You are here
Home > Koppal News > ಕಿನ್ನಾಳ ಗ್ರಾಮದಲ್ಲಿ ಇಕ್ಬಾಲ್ ಅನ್ಸಾರಿಯವರಿಂದ ಮತ ಯಾಚನೆ

ಕಿನ್ನಾಳ ಗ್ರಾಮದಲ್ಲಿ ಇಕ್ಬಾಲ್ ಅನ್ಸಾರಿಯವರಿಂದ ಮತ ಯಾಚನೆ


ಕೊಪ್ಪಳ :  ೦೪-೦೪-೨೦೧೩ ರಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಿನ್ನಾಳ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ  ಇಕ್ಬಾಲ ಅನ್ಸಾರಿ  ಗ್ರಾಮದ ಸರ್ವ ಸಮಾಜದ ಮುಖಂಡರುಗಳು ಹಾಗೂ ಅಭಿಮಾನಿಗಳ ಮನೆಗಳಿಗೆ ತೆರಳಿ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ನನಗೆ ಬೆಂಬಲಿಸಿ ಕ್ಷೇತ್ರದ ಅಭಿವೃದ್ಧಿಮಾಡಲು ಮತವನ್ನು ನೀಡಿ ಅವಕಾಶ ಮಾಡಿಕೊಡಬೇಕೆಂದು ತಮ್ಮ ಪ್ರಚಾರವನ್ನು ಪ್ರಾರಂಬಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಲವಾರು ವಿವಿದ ಪಕ್ಷದ ಮುಖಂಡರುಗಳು  ಹಾಗೂ ಯುವಕರು ಜೆಡಿಎ

ಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರುಗಳಾದ, ಮಹಾದೇವಯ್ಯ ಹಿರೇಮಠ, ಶಂಕ್ರಪ್ಪ ಶಲ್ಲೆದ, ಶಂಕ್ರಪ್ಪ ಮೇಣೆದಾಳ, ಮಂಜುನಾಥ ಜನಾಧ್ರಿ, ಶ್ರೀನಿವಾಸ ಬೆಲ್ಲಮಕೊಂಡಿ, ಪರಸಪ್ಪ ವಾಲ್ಮೀಕಿ, ದಿನೇಶ ರಾಠಿ, ಶ್ರೀನಿವಾಸ ಚೆಂಡಕ, ಶಂಕ್ರಪ್ಪ ಸಾಗರ, ಹಾಗೂ ಅನೇಕರುಗಳು ಅನ್ಸಾರಿಯವರ ಅಭಿವೃದ್ಧಿಕಾರ್ಯಗಳಿಗೆ ಮೆಚ್ಚಿ ಜೆ.ಡಿಎಸ್. ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಶೇಖರಪ್ಪ ಉದ್ದಾರ, ಹಂಪಮ್ಮ ಎಲಿಗಾರ, ಬಸವರಾಜ ಚಿಲವಾಡಗಿ, ವೀರೇಶ ತಾವರಗೇರಿ, ಮಾಬುಸಾಬ ಹೀರಾಳ, ಭಾಷಾ ಹಿರೇಮನಿ, ಪಂಪಾಪತಿ ಹಿರೇಮಠ, ಅನೀಲ ಬೋರಟ್ಟಿ, ಹುಚ್ಚಪ್ಪ ಬಂಡಾ, ವಿರೇಶ ವಾಲ್ಮಿಕಿ, ಪರಸಪ್ಪ ಚಿತ್ರಗಾರ, ವೀರಬದ್ರಪ್ಪ ಭೂತ, ಮಂಜುನಾಥ ಕುದರಿಮೋತಿ ಇನ್ನು ಅನೇಕ ಅನ್ಸಾರಿ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಗೆ ಬಸವರಾಜ ಚಿಲವಾಡಗಿ ತಿಳಿಸಿದ್ದಾರೆ,

Leave a Reply

Top