ತೊಗಲು ಗೊಂಬೆ ಆಟ ಪ್ರದರ್ಶನ

ಶ್ರೀ ಗವಿಸಿದ್ದೇಶ್ವರ ತೊಗಲು ಗೊಂಬೆ ಆಟಗಾರರ ಸಂಘ(ರಿ) ಮೊರನಾಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ತೊಗಲುಗೊಂಬೆ ಆಟ ಪ್ರದರ್ಶನವನ್ನು ದಿನಾಂಕ ೧೩-೧೦-೨೦೧೪ ರಂದು ಬಿಸರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರಾದ ಯಮನೂರಪ್ಪ ಕೊರವರ ಊರಿನ ಗುರುಹಿರಿಯರ ಸಮ್ಮುಖದಲ್ಲಿ ತೊಗಲು ಗೊಂಬೆ ಆಟ ಪ್ರದರ್ಶವನ್ನು ಉದ್ಘಾಟಿಸಲಾಯಿತು. ರಾಮಪ್ಪ ಶಿಳ್ಳಿಕ್ಯಾತರ ತೊಗಲು ಗೊಂಬೆ ಆಟ ಪ್ರದರ್ಶನ ಮಾಡಿದರು.    ಈ ಸಂದರ್ಭದಲ್ಲಿ ಬಿಸರಹಳ್ಳಿ ಗ್ರಾಮದ ಜನ ಪ್ರತಿನಿದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Please follow and like us:
error