ದೇವಸ್ಥಾನಗಳಲ್ಲಿನ ಹಣವನ್ನು ಮೂಲಭೂತ ಸೌಕರ್ಯಕ್ಕೆ ಬಳಸಲು ಸೂಚನೆ- ಟಿ.ಬಿ. ಜಯಚಂದ್ರ

ಕೊಪ್ಪಳ ಸೆ. ೦೩ (ಕ ವಾ) ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಲಭ್ಯವಿರುವ ಹಣವನ್ನು ದೇವಸ್ಥಾನಗಳ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ವಿನಿಯೋಗಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಪಶುಸಂಗೋಪನೆ ಹಾಗೂ ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದರು.
         ಜಿಲ್ಲಾಡಳಿತ ಕೊಪ್ಪಳ ವತಿಯಿಂದ ಯಲಬುರ್ಗಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದ ಬಯಲು ರಂಗಮಂದಿರದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಯಲಬುರ್ಗಾ ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಧಾರ್ಮಿಕ ದತ್ತಿ ಆರಾಧನಾ ಯೋಜನೆಯಡಿ ವಿವಿಧ ದೇವಸ್ಥಾನ ಮತ್ತು ಮಸೀದಿ ಕಟ್ಟಡಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಚೆಕ್ಕುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
        ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತಿದೆಯಾದರೂ, ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ದೇವಸ್ಥಾನಗಳಲ್ಲಿ ಹಣದ ಕೊರತೆ ಇರುವುದಾಗಿ ಈ ಮೊದಲು ಹೇಳಲಾಗುತ್ತಿತ್ತು.  ದೇವಸ್ಥಾನಗಳ ಲೆಕ್ಕ ಪರಿಶೋಧನೆ ಮಾಡಿಸಿ, ವರದಿ ಪಡೆಯಲಾಗಿದ್ದು, ದೇವಸ್ಥಾನಗಳಲ್ಲಿ ಒಟ್ಟಾರೆ ಸುಮಾರು ೫೦೦ ಕೋಟಿ ರೂ. ಹಣ ಲಭ್ಯವಿರುವ ಅಂಶ ಬೆಳಕಿಗೆ ಬಂದಿದೆ.  ದೇವಾಲಯಗಳಿಗೆ ಬರುವ ದೇಣಿಗೆ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಮಾತ್ರಕ್ಕೆ ದೇವಾಲಯಗಳು ಅಭಿವೃದ್ಧಿಯಾಗುವುದಿಲ್ಲ ಅಲ್ಲದೆ ಭಕ್ತಾದಿಗಳಿಗೆ ಉತ್ತಮ ಸೌಲಭ್ಯ ದೊರೆಯುವುದಿಲ್ಲ.  ಭಕ್ತಾದಿಗಳು ಮಾನಸಿಕ ನೆಮ್ಮದಿಯನ್ನರಸಿ ದೇವಾಲಯಗಳಿಗೆ ಬರುತ್ತಾರೆ.  ಅಲ್ಲಿ ಅವರಿಗೆ ಉತ್ತಮ ವಾತಾವರಣ ಲಭ್ಯವಾಗಬೇಕು.  ದೇವಾಲಯಕ್ಕೆ ನೆಮ್ಮದಿಯರಸಿ ಬರುವ ಭಕ್ತರು ಅಸಹ್ಯ ಪಡುವಂತಾಗಬಾರದು.  ಇಲಾಖಾ ವ್ಯಾಪ್ತಿಯ ಹಲವು ದೇವಾಲಯಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಯ ಕೊರತೆ ಕಂಡುಬರುತ್ತಿದೆ.  ಇದನ್ನು ಮನಗಂಡಿರುವ ಸರ್ಕಾರ, ದೇವಾಲಯಗಳಲ್ಲಿ ಲಭ್ಯವಿರುವ ಹಣವನ್ನು ಭಕ್ತಾದಿಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳು, ಸ್ವಚ್ಛತೆ ಹಾಗೂ ಅಭಿವೃದ್ಧಿಗಾಗಿ ಬಳಸಲು ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.  ಯಲಬುರ್ಗಾ ಕ್ಷೇತ್ರದಲ್ಲಿ ದೇವಾಲಯಗಳು ಹಾಗೂ ಮಸೀದಿಗಳ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಆರಾಧನಾ ಯೋಜನೆ ಯೋಜನೆಯಡಿ ಒಟ್ಟು ೫. ೭೩ ಕೋಟಿ ರೂ. ಅನುದಾನವನ್ನು ಏಕಕಾಲಕ್ಕೆ ಬಳಸುತ್ತಿರುವುದು, ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿದೆ.  ದೇವರ ಆರಾಧನೆಯಲ್ಲಿ ಆಡಂಬರವಿರಬಾರದು, ಆದರೆ ಪ್ರಾಮಾಣಿಕತೆ ತೋರಬೇಕು.  ದೇವಾಲಯಗಳ ಅಭಿವೃದ್ಧಿಗೆ ಶಾಸಕ ಬಸವರಾಜ ರಾಯರಡ್ಡಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಸಚಿವ ಟಿ.ಬಿ. ಜಯಚಂದ್ರ ಅವರು ಶ್ಲಾಘಿಸಿದರು. ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ಗಂಭೀರ : ಸದ್ಯ ರಾಜ್ಯದಲ್ಲಿ ಮಳೆಯ ಅಭಾವ ಕಾಡುತ್ತಿದ್ದು, ಅಲ್ಪ ಸ್ವಲ್ಪ ಆಗಿರುವ ಮಳೆ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲತೆಯನ್ನು ತಂದಿಲ್ಲ.  ಜಲಾಶಯಗಳು ಖಾಲಿಯೇ ಉಳಿದಿವೆ.  ಮುಂದಿನ ದಿನಗಳಲ್ಲಿ ಮಳೆ ಆಗದಿದ್ದಲ್ಲಿ ಬರ ಪರಿಸ್ಥಿತಿ ಇನ್ನಷ್ಟು ಗಂಭೀರತೆಯನ್ನು ಪಡೆಯಲಿದೆ.  ಬರ ಪರಿಸ್ಥಿತಿಯ ನಿರ್ವಹಣೆಗೆ ಸರ್ಕಾರ ಅಗತ್ಯ ಅನುದಾನವನ್ನು ಜಿಲ್ಲೆಗಳಿಗೆ ಒದಗಿಸಲಿದ್ದು, ಬರ ನಿರ್ವಹಣೆಗೆ ಹಣಕಾಸಿನ ಯಾವುದೇ ಕೊರತೆ ಇಲ್ಲ.  ಬರುವ ದಿನಗಳಲ್ಲಾದರೂ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಮೊರೆಯಿಡುವುದೊಂದೇ ನಮಗೆ ಇರುವ ದಾರಿ ಎಂದು ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದರು.
        ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಬಸವರಾಜ ರಾಯರಡ್ಡಿ ಅವರು, ಯಲಬುರ್ಗಾ ಕ್ಷೇತ್ರದಲ್ಲಿನ ಬರ ಪರಿಸ್ಥಿತಿ ಬಗ್ಗೆ ಈಗಾಗಲೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.  ವಿದ್ಯುತ್ ಹಾಗೂ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಉದ್ಭವವಾಗಿದೆ.  ಕ್ಷೇತ್ರದ ವಿದ್ಯುತ್ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ೪೦-೫೦ ಮೆ.ವ್ಯಾ. ಹೆಚ್ಚುವರಿ ವಿದ್ಯುತ್ ಹಂಚಿಕೆ ಮಾಡುವಂತೆ ಕೋರಲಾಗಿದೆ.  ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು.  ವಿದ್ಯುತ್ ಹಂಚಿಕೆಯಲ್ಲಿ ತಾರತಮ್ಯ ನಿವಾರಿಸಿ, ಕೇಂದ್ರ ಸರ್ಕಾರ ಸಮರ್ಪಕ ವಿದ್ಯುತ್ ಹಂಚಿಕೆ ಮಾಡಬೇಕು.  ವಿದರ್ಭ ಪ್ಯಾಕೇಜ್ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜನ್ನು ಕೇಂದ್ರ ಸರ್ಕಾರ ಘೋಷಿಸಬೇಕು.  ಯಲಬುರ್ಗಾ ತಾಲೂಕಿನಲ್ಲಿ ವರ್ಷದೊಳಗಾಗಿ ೧೦೦ ಶುದ್ಧ ಕು
         ಕಾರ್ಯಕ್ರಮದಲ್ಲಿ ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಮಹಾದೇವಿ ಕಂಬಳಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಭಾಗೀರಥಿ ಜೋಗಿನ, ಜಿ.ಪಂ. ಸದಸ್ಯರುಗಳಾದ ಅಶೋಕ ತೋಟದ, ರಾಮಣ್ಣ ಸಾಲಭಾವಿ, ಜಿಲ್ಲಾಧಿಕಾರಿ ರಮಣದೀಪ್ ಚೌಧರಿ, ಬಳ್ಳಾರಿ, ರಾಯಚೂರು ಮತ್ತು ಬಳ್ಳಾರಿ  ಹಾಲು ಒಕ್ಕೂಟ ಅಧ್ಯಕ್ಷ ವೆಂಕನಗೌಡ ಹಿರೇಗೌಡರ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.  ವಸತಿ ಯೋಜನೆಗಳ ಸಾಲ ಮನ್ನಾ ಮಾಡಿದ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರವನ್ನು ವಿತರಣೆ ಮಾಡಲಾಯಿತು.  ಹಾಲು ಒಕ್ಕೂಟ ವತಿಯಿಂದ ೧೮ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು.  ಹಾಗೂ ಮೇವು ಬೆಳೆ ಉತ್ತೇಜನಕ್ಕೆ ರೈತರಿಗೆ ಉಚಿತ ಮೇವು ಬೀಜ ಕಿಟ್ ಅನ್ನು ಇದೇ ಸಂದರ್ಭದಲ್ಲಿ ರೈತರಿಗೆ ಸಚಿವ ಟಿ.ಬಿ. ಜಯಚಂದ್ರ ಅವರು ವಿತರಿಸಿದರು.

ಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುವುದು.  ಕ್ಷೇತ್ರದ ೧೦೬ ಗ್ರಾಮಗಳ ೨೬೯ ದೇವಸ್ಥಾನ/ಮಸೀದಿಗಳ ಅಭಿವೃದ್ಧಿಗೆ ಒಟ್ಟು ೫. ೭೩ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ೨೦೦೫-೦೬ ರಿಂದ ೨೦೦೮-೦೯ ನೇ ಸಾಲಿನವರೆಗಿನ ಆಶ್ರಯ ಹಾಗೂ ವಿವಿಧ ವಸತಿ ಯೊಜನೆಗಳ ಫಲಾನುಭವಿಗಳ ಸುಮಾರು ೧೦೦ ಕೋಟಿ ರೂ. ಗಳ ಸಾಲ ವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ ಎಂದರು.

Please follow and like us:
error