ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ

ಕೊಪ್ಪಳ, ಜು.೨೯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಖಾಲಿ ಇರುವ ೦೪ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ೩೧
ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಗಂಗಾವತಿ ನಗರದ ವಕೀಲ್ ಗೇಟ್, ಅಗಡಿ ಸಂಗಣ್ಣ ಕ್ಯಾಂಪ್, ಇಲಾಯಿ ಕಾಲೋನಿ, ೧೧ ನೇ
ವಾರ್ಡ್, ೧೨ ನೇ ವಾರ್ಡ್, ೦೬ನೇ ವಾರ್ಡ್, ೩ನೇ ವಾರ್ಡ್, ೨೭ನೇ ವಾರ್ಡ್, ೨೮ನೇ
ವಾರ್ಡ್(೨ನೇ ಕೇಂದ್ರ), ೨೮ನೇ ವಾರ್ಡ್(೦೫ನೇ ಕೇಂದ್ರ), ಬಸಾಪಟ್ಟಣ ವಲಯದ ಬಸಾಪಟ್ಟಣ ೫ನೇ
ವಾರ್ಡ್, ದಾಸನಾಳ, ಹೊಸಬೆಣಕಲ್, ಈಳಿಗನೂರು, ಕಕ್ಕರಗೋಳ, ಬೆನ್ನೂರು(೩ನೇ ಕೇಂದ್ರ),
ದೇವಿ ನಗರ, ಹೊಸಳ್ಳಿ, ಹೊಸ ಅಯೋಧ್ಯ(೩ನೇ ಕೇಂದ್ರ), ಹೊಸ ಅಯೋಧ್ಯ (೨ನೇ ಕೇಂದ್ರ),
ಮರಕುಂಬಿ, ಕೇಸರಹಟ್ಟಿ, ತಾಂಬ್ರಪಲ್ಲಿ ಕ್ಯಾಂಪ್, ಮುಸ್ಟೂರು-೩ನೇ ಕೇಂದ್ರ, ಹೆಬ್ಬಾಳ
ಕ್ಯಾಂಪ್, ವಡ್ರಟ್ಟಿ ಕ್ಯಾಂಪ್-೧ನೇ ಕೇಂದ್ರ, ಸಾಣಾಪುರ-೦೧ ನೇ ಮತ್ತು ೦೨ ನೇ ಕೇಂದ್ರ,
ಹೇರೂರು, ವಡ್ರಟ್ಟಿ ಕ್ಯಾಂಪ್-೨ನೇ ಕೇಂದ್ರದಲ್ಲಿ ಖಾಲಿ ಇರುವ ಒಟ್ಟು ೩೧ ಅಂಗನವಾಡಿ
ಸಹಾಯಕಿಯ ಹುದ್ದೆಗಳಿಗೆ ಹಾಗೂ ಮುಕ್ಕುಂಪಾ (೩ನೇ ಕೇಂದ್ರ), ವೆಂಕಟಗಿರಿ, ಕೋಟಯ್ಯ
ಕ್ಯಾಂಪ್, ಬಸವನದುರ್ಗಾ ಗ್ರಾಮಗಳಲ್ಲಿ ಖಾಲಿ ಇರುವ ಒಟ್ಟು ೦೪ ಅಂಗನವಾಡಿ ಕಾರ್ಯಕರ್ತೆಯರ
ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಜು.೩೧
ಕೊನೆ ದಿನಾಂಕವಾಗಿದ್ದು, ಮೀಸಲಾತಿ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ
ಯೋಜನಾಧಿಕಾರಿ ಕಾರ್ಯಾಲಯ, ಗಂಗಾವತಿ ಇವರನ್ನು ಸಂಪರ್ಕಿಸುವಂತೆ ತಿಳಿಸಿದೆ. 
Please follow and like us:
error