ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.

ಕೊಪ್ಪಳ, ಕೊಪ್ಪಳ ಜಿಲ್ಲಾ ಕಲಾವಿದರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಡಿ. ೧೪ ರಂದು ಸಾಯಂಕಾಲ ೪ ಗಂಟೆಗೆ ಸಾಹಿತ್ಯಭವನದ ಪಕ್ಕದಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್. ಎಸ್. ಪಾಟೀಲ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ ಇವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶೇಷ ಪೊಲೀಸ್ ಅಧಿಕಾರಿ ರುದ್ರೇಶ ಉಜ್ಜನಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿ. ಕೊಟ್ರಪ್ಪ, ಡಾ. ಮಹಾಂತೇಶ ಮಲ್ಲನಗೌಡ್ರ, ಜಾನಪದ ಕಲಾವಿದ ಹಾಗೂ ಪತ್ರಕರ್ತ ವೈ. ಬಿ. ಜೂಡಿ, ರಂಗ ಕಲಾವಿದ ಕೊಟ್ರೇಶ ಅವರು ಪಾಲ್ಗೊಳ್ಳುವರು. ಈ ಸಮಾರಂಭಕ್ಕೆ ಜಿಲ್ಲೆಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಾಷಾ ಹಿರೇಮನಿ ಅವರು ಮನವಿ ಮಾಡಿದ್ದಾರೆ.

Related posts

Leave a Comment