ಉಪಚುನಾವಣೆ : ಮತಗಟ್ಟೆ ರೂಟ್ ಆಫೀಸರ್‌ಗಳ ನೇಮಕ

ಕೊಪ್ಪಳ ಸೆ. ೧೪ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಸಂಬಂಧ ಅಧಿಕಾರಿಗಳನ್ನು ಮತಗಟ್ಟೆಗಳ ಸೆಕ್ಟರ್ ಆಫೀಸರ್/ಮತಗಟ್ಟೆಗಳ ರೂಟ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ ಅಲ್ಲದೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಹಾಯಕರೆಂದು ನೇಮಿಸಲಾಗಿದೆ.
  ಕವಲೂರು, ಗುಡಿಗೇರಿ, ಮುರ್ಲಾಪುರ ಮಾರ್ಗದಲ್ಲಿನ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ, ಕೊಪ್ಪಳ ಇವರನ್ನು ಮತಗಟ್ಟೆಗಳ ರೂಟ್ ಆಫೀಸರ್ ಎಂದು ನೇಮಕ ಮಾಡಲಾಗಿದೆ.  ಅದೇ ರೀತಿ ಅಳವಂಡಿ ಮತಗಟ್ಟೆ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ, ಹಟ್ಟಿ, ಹೈದರನಗರ, ಹಲವಾಗಲಿ, ಕೇಸಲಾಪುರ, ನೀಲೋಗಿಪುರ, ರಘುನಾಥನಹಳ್ಳಿ- ವಲಯ ಅರಣ್ಯ ಅಧಿಕಾರಿಗಳು, ಕೊಪ್ಪಳ.  ಬೆಟಗೇರಾ, ಮೋರನಾಳ, ಭೈರಾಪುರ- ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೊಪ್ಪಳ.  ನೀರಲಗಿ, ಮತ್ತೂರ, ಹುನಕುಂಟಿ, ತಿಗರಿ, ಬೋಚನಹಳ್ಳಿ- ಸಹಾಯಕ ನಿರ್ದೇಶಕರು, ಲೆಕ್ಕ ಪರಿಶೋಧನಾ ಇಲಾಖೆ, ಕೊಪ್ಪಳ.  ಬೂದಿಹಾಳ, ಡಂಬ್ರಳ್ಳಿ, ಬೇಳೂರ, ಕಾತರಕಿ ಗುಡ್ಲಾನೂರ- ಕಾರ್ಯದರ್ಶಿ, ಎ.ಪಿ.ಎಂ.ಸಿ., ಕೊಪ್ಪಳ.  ಹಲಗೇರಾ, ವದಗನಾಳ, ಹಣವಾಳ, ಹಂದ್ರಾಳ, ಬಿಸರಳ್ಳಿ, ಬಿಕನಹಳ್ಳಿ, ಮೈನಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಉಪವಿಭಾಗ, ಕೊಪ್ಪಳ.  ಮಂಗಳಾಪುರ, ಹೊರತಟ್ನಾಳ, ಗುನ್ನಳ್ಳಿ, ಚಿಕ್ಕಸಿಂದೋಗಿ, ಕೋಳೂರ, ಕಾಟ್ರಳ್ಳಿ, ಹಿರೇಸಿಂದೋಗಿ- ಸಹಾಯಕ ನಿರ್ದೇಶಕರು, ತೂಕ ಮತ್ತು ಅಳತೆ ಇಲಾಖೆ, ಕೊಪ್ಪಳ.  ದದೇಗಲ್, ಯತ್ನಟ್ಟಿ, ನರೇಗಲ್, ಮಾದಿನೂರ- ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ.  ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ- ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಕೊಪ್ಪಳ.  ಬಹದ್ದೂರಬಂಡಿ, ಹೂವಿನಾಳ, ಕುಣಿಕೇರಿತಾಂಡಾ, ಕುಣಿಕೇರಾ, ಹೊಸಳ್ಳಿ, ಮುಂಡರಗಿ, ಲಾಚನಕೇರಿ- ಕೈಗಾರಿಕಾ ವಿಸ್ತೀರ್ಣ ಅಧಿಕಾರಿಗಳು, ಕೊಪ್ಪಳ.  