ಆಹಾರ ಇಲಾಖೆಯ ಮಿರ್ಜಿ ಅಮಾನತ್ತಿಗೆ ಆಗ್ರಹ

ಕೊಪ್ಪಳ : ಬಡವರಿಗೆ ತಲುಪಬೇಕಾದ ಪಡಿತರ ವಸ್ತುಗಳು, ಸೀಮೆ ಎಣ್ಣೆ, ಅಕ್ಕಿ ಬೇಳೆಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಆಹಾರ ಇಲಾಖೆ ನಿರ್ದೇಶಕರೇ ಕಾರಣ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಹಾರ ಹಕ್ಕು ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಬಸವರಾಜ ಶೀಲವಂತರ, ಜೆ.ಭರದ್ವಾಜ ಹಾಗು ಇತರರು ಬಡವರಿಗೆ ಸಿಗಬೇಕಾದ ಪಡಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸದಾಶಿವ ಮರ್ಜಿ ಸಹಶಾಮೀಲಾಗಿದ್ದಾರೆ ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply