ಕಳಪೆ ಆಹಾರ.

ಇಂದು ಅಶೋಕ ವೃತ್ತದ ಹತ್ತಿರ ಇರುವ ಜನರಲ್ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಸಮಸ್ಯಗಳ ಗೂಡಾಗಿದ್ದು, ಅಪೌಷ್ಟಿಕ ಆಹಾರ ವಿತರಣೆಯಿಂದ ವಿದ್ಯಾರ್ಥಿಗಳು ನರಳುತ್ತಿದ್ದಾರೆ. ಗುಣ ಮಟ್ಟದ ಊಟ ಸಿಗದ ಕಾರಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೀವೃ ತೊಂದರೆಯಾಗುತ್ತಿದೆ. ವಸತಿ ನಿಲಯಕ್ಕೆ ವಿತರಣೆಯಾಗಿರುವ ಅಕ್ಕಿ ಗುಣ ಮಟ್ಟದಿಂದ ಕೂಡಿಲ್ಲ. ಅದರಲ್ಲಿ ಕಸ ಕಡ್ಡಿ ಸಾಕಷ್ಟಿದ್ದು ಅದನ್ನು ಶುಚಿಗೊಳಿಸದೆ ಹಾಗೆ ಹಾಕಲಾಗುತ್ತಿದೆ. ಊಟ ಮಾಡುವ ವೇಳೆ ಊಟಕ್ಕಿಂತ ಕಲ್ಲು ತೆಗೆಯುವ ಕೆಲಸವೇ ಹೆಚ್ಚಾಗಿ ನಡೆಯುತ್ತಿದೆ. ಮೆನು ಚಾರ್ಟ್ ಪ್ರಕಾರ ಆಹಾರವನ್ನು ವಿತರಣೆ ಮಾಡದೆ ವಿದ್ಯಾರ್ಥಿಗಳಿಗೆ ದ್ರೋಹ ಬಗೆಯಲಾಗುತ್ತಿದೆ. ಸಾಂಬರ್ ಗೆ ತರಕಾರಿಗಳನ್ನು ಬೇಳೆ ಕಾಳುಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಒಟ್ಟಿನಲ್ಲಿ ನಿತ್ಯ ಕಲ್ಲು ಕಸದಿಂದ ಕೂಡಿರುವ ಅಪೌಷ್ಟಿಕ ಆಹಾರವನ್ನು ಸೇವಿಸುತ್ತಿರುವುದು ಖಂಡನೀಯ. ವಸತಿ ನಿಲಯದ ಸುತ್ತ ಶುಚಿತ್ವ ಇಲ್ಲದ ಕಾರಣ ಸೊಳ್ಳೆಗಾಳ ಕಾಟ ಹೆಚ್ಚಾಗಿದೆ. ಕಸ ಕಡ್ಡಿ ಕೂಡಿದ ಊಟವನ್ನು ಮಾಡು

ವುದು ಒಂದೆಡೆ ಆದರೆ ಸಂಜೆಯಾದೊಡನೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಗುಣ ಮಟ್ಟದ ಆಹಾರ ಸೇವನೆ ಇಲ್ಲದಿರುವುದು ಮತ್ತು ಸೊಳ್ಳೆಗಳು ಕಚ್ಚುತ್ತಿರುವುದರಿಂದ ನಿತ್ಯ ವಿದ್ಯಾರ್ಥಿಗಳು ರೋಗದಿಂದ ಬಳಲುತ್ತಿದ್ದಾರೆ. ಕುಡಿಯಲು ಗುಣ ಮಟ್ಟದ ನೀರು ಇರುವುದಿಲ್ಲ. ಕಲ್ಮಶದಿಂದ ಕೂಡಿರುವ ನೀರನ್ನೆ ವಿದ್ಯಾರ್ಥಿಗಳು ಸೇವಿಸುತ್ತಿದ್ದಾರೆ. ನಿಗದಿಯಂತೆ ಮೊಟ್ಟೆ ಮತ್ತು ಬಾಳೆಹಣ್ಣನ್ನು ವಿತರಣೆ ಮಾಡುವುದಿಲ್ಲ. ಮಕ್ಕಳಿಗೆ ನೀಡುವ ಮೊಟ್ಟೆ ಮತ್ತು ಬಾಳೆಹಣ್ಣಿನ ಹಣ ಸೋರಿಕೆಯಾಗುತ್ತಿದ್ದು ಅದನ್ನು ತನಿಖೆ ಮಾಡಬೇಕು. ಕೊಪ್ಪಳ ಎಸ್.ಪಿ.ಕಚೇರಿ ಎದುರು ಎಸ್.ಎಫ್.ಐ ನೇತೃತ್ವದಲ್ಲಿ ಪ್ರತಿಭಟಿಸಿದರು.

Please follow and like us:
error