ಹಾಲವರ್ತಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ- ಕಾರ್ಮಿಕ ನಿರೀಕ್ಷಕರು, ಕೊಪ್ಪಳ.  ಗಿಣಿಗೇರಾ, ಗುಳದಳ್ಳಿ, ಗಬ್ಬೂರ, ಹಳೆಕನಕಾಪುರ, ಲಿಂಗದಳ್ಳಿ- ತಾಲೂಕು ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಕೊಪ್ಪಳ.  ಮಹಮದ್ ನಗರ, ಬಂಡಿಹರ್ಲಾಪುರ, ಬಸಾಪುರ, ನಾರಾಯಣಪೇಟ- ಕೇಂದ್ರಸ್ಥಾನಿಕ ಅಧಿಕಾರಿ, ಕೃಷಿ ಇಲಾಖೆ, ಕೊಪ್ಪಳ.  ಅಗಳಕೇರಾ, ಶಿವಪುರ, ಹಿಟ್ನಾಳ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಂ.೨, ಉಪವಿಭಾಗ, ಅಗಳಕೇರಾ.  ಮುನಿರಾಬಾದ್ ಡ್ಯಾಂ, ಹೊಸಲಿಂಗಾಪುರ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾರ್ಯಾಗಾರ ಮತ್ತು ಯಾಂತ್ರಿಕ ಉಪವಿಭಾಗ, ಮುನಿರಾಬಾದ್.  ಕಂಪಸಾಗರ, ಹುಲಗಿ, ಮುನಿರಾಬಾದ್, ಹೊಸಳ್ಳಿ- ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೊಪ್ಪಳ.  ಟಣಕನಕಲ್, ಹಟ್ಟಿ, ಕಲಕೇರಿ, ಕಿಡದಾಳ, ಬಸಾಪುರ, ಕುಟಗನಹಳ್ಳಿ, ಓಜನಹಳ್ಳಿ, ಚಿಲವಾಡಗಿ, ಹನುಮನಹಳ್ಳಿ- ವಿಸ್ತರಣಾಧಿಕಾರಿಗಳು, ಬಿ.ಸಿ.ಎಂ. ಇಲಾಖೆ, ಕೊಪ್ಪಳ.  ಹೊಸಕನಕಾಪುರ, ಬೇವಿನಹಳ್ಳಿ, ಹಿರೇಕಾಸನಕಂಡಿ, ಶಹಪುರ, ಕೆರೆಹಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಿಎಂಜಿಎಸ್‌ವೈ, ಕೊಪ್ಪಳ.  ಭಾಗ್ಯನಗರ- ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಭಾಗ್ಯನಗರ.  ಕೊಪ್ಪಳ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಗರಸಭೆ, ಕೊಪ್ಪಳ., ಉಪ ಪ್ರಾಚಾರ್ಯರು, ಜಿಲ್ಲಾ ತರಬೇತಿ ಕೇಂದ್ರ, ಕೊಪ್ಪಳ ಹಾಗೂ ಪ್ರಾಚಾರ್ಯರು, ಸರ್ಕಾರಿ ಪದವಿ ಕಾಲೇಜು, ಕೊಪ್ಪಳ ಮತ್ತು ಸಹಾಯಕ ನಿರ್ದೇಶಕರು, ಭೂಸೇನಾ ನಿಗಮ, ಕೊಪ್ಪಳ ಇವರನ್ನು ಮತಗಟ್ಟೆಗಳ ಸೆಕ್ಟರ್ ಆಫೀಸರ್/ ಮತಗಟ್ಟೆಗಳ ರೂಟ್ ಆಫೀಸರ್ ಎಂದು ನೇಮಿಸಲಾಗಿದೆ.  ಈ ಅಧಿಕಾರಿಗಳು ಚುನಾವಣಾಧಿಕಾರಿಗಳ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಬೇಕು, ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ರಜೆಯ ಮೇಲೆ ತೆರಳುವಂತಿಲ್ಲ, ಯಾವುದೇ ಕರ್ತವ್ಯಲೋಪವೆಸಗಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error