ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’

ಕೊಪ್ಪಳ ೦೬ : ಕೊಪ್ಪಳ ಸಮೀಪದ ಭಾಗ್ಯನಗರ ಗ್ರಾಮದಲ್ಲಿ ದಿ  ೦೫ ರಂದು ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’ ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.   ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕರಾದ ರಾಜಶೇಖರ ಪಾಟೀಲರವರು ದೀಪಾವಳಿ ಹಬ್ಬದ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಕೊಟ್ಟರು.  ಪಾಲಕರು/ಮಕ್ಕಳು ಹಾಗೂ ಸಮಾರಂಭದಲ್ಲಿ ಹಾಜರಿದ್ದ ಸರ್ವರೂ ದೀಪ ಬೆಳಗಿಸಿ ದೀಪೋತ್ಸವ ಆಚರಿಸಿದರು.  ಈ ಸಂದರ್ಭದಲ್ಲಿ ಕುಮಾರಿ ಶಕುಂತಲಾ ಬೆನ್ನಾಳರವರು ವಚನ-ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು
 ತಬಲಾ ಸಾತಿಯಾಗಿ ಶ್ರೀನಿವಾಸ ಜೋಷಿ ಹಾಗೂ ಹಾರ‍್ಮೊನಿಯಂ ವಾದಕರಾಗಿ  ಅಂಬಣ್ಣರವರು ಸಾತ್ ನೀಡಿದರು.  ಸಂಸ್ಥೆಯ ಮುಖ್ಯಸ್ಥರಾದ   ದಾನಪ್ಪ ಜಿ.ಕೆ. ರವರು ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಡಿ. ಎಂ. ಬಡಿಗೇರರವರು & ಶಾಲೆಗೆ ನೂತನವಾಗಿ ಪ್ರಾಂಶುಪಾಲರಾಗಿ ಆಗಮಿಸಿದ   ಪ್ರಶಾಂತ ಕುಲಕರ್ಣಿರವರು ಉಪಸ್ಥಿತರಿದ್ದರು.  ಮಂಗಳಾ ಡಂಬಳ ನಿರೂಪಿಸಿದರು, ಕಲ್ಲಯ್ಯ ಹಿರೇಮಠ ವಂದಿಸಿದರು.
Please follow and like us:
error