸಚಂದ್ರಗೌಡ.ಪಾಟೀಲ್.ಡಿ.ಎಂ. ಬಡಿಗೇರ.ಎಂ.ವಿ.ಕಾತರಕಿ.ಡಿ.ಹೊಸಮನಿ.ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಮತಾ ನಿರೂಪಿಸಿದರು. ಎ.ಎನ್.ತಳಕಲ್ ಸ್ವಾಗತಿಸಿದರು. ನೇತ್ರಾವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆನಂದರಾವ್ ದೇಸಾಯಿ ವಂದಿಸಿದರು.

Please follow and like us:
error

Leave a Reply

error: Content is protected !!