ಇಂದು ಸಚಿವ ಬೇಗ್ ಜನ್ಮ ದಿನಾಚರಣೆ ಕೊಪ್ಪಳದಲ್ಲಿ ಸಯ್ಯದ್ ಫೌಂಡೇಶನ್ ವತಿಯಿಂದ ಹಣ್ಣು ಹಂಪಲ ವಿತರಣೆ

ಕೊಪ್ಪಳ –  ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ದಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಜ್ ಖಾತೆ ಸಚಿವರಾದ ಆರ್.ರೋಷನ್ ಬೇಗ್ ಅವರ ೬೨ನೇ ಜನ್ಮ ದಿನಾಚರಣೆಯ ಅಂಗವಾಗಿ ಜು.೧೫ ರ ಬುಧವಾರ ಬೆಳಿಗ್ಗೆ ಕೊಪ್ಪಳದಲ್ಲಿ ಸಯ್ಯದ್ ಫೌಂಡೇಶನ್ ವತಿಯಿಂದ ಜನ್ಮ ದಿನಾಚರಣೆಯನ್ನು ಏರ್ಪಡಿಸಲಾಗಿದೆ.
    ಸಚಿವರಾದ ಆರ್.ರೋಷನ್ ಬೇಗ್‌ರವರು ಕಾಂಗ್ರೆಸ್ ಸರ್ಕಾರದ ಹಿರಿಯ ಸಚಿವರು, ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕರಾಗಿದ್ದು, ಅವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅವರ ಕೊಡುಗೆ ಸಮಾಜಕ್ಕೆ ಈ ನಾಡಿಗೆ ಅಪಾರವಾಗಿದೆ. ಅವರ ನಾಯಕತ್ವ ಸಮಾಜಕ್ಕೆ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿ ಕಾಂಗ್ರೆಸ್ ಮುಖಂಡ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್‌ರವರ ಸ್ನೇಹಿತರ ಅಭಿಮಾನಿ ಬಳಗದ ವತಿಯಿಂದ ರೋಗಿಗಳಿಗೆ ಜು.೧೫ ರ ಬುಧವಾರ ಬೆಳಿಗ್ಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲ ವಿತರಣೆ ಮಾಡುವುದರ ಮೂಲಕ ಸಚಿವರ ಜನ್ಮ ದಿನವನ್ನು ಆಚರಿಸಲಾಗುವುದು ಎಂದು ಸಯ್ಯದ್ ಫೌಂಡೇಶನ್ ಕಛೇರಿ ತಿಳಿಸಿದೆ.
Please follow and like us:
error

Related posts

Leave a Comment