ಶ್ರೀ ಗವಿಮಠಕ್ಕೆ ಹರಿದುಬರುತ್ತಿರುವ ದವಸ ಧಾನ್ಯ ರೊಟ್ಟಿ ತರಕಾರಿ ಹಾಗೂ ಕುಂಬಳಕಾಯಿ

ಕೊಪ್ಪಳ:  ಉತ್ತರ ಕರ್ನಾಟಕ ಭಾಗದ ಸಿದ್ಧಗಂಗೆಯೆಂದೇ ಖ್ಯಾತಿ ಪಡೆದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾ ದಾಸೋಹಕ್ಕಾಗಿ ಇಂದು ಸ್ಥಳೀಯ ಹಾಗೂ ಹೊರಗಿನ ಸದ್ಭಕ್ತರಿಂದ ದವಸಧಾನ್ಯ ಹಾಗೂ ರೊಟ್ಟಿ, ತರಕಾರಿಗಳ ಮಹಾಪೂರ ಹರಿದು ಬರುತ್ತಿದೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಆಟೋ ಚಾಲಕರ ಸಂಘದ ವತಿಯಿಂದ: ೧೭೫೦ ರೊಟ್ಟಿ, ೨ ಪಾಕೇಟು ಅಕ್ಕಿ, ಶ್ರೀ ಗಜಾನನ ಸೇವಾ ಸಮಿತಿ ಆಶ್ರಯ ಕಾಲೋನಿ ಹೂವಿನಾಳ ರಸ್ತೆಯ ಭಕ್ತರಿಂದ: ೩೧,೧೯೩.೦೦ ರೂಪಾಯಿ ಹಣ, ೧ ಕ್ವಿಂಟಾಲ್ ಅಕ್ಕಿ, ೨೫೦೦ ರೊಟ್ಟಿಗಳು, ಕಂದಕೂರ ಗ್ರಾಮಧ ಭಕ್ತರಿಂದ: ೭೦೦೧ ರೊಟ್ಟಿಗಳು, ಚಿಕ್ಕಬೊಮ್ಮನಾಳ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨೫ ಪಾಕೇಟು ದವಸಧಾನ್ಯಗಳು, ೧ ಪಾಕೇಟು ಅಕ್ಕಿ, ೨ ಕ್ವಿಂಟಾಲ್ ಮಾದಲಿ, ಕೊಳೂರು ಗ್ರಾಮದ ಭಕ್ತರಿಂದ: ೨ ಕ್ವಿಂಟಾಲ್ ಮಾದಲಿ, ೩ ಕ್ವಿಂಟಾಲ್ ಅಕ್ಕಿ, ೨ ಕ್ವಿಂಟಾಲ್ ಮೆಕ್ಕೆಜೋಳ, ೧ ಚೀಲ ಉಳ್ಳಾಗಡ್ಡಿ, ಯಾಪಲದಿನ್ನಿ ಗ್ರಾಮದ ಭಕ್ತರಿಂದ: ೨೫೦೦ ರೊಟ್ಟಿಗಳು, ಮಾಟಲದಿನ್ನಿ ಗ್ರಾಮದ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಪಾಕೇಟು ಅಕ್ಕಿ, ೧ ಪಾಕೇಟು ಈರುಳ್ಳಿ, ಮಸಬಹಂಚನಾಳ ಗ್ರಾಮದ ಭಕ್ತರಿಂದ:  ೫೦೦೦ ರೊಟ್ಟಿಗಳು, ೬ ಪಾಕೇಟು ಅಕ್ಕಿ, ೨ ಪಾಕೇಟು ಈರುಳ್ಳಿ, ೨ ಪಾಕೇಟು ಜೋಳ, ೨ ಚೀಲ ಬದನೆಕಾಯಿ, ಕಲ್ಲತಾವರಗೇರಿ ಗ್ರಾಮದಿಂದ: ೩೦೦೦ ರೊಟ್ಟಿಗಳು, ಹೀರೇಸೂಳಿಕೇರಿ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨ ಚೀಲ ನೆಲ್ಲು, ಹ್ಯಾಟಿ ಗ್ರಾಮದ ಭಕ್ತರಿಂದ: ೩೫೦೦ ರೊಟ್ಟಿಗಳು, ೨೩ ಚೀಲ ದವಸಧಾನ್ಯಗಳು, ಬೈರನಾಯಕನ ಹಳ್ಳಿಯಿಂದ ೫೦೦೦ ರೊಟ್ಟಿ ೧೫ ಚೀಲ ದವಸಧಾನ್ಯ, ಬೆಳವನಾಳ ಗ್ರಾಮದಿಂದ ೭ ಚೀಲ ದವಸಧಾನ್ಯ, ಮಂಗಳೂರು ಗ್ರಾಮದ ಭಕ್ತರಿಂದ: ೮೦ ಚೀಲ ದವಸ ಧಾನ್ಯ, ೧೧೦೦೦ ರೊಟ್ಟಿ, ಬಿನ್ನಾಳ ಗ್ರಾಮದವರಿಂದ ೧೦೦೦೦ ರೊಟ್ಟಿ, ೪ ಚೀಲ ಉಳ್ಳಾಗಡ್ಡಿ, ೨ ಚೀಲ ಮೆಣಸಿನಕಾಯಿ, ಗೊಂಡಬಾಳ ಗ್ರಾಮಸ್ಥರಿಂದ ೬೦೦೦ ರೊಟ್ಟಿ ೧೦ ಚೀಲ ಕಾಳು ಕಡಿ, ೨ ಚೀಲ ಮೆಕ್ಕೆ ಜೋಳ, ೨ ಚೀಲ ಉಳ್ಳಾಗಡ್ಡಿ, ಅರಸಿಕೇರೆ ಗ್ರಾಮದಿಂದ ೪೦೦೦ ರೊಟ್ಟಿ, ೬ ಚೀಲ ಉಳ್ಳಾಗಡ್ಡಿ, ಹಿರೇಸಿಂದೋಗಿ ಗ್ರಾಮಸ್ಥರಿಂದ ೫೦೦೦ ರೊಟ್ಟಿ, ೨ ಪಾಕೀಟ ಅಕ್ಕಿ, ೩ ಪಾಕೀಟು ಮೆಕ್ಕೆಜೋಳ, ೩ ಗಾಡಿ ಉಸುಕು, ಕುಟುಗನಹಳ್ಳಿ ಗ್ರಾಮಸ್ಥರಿಂದ ೧೦ ಪಾಕೀಟ್ ಮೆಕ್ಕೆ ಜೋಳ, ೩ ಪಾಕೀಟ್ ದವಸ ಧಾನ್ಯ, ಯಲಮಗೇರಿ ಗ್ರಾಮದವರಿಂದ ೯ ಚೀಲ ದವಸ ಧಾನ್ಯ, ಕಾಮನೂರು ಗ್ರಾಮದವರಿಂದ ೧೦ ಚೀಲ ದವಸ ಧಾನ್ಯ, ಚನ್ನಪಟ್ಟನಹಳ್ಳಿ ಗ್ರಾಮದಿಂದ ೪ ಚೀಲ ಜೋಳ, ದೇವರಾಜ ಅರಸ ಕಾಲೋನಿ, ನಂದಿನಗರ, ಸಿದ್ದೇಶ್ವರ ಸರ್ಕಲ್ ಹಾಗೂ ಕವಲೂರು ಓಣಿ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಟ್ರ್ಯಾಕ್ಟರ್ ದವಸ ಧಾನ್ಯ, ಗುಡದಳ್ಳಿ ಗ್ರಾಮದ ಭಕ್ತರಿಂದ ೫ ಟ್ರ್ಯಾಕ್ಟರ್ ಕಟ್ಟಿಗಿ, ೬೬ ಚೀಲ ದವಸ ಧಾನ್ಯಗಳು, ಕುಡಗುಂಟಿ ಗ್ರಾಮದವರಿಂಧ ೬೦೦೦ ರೊಟ್ಟಿ, ೨ ಪಾಕೀಟ್ ಉಳ್ಳಾಗಡ್ಡಿ, ೨ ಟ್ರ್ಯಾಕ್ಟರ್ ಕಟ್ಟಿಗೆ, ೧೬೧೦೧ ರೂ ನಗದು ಕಾಣಿಕೆ, ತಳಕಲ್ ಗ್ರಾಮದವರಿಂದ ೧೦೦೦೦ ರೊಟ್ಟಿ, ೨ ಪಾಕೀಟ್ ಕಾಳು, ಕುಣಿಕೇರಿ ಗ್ರಾಮದಿಂಧ ೫೦೦೦ ರೊಟ್ಟಿ ೭೦ ಪಾಕೀಟ್ ದವಸಧಾನ್ಯ, ಉದಯಶೆಟ್ಟಿ ಕೊಪ್ಪಳ ಇವರಿಂದ ೫ ಪಾಕೀಟ್ ಅಕ್ಕಿ, ಹೀಗೆ ಶ್ರೀಗವಿಮಠಕ್ಕೆ ದಾಸೋಹಕ್ಕಾಗಿ ಸಾಗರೋಪಾದಿಯಲ್ಲಿ ದವಸಧಾನ್ಯಗಳು, ರೊಟ್ಟಿಗಳು, ಸಿಹಿಯಾದ ಮಾದಲಿ, ತರಕಾರಿಗಳು ಹರಿದುಬಂದಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
