ಒತ್ತಡ ನಿರ್ವಾರಿಸಿಕೊಳ್ಳಲು ಕ್ರೀಡೆ ಸಹಕಾರಿ: ಬೀರಪ್ಪ ಅಂಡಗಿ ಚಿಲವಾಡಗಿ.

ಕೊಪ್ಪಳ-03- ದೈನಂದಿನ ಒತ್ತಡ ನಿವಾರಿಸಿಕೊಂಡು ಮಾನಸಿಕ ಹಾಗೂ ದೈಹಿಕ ಸದೃಡತೆ ಹೊಂದಲು ಪ್ರತಿಯೊಬ್ಬ ವ್ಯಕ್ತಿಗೆ ಕ್ರೀಡಾ ಚಟುವಟಿಕೆಗಳು ಸಹಾಯಕಾರಿ ಎಂದು ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ತಾಲೂಕಿನ ಬೂದಗುಂಪಾ ಗ್ರಾಮದ ಕುವೆಂಪು ಹಿರಿಯ ಹಾಗೂ ಪ್ರೌಢ ಶಾಲೆಯ ವಾರ್ಷಿಕೊತ್ಸವದ ಅಂಗವಾಗಿ ಶಾಲೆಯ ಪಾಲಕರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾ ದಿನೋತ್ಸವ ಕಾಂiಕ್ರಮದ ಕ್ರೀಡಾ ಧ್ವಜಾರೋಹಣವನ್ನು ನೇರೆವೇರಿಸಿ ಮಾತನಾಡುತ್ತ,ಕ್ರೀಡೆ ಎಂಬುದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ.ಕ್ರೀಡೆಯಲ್ಲಿ ವ್ಯಕ್ತಿಯು ಭಾಗವಹಿಸುವದರಿಂದ ವ್ಯಕ್ತಿಯು ಆರೋಗ್ಯವಾಗಿರುವುದರ ಜೊತೆಯಲ್ಲಿ ಸದಾ ಉಲ್ಲಾಸದಿಂದ ಇರುತ್ತಾರೆ.ವಿದ್ಯಾರ್ಥಿಗಳ ಪಾಲಕರು ತಮ್ಮ ವೃತ್ತಿಯಲ್ಲಿ ನಿರತರಾಗಿರುತ್ತಾರೆ ಅಂತವರನ್ನು ಒಂದು ಕಡೆಯಲ್ಲಿ ಸೇರಿಸಿ ಅವರಿಗಾಗಿ ಕ್ರೀಡೆಗಳನ್ನು ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.ವಿದ್ಯಾರ್ಥಿಯ ಜೀವನದಲ್ಲಿ ಸಮಯ ಬಹಳ ಮಹತ್ವದಾಗಿದೆ.ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಪೊಲೀಸ್ ಠಾಣೆಯ ವೃತ್ತ ನಿರಿಕ್ಷಕರಾದ ಮೋಹನ ಪ್ರಸಾದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮಾತನಾಡಿ,ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ
ಮಹತ್ವದಾಗಿದೆ.ಪಾಲಕರು ಪ್ರತಿದಿನ ಮಕ್ಕಳ ಶಾಲಾ ಪ್ರಗತಿಯ ಬಗ್ಗೆ ಹಾಗೂ ಶಾಲಾ
ಚಟುವಟಿಕೆಗಳ ಬಗ್ಗೆ ಅರಿಯಬೇಕು.ತಂತ್ರಜ್ಞಾನ ಬಹಳ ಪ್ರಗತಿಯನ್ನು ಹೊಂದಿದ್ದು,ಅದನ್ನು
ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.ದೂರದರ್ಶನಕ್ಕೆ ನೀಡುವ ಸಮಯವನ್ನು ಮಕ್ಕಳ ಶಿಕ್ಷಣದ
ಕಡೆಗೆ ನೀಡಿದರೆ,ಮಕ್ಕಳ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರ ಬರುತ್ತಾರೆ.ಶಿಕ್ಷಣ
ಕ್ಷೇತ್ರದಲ್ಲಿ ಶಿಕ್ಷೆ,ದಂಡಣೆ ಇರಬೇಕು ಅಂದಾಗ ಮಾತ್ರ ಉತ್ತಮ ಶಿಸ್ತು ಮೂಡಲು
ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನಿರಾಬಾದ ವಲಯ
ನಿವೃತ್ತ ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ನಾಯಕ ವಹಿಸಿದ್ದರು. ಕಾರ್ಯಕ್ರಮದಲ್ಲಿ
ಮುಖ್ಯೋಪಾದ್ಯಾಯರ ಸಂಘದ ಜಿಲ್ಲಾಧ್ಯಕ್ಷರಾದ ಉಮೇಶಬಾಬು ಸುರ್ವೇ,ಸಂಸ್ಥೆಯ ಅಧ್ಯಕ್ಷರಾದ
ಶಿವನಗೌಡ ಪೋಲಿಸ್‌ಪಾಟೀಲ್,ಕುವೇಂಪು ಶಾಲೆಯ ಮುಖ್ಯೋಪಾಧ್ಯಾಯರಾದ ಹನಮನಗೌಡ
ಗೌಡರ,ಶಿಕ್ಷಕರಾದ ರಾಮಣ್ಣ ಶ್ಯಾವಿ,ಪಾಲಕರಾದ ಶಿವರಾಜ ಕಾಟ್ರಹಳ್ಳಿ,ನಿಂಗಪ್ಪ
ಕುಂಬಾರ,ದುರುಗಪ್ಪ ಇಂದರಗಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು
ವಿದ್ಯಾರ್ಥಿಗಳಾ ಅನುಶ್ರೀ ದುನ್ನಿ, ಕರುಣ ಬೇಟಗೇರಿ ನಿರೂಪಿಸಿದರು. ವಿದ್ಯಾರ್ಥಿನಿ
ಸವಿತಾ ವಕ್ಕಳ ಸ್ವಾಗತ, ಭೂಮಿಕಾ ಶ್ಯಾವಿ ಎಲ್ಲರಿಗೂ ವಂದಿಸಿದರು.

Please follow and like us:
error