fbpx

ಬದುಕಿಗೆ ಸ್ಫೂರ್ತಿತುಂಬುವ ಸಾಹಿತ್ಯ ಸೃಷ್ಟಿಯಾಗಲಿ- ಬಿ.ಎಸ್ ಪಾಟೀಲ್.

ಕೊಪ್ಪಳ,೦೨ ನೇಹಾ ಸಾಂಸ್ಕೃತಿಕ ವೇದಿಕೆ, ಸಿರಿಗನ್ನಡ ವೇದಿಕೆ, ವಿಶಾಲ ಪ್ರಕಾಶನ ಮತ್ತು ವರಸಿದ್ದಿವಿನಾಯಕ ಸಂಸ್ಥೆ ಮಾದಿನೂರು, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. ೦೧ ನವಂಬರ್ ೨೦೧೫ ರಂದು ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯೋತ್ಸವ ಕವಿಗೋಷ್ಠಿ, ಸನ್ಮಾನ ಹಾಗೂ ಲೇಖಕ ಮಂಜುನಾಥ ಪ.ಚಿತ್ರಗಾರರ ಪ್ರಥಮ ಮೊಗ್ಗು ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡ್ರ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್‌ರು ಸಾಹಿತ್ಯ ಸಮಾಜಕ್ಕೆ ಸ್ಪಂದನಶೀಲವಾಗಿರಬೇಕು, ನಾಡಿನ ಜ್ವಲಂತ ಸಮಸ್ಯೆಗಳು ಹಾಗೂ ರೈತರ ಸಾವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬದುಕಿಗೆ ಸ್ಫೂರ್ತಿ ತುಂಬುವ ರೀತಿಯಲ್ಲಿರಬೇಕು, ಇಂಥಹದ್ದೊಂದು ವಿಶೇಷ ಸಾಹಿತ್ಯ ಪ್ರಕಾರ ನಮ್ಮ ಜಿಲ್ಲೆಯಿಂದಲೇ ಪ್ರಾರಂಭವಾಗಲಿ ಎಂದು ಕರೆ ಕೊಟ್ಟರು. ಮೊಗ್ಗು ಕವನ ಸಂಕಲನವನ್ನು ಬಿಡುಗಡೆಗೊಳಿಸಿ ತಿರುಳ್ಗನ್ನಡದ ಸಾಹಿತ್ಯ ಸತ್ವ ಭರಿತವಾದುದ್ದು, ಯುವ ಲೇಖಕರಿಗೆ ಬೆನ್ನು ತಟ್ಟಬೇಕೆಂದು, ಸಮಾಜವನ್ನು ತಿದ್ದುವಲ್ಲಿ ಸಾಹಿತಿಗಳ ಮೇಲೆ ಗುರುತರವಾದ ಜವಾಬ್ದಾರಿ ಇದೇ ಎಂದು ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಅವರು ತಿಳಿಸಿದರು.
  ಈ ಪೂರ್ವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಎಸ್.ಗೋನಾಳರು ನಮ್ಮ ಭಾಗದ ಯುವ ಬರಹಗಾರರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ, ಅವರಿಗೆ ಸಲಹೆ, ಸಹಕಾರ ದೊರೆತರೆ ಅದ್ಭುತ ಸಾಧನೆಗಳಾಗುತ್ತವೆ, ಕಲೆ, ಸಾಂಸ್ಕೃತಿಕ, ಸಾಹಿತ್ಯಿಕ ಪರಂಪರೆಯ ಉಳಿವಿಗಾಗಿ ಇಂಥಹ ಕಾರ್ಯಕ್ರಮಗಳ ಅನಿವಾರ್ಯವಿದೆ ಎಂದರು.
  ರಾಜ್ಯೋತ್ಸವ ಕವನ ಸ್ಫಧಯಲ್ಲಿ ವಿಜೇತರಾದ ಶರಶ್ಚಂದ್ರ ರಾನಡೆ, ಸುಭಾಶ್ಚಂದ್ರ ಮೇಟಿ, ಅಲ್ಲಾವುದ್ದೀನ್ ಎಮ್ಮಿ, ಶ್ರೀನಿವಾಸ ಚಿತ್ರಗಾರ ಹಾಗೂ ಮಂಜುನಾಥ ಚಿತ್ರಗಾರರನ್ನು ಸನ್ಮಾನಿಸಲಾಯಿತು.
  ಮುಖ್ಯ ಅತಿಥಿಗಳಾಗಿ ಡಾ.ವಿ.ಬಿ.ರಡ್ಡೇರ್, ಇಂದಿರಾ ಬಾವಿಕಟ್ಟಿ, ವೀರಣ್ಣ ವಾಲಿ, ಎಂ.ಸಾದಿಕ್ ಅಲಿ, ಸೋಮರಡ್ಡಿ ಅಳವಂಡಿ, ಶರಣಪ್ಪ ಬಾಚಲಾಪೂರ್, ಬಸವರಾಜ್ ಬಿನ್ನಾಳ, ಪ್ರಹ್ಲಾದ್ ಅಗಳಿ, ಬಾಲಕೃಷ್ಣ ಎಂ.ಚಿತ್ರಗಾರ, ಬಸವರಾಜ್ ಕರುಗಲ್, ರಾಜಶೇಖರ ಅಂಗಡಿ ಹಾಗೂ ಕೆ.ರಾವ್ ಮುಂತಾದವರು ಉಪಸ್ಥಿತರಿದ್ದರು.
  ಮೊಗ್ಗು  ಕೃತಿಕಾರ ಮಂಜುನಾಥ ಚಿತ್ರಗಾರರಿಗೆ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಕರುನಾಡ ಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಕು.ಮೇಘರಾಜ್ ರೆಡ್ಡಿ, ಭಾಸ್ಕರ್‌ರಾವ್, ಹನುಮಂತಗೌಡ ಪಾಟೀಲ್, ಶಿವಶಂಕರ್, ಎಸ್.ಎಂ.ಕಂಬಾಳಿಮಠ, ಗವಿಸಿದ್ದೇಶ ಹುಡೇಜಾಲಿ, ಬಸವರಾಜ್ ಮುಂತಾದ ೩೦ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಮಂಜುನಾಥ ಚಿತ್ರಗಾರರು ಭಾವುಕರಾಗಿ ತಮ್ಮ ಕೃತಿ ಹೊರತರುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಕೊಟಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕೆ.ಸೌಪರ್ಣಿ ಕನ್ನಡ ಗೀತೆಗಳನ್ನು ಹಾಡಿದರು. ಶಿಶು ಸಾಹಿತಿಗಳಾದ ಶ್ರೀನಿವಾಸ ಚಿತ್ರಗಾರರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಲ್ಲನಗೌಡ ಮಾಲಿಪಾಟೀಲರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ವಂದಿಸಿದರು.

ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೈದ ವಿಜಯಕುಮಾರ್ ಕವಲೂರ್, ಜಯರಾಜ್ ಭೂಸದ್, ರಾಜೇಶ ಸಸಿಮಠ, ಹನುಮಂತಪ್ಪ ಅಂಡಗಿ ಹಾಗೂ ಮಹೆಬೂಬ್ ಮನಿಯಾರ್ ಇವರುಗಳನ್ನು ಸನ್ಮಾನಿಸಲಾಯಿತು.

Please follow and like us:
error

Leave a Reply

error: Content is protected !!