ದೊಡ್ಡ ಗಂಟೆ ಕಾಣಿಕೆ
ಕೊಪ್ಪಳ: ಶ್ರೀ ಗವಿಮಠಕ್ಕೆ ಕಲತಾವರಗೇರಿ ಗ್ರಾಮದ ಭಕ್ತರಾದ ಶ್ರೀ ಭರಮಣ್ಣ ವಿರುಪಣ್ಣ ಲಳಗಿ ಇವರು ೪೫ ಕೆ.ಜಿ ತೂಕವಿರುವ ಹಿತ್ತಾಳೆಯ ಗಂಟೆಯನ್ನು ಸುಮಾರು ೨೦,೦೦೦ ರೂಪಾಯಿ ವೆಚ್ಚದಲ್ಲಿ ತಯಾರಿಸಿ ಶ್ರೀಮಠಕ್ಕೆ ಕಾಣಿಕೆ ಅರ್ಪಿಸಿದರು. ಪೂಜ್ಯ ಶ್ರೀಗಳು ದಾನಿಗಳಿಗೆ ಆಶೀರ್ವದಿಸಿದರು. 
ಆಕಾಶವಾಣಿಯಲ್ಲಿ ರಥೋತ್ಸವದ ವೀಕ್ಷಕ ವಿವರಣೆ
ಕೊಪ್ಪಳ : ದಿನಾಂಕ ೧೧-೦೧-೨೦೧೨ ರಂದು ಬುಧವಾರಂದು ಸಂಜೆ ಜರುಗುವ ರಥೋತ್ಸವದ ವೀಕ್ಷಕ ವಿವರಣೆಯನ್ನು ಹಾಗೂ  ದಿನಾಂಕ ೧೨-೦೧-೨೦೧೨ ರಂದು ಸಂಜೆ ೪-೩೦ ಕ್ಕೆ ಬಳಗಾನೂರು ಪೂಜ್ಯ ಶ್ರೀ ಶಿವಶಾಂತವೀರ  ಶರಣರ ಧೀರ್ಘದಂಡ ನಮಸ್ಕಾರ ಈ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆಯನ್ನು  ಆಯಾ ದಿನಗಳಲ್ಲಿ  ಮಧ್ಯಾಹ್ನ ೪-೩೦ ರಿಂದ ಸಂಜೆ ೬-೩೦ ರ ವರೆಗೇ ಹೊಸಪೇಟೆ ಆಕಾಶವಾಣಿಯು (ಎಫ್.ಎಂ. ಬ್ಯಾಂಡ್) ೧೦೦.೫ರ ಕಂಪನಾಂಕದ ಅಡಿಯಲ್ಲಿ ನೇರ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡಲಾಗುತ್ತದೆ.  ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. 
ಕಲ್ಲು ಕಲ್ಲುಗಳಿಗೂ ಜೀವಸಲೆ
ಕೊಪ್ಪಳ: ಶ್ರೀಗವಿಮಠದ ಜಾತ್ರೆಗೆ ಇನ್ನು ಎರಡೇ ದಿನ ಬಾಕಿ ಇರುವಾಗ ಶ್ರೀಮಠವು ವಿದ್ಯೂತ್ ದೀಪಗಳಿಂದ ಸಿಂಗಾರಗೊಂಡು ಭಕ್ತರ ಕಣ್ಮನಗಳನ್ನು ತಣಿಸುತ್ತಲಿದೆ. ಶ್ರೀಮಠದ ಪ್ರತಿಯೊಂದು ಕಲ್ಲು ಕಲ್ಲುಗಳಿಗೂ ಜೀವಸಲೆ ಬಂದಂತೆ ಬಣ್ಣ ಬಣ್ಣದ ಚಿತ್ತಾರಗಳ ಚಲುವಿನಿಂದ ಕೂಡಿದ ಈ ವಿದ್ಯೂತ್ ದೀಪಗಳು ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತಲಿವೆ.
Please follow and like us:
error